ಘಟಪ್ರಭಾ:ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ವಿತರಣೆ
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ವಿತರಣೆ
ಘಟಪ್ರಭಾ ಜು 23 : ಸಮೀಪದ ಶಿಂದಿಕುರಬೇಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಊಟದ ತಟ್ಟೆಗಳನ್ನು ವಿತರಿಸಲಾಯಿತು.
ಗ್ರಾಮದ ಶಿಕ್ಷಣ ಪ್ರೇಮಿಗಳಾದ ನಾಗೇಶ ಕುರಜಿಂಗಗೋಳ ಹಾಗೂ ರಮೇಶ ಕುರಜಿಂಗಗೋಳ ಅವರು ವಿದ್ಯಾರ್ಥಿಗಳಿಗೆ ನೂರು ತಟ್ಟೆಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕೆಬಿಎಸ್ ಶಾಲೆಯ ಪ್ರಧಾನ ಗುರುಮಾತೆ ಆರ್.ಎಸ್.ಸೊಗಲಿ,ಕೆಜಿಎಸ್ ಶಾಲೆಯ ಪ್ರಧಾನ ಗುರುಮಾತೆ ಜೆ.ಆರ್.ಕುಲಕರ್ಣಿ,ಶಿಕ್ಷಕರಾದ ಸಿ.ಬಿ.ಡೂಗನವರ,ಎಸ್.ಎಫ್.ಭಜಂತ್ರಿ,ಆರ್.ಎ.ಪಾಟೀಲ, ಎ.ಕೆ.ಕುಪ್ಪಸಗೌಡರ,ಎಸ್.ಬಿ.ನಾಯಿಕ ಸೇರಿದಂತೆ ಇತರರು ಇದ್ದರು.