ಘಟಪ್ರಭಾ:ಬಲಿಷ್ಠ ಭಾರತ ಕಟ್ಟುವ ಜವಾಬ್ದಾರಿ ಈಗಿನ ವಿದ್ಯಾರ್ಥಿಗಳ ಮೇಲಿದೆ : ಬಿ.ಎಸ್. ಉದಗಟ್ಟಿ
ಬಲಿಷ್ಠ ಭಾರತ ಕಟ್ಟುವ ಜವಾಬ್ದಾರಿ ಈಗಿನ ವಿದ್ಯಾರ್ಥಿಗಳ ಮೇಲಿದೆ : ಬಿ.ಎಸ್. ಉದಗಟ್ಟಿ
ಘಟಪ್ರಭಾ ಜು 21 : ಬಲಿಷ್ಠ ಭಾರತ ಕಟ್ಟುವ ಜವಾಬ್ದಾರಿ ಈಗಿನ ವಿದ್ಯಾರ್ಥಿಗಳ ಮೇಲಿದೆ. ಕೈಗಾರಿಕಾ ಕ್ಷೇತ್ರದ ವಿದ್ಯಾರ್ಥಿಗಳು ತಾಂತ್ರಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಅಂತ್ರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂದು ಸಂಸ್ಥೆಯ ನಿರ್ದೇಶಕರಾದ ಬಿ.ಎಸ್. ಉದಗಟ್ಟಿ ಹೇಳಿದರು.
ಗುರುವಾರದಂದು ಇಲ್ಲಿನ ಸರ್.ಎಮ್.ವಿಶ್ವೇಶ್ವರಯ್ಯಾ ಕೈಗಾರಿಕಾ ತರಬೇತಿ ಸಂಸ್ಥೆಯ 2016-2018 ನೇ ಸಾಲಿನ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಮಾತನಾಡುತ್ತ, ಕಲಿತ ವಿದ್ಯೆಯನ್ನು ತಮ್ಮ ಉಪಜೀವನಕ್ಕೆ ಉಪಯೋಗಿಸುವ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಕೂಡಾ ತಮ್ಮ ಆಸಕ್ತಿಯನ್ನು ತೋರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಹಾಗೂ ಸರ್ಕಾರದಿಂದ ಕೊಡಮಾಡಿದ ಮೂರು ಜನ ಎಸ್.ಸಿ/ಎಸ್.ಟಿ. ವಿದ್ಯಾರ್ಥಿಗಳಿಗೆ ಲ್ಯಾಪಟಾಪ ವಿತರಿಸಲಾಯಿತು.
ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರು ಹಾಗೂ ಘಟಪ್ರಭಾ ಪ್ರೆಸ್‍ಕ್ಲಬ್‍ದ ಅಧ್ಯಕ್ಷರಾದ ಜಿ.ಎಸ್.ರಜಪೂತ ಅವರಿಗೆ ಸನ್ಮಾನಿಸಲಾಯಿತು. ಸಂಸ್ಥೆಯಿಂದ ಸನ್2016-2018 ಸಾಲಿನ ಸರ್ಕಾರದ ಅಪ್ರೇಂಟಿಸ್ ತರಬೇತಿಗೆ ಆಯ್ಕೆಯಾದ 7 ಜನ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಅಣ್ಣಪ್ಪ ಹುನಗುಂದ ವಹಿಸಿದ್ದರು. ಉಪಾಧ್ಯಕ್ಷರಾದ ಆನಂದ ವಾಡೇದ, ನಿರ್ದೆಶಕರಾದ ಡಿ.ಪಿ.ಲಕ್ಷೇಟ್ಟಿ, ಎಸ್.ಡಿ.ಶಿಂದೋಳಿಮಠ, ಪ್ರಾಂಶುಪಾಲ ಎಸ್.ಎಸ್.ಹಿರೇಮಠ, ಜೆ.ಟಿ.ಓ ವಿ.ಎ.ನಾಯಿಕ, ಎಸ್.ಎಸ್.ಕಲ್ಯಾಣಿ, ವಿ.ಎ.ತೀರ್ಥ ಸೇರಿದಂತೆ ಕಾಲೇಜು ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು ಇದ್ದರು.
ಕಾರ್ಯಕ್ರಮವನ್ನು ಜೆ.ಟಿ.ಓ ಪಿ.ಎಮ್.ಗಾಡಿವಡ್ಡರ ನಿರೂಪಿಸಿದರು. ಪ್ರಾಂಶುಪಾಲ ಎಸ್.ಎಸ್.ಮಠದ ವಂದಿಸಿದರು.