ಗೋಕಾಕ:ಶಿರೂರು ಡ್ಯಾಮ್‍ನಿಂದ ಮಾರ್ಕಂಡೇ ನದಿಗೆ ನೀರು ಬಿಡುಗಡೆ : ಜಿ.ಎಸ್.ಮಳಗಿ
ಶಿರೂರು ಡ್ಯಾಮ್‍ನಿಂದ ಮಾರ್ಕಂಡೇ ನದಿಗೆ ನೀರು ಬಿಡುಗಡೆ : ಜಿ.ಎಸ್.ಮಳಗಿ
ಗೋಕಾಕ ಜು 20 : ಸತತ ಮಳೆಯಿಂದಾಗಿ ಶಿರೂರು ಡ್ಯಾಮ್‍ನಿಂದ ಮಾರ್ಕಂಡೇ ನದಿಗೆ ನೀರು ಬಿಡುವುದಾಗಿ ನೀರಾವರಿ ಇಲಾಖೆಯವರು ತಿಳಿಸಿರುವ ಹಿನ್ನಲೆಯಲ್ಲಿ ಘಟಪ್ರಭಾ ನದಿಯ ದಡದಲ್ಲಿರುವ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕೆಂದು ತಹಶೀಲದಾರ ಜಿ.ಎಸ್.ಮಳಗಿ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು ಈಗಾಗಲೇ ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ಹೆಚ್ಚಾಗಿ ನೀರು ಹರಿದು ಬರುತ್ತಿದೆ. ಅಲ್ಲದೆ ಮಾರ್ಕಂಡೇ ನದಿಗೆ ಬಿಡುವ ನೀರು ಗೋಕಾಕದಲ್ಲಿ ಘಟಪ್ರಭಾ ನದಿಗೆ ಸೇರಿ ಹರಿಯುವದರಿಂದ ಪ್ರವಾಹ ಬರುವ ಭೀತಿ ಇದ್ದು ನದಿಯ ದಡದಲ್ಲಿರುವ ಗ್ರಾಮಸ್ಥರು ಎಚ್ಚರಿಕೆಯನ್ನು ವಹಿಸಬೇಕು. ಈಗಾಗಲೇ ಈ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ತಾಲೂಕಿನಲ್ಲಿ ಪ್ರವಾಹ ಮುನ್ನೆಚ್ಚರಿಕೆ ಸಲುವಾಗಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದ್ದು ತಹಶೀಲದಾರ ಕಚೇರಿ ಗೋಕಾಕ ದೂ, 08332-225073, ತಹಶೀಲದಾರ ಕಚೇರಿ ಮೂಡಲಗಿ 08334-251212 ತಾಲೂಕಾ ಪಂಚಾಯತಿ 08332-225063, ಹೆಸ್ಕಾಂ ಕಚೇರಿ ಗೋಕಾಕ 08332-228968, ಹೆಸ್ಕಾಂ ಕಚೇರಿ ಘಟಪ್ರಭಾ 08332-286240 ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.