RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ವೈಯಕ್ತಿಕ ಸೌಲಭ್ಯಗಳಡಿಯಲ್ಲಿ ಅರ್ಜಿಗಳ ಆಹ್ವಾನ

ಗೋಕಾಕ:ವೈಯಕ್ತಿಕ ಸೌಲಭ್ಯಗಳಡಿಯಲ್ಲಿ ಅರ್ಜಿಗಳ ಆಹ್ವಾನ 

ವೈಯಕ್ತಿಕ ಸೌಲಭ್ಯಗಳಡಿಯಲ್ಲಿ ಅರ್ಜಿಗಳ ಆಹ್ವಾನ
ಗೋಕಾಕ ಜು 23 : ತಾಲೂಕಿನ ಕೊಣ್ಣೂರ ಪುರಸಭೆಯಲ್ಲಿ ಸನ್-2018-19 ನೇ ಸಾಲಿನ ಪುರಸಭೆ ನಿಧಿ ಮತ್ತು ಎಸ್.ಎಫ್.ಸಿ ಅನುದಾನದ ಶೇ. 24.10 ರಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಹಾಗೂ ಶೇ.7.25 ರ ಇತರೆ ಬಡ ಜನಾಂಗದವರಿಗೆ ಮತ್ತು ಶೇ. 3 ರ ಅಂಗವಿಕಲರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ವಿವಿಧ ವೈಯಕ್ತಿಕ ಸೌಲಭ್ಯಗಳಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವೈಯಕ್ತಿಕ ಸೌಲಭ್ಯಗಳಾದ ಅಡಿಗೆ ಅನಿಲ ಸಂಪರ್ಕ ನೀಡುವುದು, ಎಸ್.ಬಿ.ಎಂ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣದ 3 ನೇ ಕಂತನ ಸಹಾಯಧನ ನೀಡುವುದು, ಸಣ್ಣ ಉದ್ದಿಮೆದಾರರಿಗೆ ಸಹಾಯಧನ, ಅಂಗವಿಕಲರಿಗೆ ತ್ರಿಚಕ್ರ ವಾಹನ ಪೂರೈಸುವುದು ಮತ್ತು ಕ್ರೀಡಾ ಚಟುವಟಿಕೆಗಳಿಗಾಗಿ ಪ್ರೋತ್ಸಾಹನ ಧನ ನೀಡುವುದಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಿದ್ದು, ಕೊಣ್ಣೂರ ಪುರಸಭೆಯ ವ್ಯಾಪ್ತಿಯ ಅರ್ಹ ಬಡ ಕುಟುಂಬದವರು ಅಗಸ್ಟ್ 04 ರೊಳಗಾಗಿ ಸಂಬಂಧ ಪಟ್ಟ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ವಿಷಯ ನಿರ್ವಾಹಕರಿಂದ ಹಾಗೂ ಕಾರ್ಯಾಲಯದ ವೆಬ್‍ಸೈಟ್ ವಿಳಾಸ www.konnurtown.mrc.gov.in ನಲ್ಲಿ ಮಾಹಿತಿ ಪಡೆಯಬಹುದೆಂದು ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related posts: