RNI NO. KARKAN/2006/27779|Tuesday, November 5, 2024
You are here: Home » breaking news » ಗೋಕಾಕ:ಅಗಸ್ಟ್.6 ರಿಂದ ಅಗಸ್ಟ್.10 ವರೆಗೆ ಐದು ದಿನಗಳ ಕಾಲ ಗ್ರಾಮ ದೇವತೆ ಜಾತ್ರಾ ಮಹೋತ್ಸವ

ಗೋಕಾಕ:ಅಗಸ್ಟ್.6 ರಿಂದ ಅಗಸ್ಟ್.10 ವರೆಗೆ ಐದು ದಿನಗಳ ಕಾಲ ಗ್ರಾಮ ದೇವತೆ ಜಾತ್ರಾ ಮಹೋತ್ಸವ 

ಅಗಸ್ಟ್.6 ರಿಂದ ಅಗಸ್ಟ್.10 ವರೆಗೆ ಐದು ದಿನಗಳ ಕಾಲ ಗ್ರಾಮ ದೇವತೆ ಜಾತ್ರಾ ಮಹೋತ್ಸವ

ಬೆಟಗೇರಿ ಜು 21 : ಪ್ರತಿ ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ದೇವತೆ ದ್ಯಾಮವ್ವದೇವಿಯ ಈ ಸಲದ ಜಾತ್ರಾ ಮಹೋತ್ಸವ ಮುಂಬರುವ ಇದೇ ಅಗಸ್ಟ್.6 ರಿಂದ ಅಗಸ್ಟ್.10 ರವರೆಗೆ ಜರುಗಲಿದೆ. ಈ ಭಾರಿಯ ಜಾತ್ರಾ ಮಹೋತ್ಸವದ ಯಶಸ್ವಿಗೆ ಸ್ಥಳೀಯ ಎಲ್ಲ ಸಮುದಾಯದ ಹಿರಿಯರು, ಯುವಕರ ಹಾಗೂ ಗ್ರಾಮಸ್ಥರ ಸಹಾಯ ಸಹಕಾರ ಅತ್ಯಂತ ಅವಶ್ಯಕವಾಗಿದೆ ಎಂದು ಸ್ಥಳೀಯ ವೇದಮೂರ್ತಿ ಈರಯ್ಯ ಹಿರೇಮಠ ಹೇಳಿದರು.
ಗ್ರಾಮದ ಗ್ರಾಮ ದೇವತೆ ದ್ಯಾಮವ್ವದೇವಿಯ ದೇವಸ್ಥಾನದಲ್ಲಿ ಶನಿವಾರ ಜುಲೈ.21 ರಂದು ಪ್ರಸಕ್ತ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಉದ್ಘಾಟನೆ ಮತ್ತು ವಿತರಣೆ ಪೂಜಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಮಂತ್ರಣ ಪತ್ರಿಕೆ ವಿತರಣೆ ಮಾಡಿ ಮಾತನಾಡಿ, ಶಾಂತಿ, ಭಯ, ಭಕ್ತಿ, ಸೌಹಾರ್ದತೆ ಸಡಗರದಿಂದ ಜಾತ್ರಾ ಮಹೋತ್ಸವ ಆಚರಿಸಬೇಕೆಂದು ಸ್ಥಳೀಯರಲ್ಲಿ ಮನವಿ ಮಾಡಿಕೊಂಡರು.
ಇಲ್ಲಿಯ ಗ್ರಾಮ ದೇವತೆ ದ್ಯಾಮವ್ವದೇವಿಯ ದೇವಸ್ಥಾನದಲ್ಲಿಯ ಶ್ರೀದೇವಿಯ ಭಾವ ಚಿತ್ರ ಮೂರ್ತಿ ಮತ್ತು ಆಮಂತ್ರಣ ಪತ್ರಿಕೆ ಪೂಜೆ ನೆರವೇರಿಸಿದ ಬಳಿಕ ಸಿಹಿ ವಿತರಿಸಲಾಯಿತು. ಸ್ಥಳೀಯ ಗ್ರಾಮ ದೇವತೆ ದ್ಯಾಮವ್ವದೇವಿಯ ಜಾತ್ರಾ ಮಹೋತ್ಸವ ಆಚರಣೆ ಸಮಿತಿಯ ಹಿರಿಯರಾದ ಲಕ್ಷ್ಮಣ ಸೋಮನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಿವಾಜಿ ನೀಲಣ್ಣವರ, ರಾಮಣ್ಣ ಬಳಿಗಾರ, ಶ್ರೀಶೈಲ ಗಾಣಗಿ, ಮುತ್ತೆಪ್ಪ ವಡೇರ, ರಾಜು ಪತ್ತಾರ, ಬಾಳಪ್ಪ ಬಡಿಗೇರ, ವಿಠಲ ಕೋಣಿ, ಸುರೇಶ ಬಡಿಗೇರ, ಸದಾಶಿವ ಕುರಿ, ಲಕ್ಷ್ಮಣ ಚಂದರಗಿ, ವಿಠಲ ಚಂದರಗಿ, ಬಸವರಾಜ ಕುರಬೇಟ, ಹನುಮಂತ ವಡೇರ, ಬಸವರಾಜ ಪಣದಿ, ವೀರನಾಯ್ಕ ನಾಯ್ಕರ, ವಿಠಲ ಬಡಿಗೇರ, ಮಹಾದೇವ ಕಂಬಾರ, ಮುತ್ತೆಪ್ಪ ಕನೋಜಿ, ಬಸವರಾಜ ಬೆಟಗೇರಿ ಸೇರಿದಂತೆ ಸ್ಥಳೀಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಶ್ರೀದೇವಿಯ ಭಕ್ತರು, ಇತರರು ಇದ್ದರು.

Related posts: