ಖಾನಾಪುರ:ಬಿಇಓ ಮತ್ತು ಸಿಆರಪಿ ಮೇಲೆ ಸೂಕ್ತ ಕ್ರಮಕ್ಕೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಆಗ್ರಹ
ಬಿಇಓ ಮತ್ತು ಸಿಆರಪಿ ಮೇಲೆ ಸೂಕ್ತ ಕ್ರಮಕ್ಕೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಆಗ್ರಹ
ಖಾನಾಪುರ ಜು 21 : ಖಾನಾಪೂರದಲ್ಲಿ ಕನ್ನಡ ಶಿಕ್ಷಕ ಮಾಲತೇಶ.ಡಿ.ಸಿ ಗೆ ಫೋನಿನಲ್ಲಿ ಆವಾಜ್ ಹಾಕಿದ ಬಿಇಓ ಉಮಾ ಬರಗೂರ ಮತ್ತು ಮರಾಠಿ ಸಿಆರಪಿ ಜೆ.ಪಿ.ಪಾಟೀಲ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಕಾಶೀಮ ಹಟ್ಟಿಹೊಳಿ ಆಗ್ರಹಿಸಿದ್ದಾರೆ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಲೋಂಡಾ ಹತ್ತಿರದ ವರ್ಕಡ ಗ್ರಾಮದ ಮರಾಠಿ ಪ್ರಾಥಮಿಕ ಶಾಲೆಯ ಶಿಕ್ಷಕನಿಗೆ ಪೋನ್ ನಲ್ಲಿ ದಮ್ಕಿ ಹಾಕಿ ಕನ್ನಡ ಶಿಕ್ಷಕನಿಗೆ ಅವಮಾನಿಸಿದ್ದಾರೆ .
ಕಳೆದ ೮ ವರ್ಷದಿಂದ ಶಿಕ್ಷಕ ಮಾಲತೇಶ ಇವರು ಶಾಲೆಯ ಮುಖ್ಯ ಶಿಕ್ಷಕನ ಸ್ಥಾನವನ್ನು ವಹಿಸಿಕ್ಕೊಂಡಿದ್ದರು, ಆದರೆ ಮರಾಠಿ ಶಾಲೆಗೆ ಕನ್ನಡ ಶಿಕ್ಷಕ ಮುಖ್ಯ ಶಿಕ್ಷಕನಾಗಬಾರದೆಂದು ಸಿ ಆರ್ ಪಿ, ಜೆ . ಪಿ ಪಾಟೀಲನ ಹಠವಿಡಿದ್ದು , ಬಿಇಓ ಅವರಿಂದ ಮಾಲತೇಶ ಎಂಬ ಕನ್ನಡ ಶಿಕ್ಷಕನಿಗೆ ಬೇರೆಡೆ ನಿಯೋಜನೆ ಗೋಳಿಸಲು ಹುನ್ನಾರ ನಡೆಸಿದ್ದಾನೆಂದು ಕಾಶಿಮ ಆರೋಪಿಸಿದ್ದಾರೆ
ಈ ಸಂಬಂಧ ಸಿಆರಪಿ ಪಾಟೀಲ ಮತ್ತು ಮಾಲತೇಶ ನಡುವೆ ಹಲವು ಸಾರಿ ವಾಗ್ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ ಇಂದು ನಡೆದ ಬೆಳವಣಿಗೆಯನ್ನು ಖಂಡಿಸಿರುವ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಯುವ ಘಟಕದ ಅಧ್ಯಕ್ಷ ಕಾಶೀಮ ಹಟ್ಟಿಹೊಳಿ ಇಲಾಖೆ ಇವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.