ಮೂಡಲಗಿ:ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಪ್ರಮುಖವಾಗಿವೆ : ಬಾಲಶೇಖರ ಬಂದಿ
ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಪ್ರಮುಖವಾಗಿವೆ : ಬಾಲಶೇಖರ ಬಂದಿ
ಮೂಡಲಗಿ ಜು 21 : ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಪ್ರಮುಖವಾಗಿವೆ ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಯದ ಹಿರಿಯ ಗ್ರಂಥಪಾಲಕ ಬಾಲಶೇಖರ ಬಂದಿ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಗ್ರಂಥಾಲಯ ಹಾಗೂ ಎಸ್‍ಎಸ್‍ಆರ್ ಪ್ರೌಢ ಶಾಲೆಯ ಎನ್‍ಸಿಸಿ ಟ್ರೂಪ್‍ದೊಂದಿಗೆ ಶನಿವಾರ ಆಚರಿಸಿದ ವಿಶ್ವ ಓದು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪುಸ್ತಕಗಳ ಸ್ಥಾನವನ್ನು ಬೇರೆ ಯಾವ ಮಾಧ್ಯಮಗಳು ತುಂಬಲು ಸಾಧ್ಯವಿಲ್ಲ ಎಂದರು. ಮಹಾತ್ಮಾ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಡಾ. ಸರ್ವಪಲ್ಲಿ ರಾಧಾಕೃಷ್ಣನ್. ಅಮೇರಿಕಾದ ಅಬ್ರಾಹಿಂ ಲಿಂಕನ್, ಎಪಿಜಿ ಅಬ್ದುಲ್‍ಕಲಾಂ ಸೇರಿದಂತೆ ಜಗತ್ತಿನಲ್ಲಿ ಅನೇಕರನ್ನು ಸಾಧಕ ವ್ಯಕ್ತಿಗಳನ್ನಾಗಿ ರೂಪಿಸಿದ್ದು ಪುಸ್ತಕಗಳು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಇತರೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಕಬೇಕು ಎಂದರು.
ಜನರಲ್ಲಿ ಅದರಲ್ಲಿಯೂ ಯುವಜನತೆಯಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಜುಲೈ 21ರಂದು ವಿಶ್ವ ಓದು ದಿನಾಚರಣೆಯನ್ನು ಆಚರಿಸುತ್ತಿದ್ದು, ಮೊಬೈಲ್ ಹಾವಳಿಯಲ್ಲಿ ಓದುವ ಸಂಸ್ಕøತಿಯಿಂದ ವಿಮುಕರಾಗಬಾರದು ಎಂದರು.
ಎನ್‍ಸಿಸಿ ಟ್ರೂಪ್ ಕಮಾಂಡರ್ ರವಿ ಹೊಸಟ್ಟಿ ಪ್ರಾಸ್ತಾವಿಕ ಮಾತನಾಡಿ ಉತ್ತಮ ನಾಗರಿಕರನ್ನಾಗಿಸುವ ಎನ್‍ಸಿಸಿಯ ಕೆಡೆಟ್‍ಗಳು ವಿವಿಧ ವಿಷಯಗಳ ಜ್ಞಾನವನ್ನು ಪಡೆದುಕೊಳ್ಳುವುದು ಅವಶ್ಯವಿದೆ ಎಂದರು.
ಶಿಕ್ಷಕ ಯು.ಬಿ. ದಳವಾಯಿ, ಬಿ.ಎಂ. ಬರಗಾಲಿ, ಎಂ.ಎಸ್. ಲಮಾಣಿ ಇದ್ದರು.
ವಿದ್ಯಾರ್ಥಿಗಳಿಗೆ ವಿವಿಧ ಪುಸ್ತಕಗಳ, ದಿನಪತ್ರಿಕೆಗಳು, ನಿಯತಕಾಲಿಕಗಳು ತಿಳುವಳಿಕೆಯನ್ನು ನೀಡಿದರು.