RNI NO. KARKAN/2006/27779|Friday, October 18, 2024
You are here: Home » breaking news » ಮೂಡಲಗಿ:ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಬದುಕಿನ ಮೌಲ್ಯವನ್ನು ಕಲಿಸುತ್ತೇವೆ : ಚಿದಾನಂದ ಕುದರಿ

ಮೂಡಲಗಿ:ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಬದುಕಿನ ಮೌಲ್ಯವನ್ನು ಕಲಿಸುತ್ತೇವೆ : ಚಿದಾನಂದ ಕುದರಿ 

ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಬದುಕಿನ ಮೌಲ್ಯವನ್ನು ಕಲಿಸುತ್ತೇವೆ : ಚಿದಾನಂದ ಕುದರಿ

ಮೂಡಲಗಿ ಜು 21 : ವಿದ್ಯಾರ್ಥಿಗಳಿಗೆ ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬದುಕಿನ ಮೌಲ್ಯವನ್ನು ಕಲಿಸುತ್ತೇವೆ ಸಂಸ್ಕಾರಯುತ ಅಧ್ಯಯನ ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಹಳ್ಳೂರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಚಿದಾನಂದ ಕುದರಿ ಅಭಿಪ್ರಾಯಪಟ್ಟರು.

ಅವರು ಶನಿವಾರದಂದು ಇಲ್ಲಿಯ ಆರ್.ಡಿ.ಎಸ್ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ವಿದ್ಯಾರ್ಥಿ ಪ್ರತಿ ನಿಧಿಗಳಿಗೆ ಪ್ರತಿಜ್ಞೆ, ಭೋದನೆ ಹಾಗೂ ಕಾಲೇಜಿನ ಸಾಂಸ್ಕ್ರತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಇಂದಿನ ದಿನಗಳಲ್ಲಿ ಚಾರಿತ್ರ್ಯವಿಲ್ಲದ ಶಿಕ್ಷಣದ ವ್ಯವಸ್ಥೆಯಿಂದ ವಿದ್ಯಾರ್ಥಿಗಳ ಬದುಕು ಅಸ್ಥಿರಗೊಳ್ಳುತ್ತಿದೆ ಅದಕ್ಕಾಗಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವದರಿಂದ ಅವರ ಬದುಕಿನ ಆಧಾರ ಸ್ತಂಭ ಸ್ಥಿರಗೊಳ್ಳುವುದು ವಿದ್ಯಾರ್ಥಿಯ ಜೀವನ ತನ್ನ ಗುರಿ ಕಡೆಗೆ ಇರಬೇಕು. ಇಟ್ಟುಕೊಂಡ ಗುರಿ ತಲುಪಲು ನಿರಂತರ ಪ್ರಯತ್ನ ಮತ್ತು ಶೃದ್ಧೆ ಭಯ ಭಕ್ತಿಯಿಂದ ಅಧ್ಯಯನ ಮಾಡಿದರೆ ಮಾತ್ರ ನಾವು ಅಂದುಕೊಂಡುದ್ದನ್ನು ಸಾದಿಸಬಹುದು ಎಂದರು.

ಕಾಲೇಜಿನ ಪ್ರಾಚಾರ್ಯ ಸಂಜೀವ ವಾಲಿ ಮಾತನಾಡಿ, ಸಂಸ್ಥೆಯ ಅಡಿಯಲ್ಲಿ ನಡೆಯುವ ನಮ್ಮ ಪದವಿ ಪೂರ್ವ ಕಾಲೇಜು ಉತ್ತಮ ಗುಣಮಟ್ಟದಿಂದ ಕೂಡಿದ ಶಿಕ್ಷಣದಿಂದ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ನಮ್ಮ ಕಾಲೇಜಿನಲ್ಲಿ ಅದ್ಯಯನ ಮಾಡಿದ ವಿದ್ಯಾರ್ಥಿಗಳು ಗಣನೀಯವಾಗಿ ಸಾದನೆ ಮಾಡಿ ಅತಿಹೆಚ್ಚು ಸರಕಾರಿ ಕೆಲಸಗಳಲ್ಲಿ ತೊಡಗಿದ್ದು ಹೆಮ್ಮೆಯ ವಿಷಯ ಮತ್ತು ಇಂದಿನ ಶಿಕ್ಷಣದ ಪರೀಕ್ಷಾ ವ್ಯವಸ್ಥೆಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು ಅವಶ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಸಂತೋಷ ತ. ಪಾರ್ಶಿ ಮಾತನಾಡಿದರು. ಮಹಾಲಕ್ಷ್ಮೀ ಸೊಸಾಯಿಟಿಯ ನಿರ್ದೇಶಕರಾದ ಶಂಕರ ಮುರಗೋಡ, ರಮೇಶ ಪಾಟೀಲ, ಉಪನ್ಯಾಸಕರಾದ ಶಿವಾನಂದ ಸತ್ತಿಗೇರಿ, ಸಂಗಮೇಶ ಕುಂಬಾರ ಗಿರಿಮಲ್ಲ ನರಗುಂದ, ಸಂತೋಷ ಲಟ್ಟಿ, ಸುಭಾಸ ಮಾಲೋಜಿ. ಮತ್ತಿತರರು ಭಾಗವಹಿಸಿದ್ದರು.

ಗಂಗಾಧರ ಮನ್ನಾಪೂರ ನಿರೂಪಿಸಿದರು. ವಾಯ್.ಬಿ. ಕೋರಿಶೆಟ್ಟಿ ಸ್ವಾಗತಿಸಿದರು.ರಾಚಯ್ಯ ನಿರ್ವಾಣಿ, ವಂದಿಸಿದರು. ಕಾರ್ಯಕ್ರಮದಲ್ಲಿ ಪಿ.ಯು. ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತಿಸಿ, ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋದಿಸಲಾಯಿತು.

Related posts: