RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಅವೈಜ್ಞಾನಿಕ ನೀರಿನ ಕರ : ಅಶೋಕ ಪೂಜಾರಿ ನೇತೃತ್ವದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿದ ಮಹಿಳೆಯರು

ಗೋಕಾಕ:ಅವೈಜ್ಞಾನಿಕ ನೀರಿನ ಕರ : ಅಶೋಕ ಪೂಜಾರಿ ನೇತೃತ್ವದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿದ ಮಹಿಳೆಯರು 

ಅವೈಜ್ಞಾನಿಕ ನೀರಿನ ಕರ : ಅಶೋಕ ಪೂಜಾರಿ ನೇತೃತ್ವದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿದ ಮಹಿಳೆಯರು
ಗೋಕಾಕ ಜು 24: ನಗರಸಭೆಯಿಂದ ಅವೈಜ್ಞಾನಿಕ ವಾಗಿ ನೀರಿನ ಕರ ಹೆಚ್ಚಿಸಿರುವದನ್ನು ಖಂಡಿಸಿ ನಾಗರಿಕರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಯಿಸಿದರು

ಬಿಜೆಪಿ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಮಂಗಳವಾರದಂದು ಮಧ್ಯಾಹ್ನ ನಗರಸಭೆ ಕಾರ್ಯದಲ್ಲಿ ಸೇರಿದ ಸೋಮವಾರ ಪೇಠ ಮತ್ತು ಬಣಗಾರ ಗಲ್ಲಿಯ ನೂರಾರು ಮಹಿಳೆಯರು ನಗರಸಭೆ ಅಧಿಕಾರಿಗಳು ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿ ಪೌರಾಯುಕ್ತ ಎಂ ಎಚ ಅತ್ತಾರ ಅವರಿಗೆ ಮನವಿ ಅರ್ಪಿಸಿದರು

ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅಶೋಕ ಪೂಜಾರಿ ನಗರಸಭೆ ಮತ್ತು ಕರ್ನಾಟಕ ಮೂಲಸೌಕರ್ಯ ಸರಬರಾಜು ಇಲಾಖೆ ಅತ್ಯಂತ ಕಡಿಮೆ ದರದಲ್ಲಿ ನೀರು ಸರಬರಾಜು ಮಾಡುವ ಜವಾಬ್ದಾರಿಯನ್ನು ಹೋತಿದ್ದರು ಈಗ ಪ್ರತಿ ತಿಂಗಳು ಒಂದು ಮನೆಗೆ ಕೇವಲ 8 ಸಾವಿರ ಲೀಟರ್ ನೀರು ನೀಡಲು ಮುಂದಾಗಿದ್ದು ಅವೈಜ್ಞಾನಿಕವಾಗಿದೆ ಮೀ ಪ್ರಸ್ತುತ ನಿಗದಿ ಪಡೆಸಿರುವ ನೀರಿನ ಕರವು ಸಹ ದುಬಾರಿಯಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ

ನಗರಸಭೆ ಈ ಬಗ್ಗೆ ಕೂಡಲೇ ಗಮನ ಹರಿಸಿ ಕನಿಷ್ಠ ನೀರಿನ ಬಳಕೆ ಪ್ರಮಾಣವನ್ನು 40 ಸಾವಿರ ಲೀಟರ್ ಗೆ ಹೆಚ್ಚಿಸಿ ವರ್ಷಕ್ಕೆ 1400 ರೂ ಕರ ದಾಟದಂತೆ ಕ್ರಮ ಕೈಗೊಳಬೇಕು . ನಗರದ ಸೋಮವಾರ ಪೇಠ , ಅಂಬಿಗೇರ ಗಲ್ಲಿ ಮತ್ತು ಬಣಗಾರ ಗಲ್ಲಿಗಳಲ್ಲಿಯ ರಸ್ತೆಗಳ ಅಭಿವೃದ್ಧಿ ಕಾರ್ಯಗಳನ್ನು ಕೂಡಲೇ ಕೈಗೋಳಬೇಕೆಂದು ಆಗ್ರಹಿಸಿದರು . ಬರುವ ತಿಂಗಳು 5 ರೋಳಗೆ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ ಉಗ್ರ ಹೋರಾಟ ಮಾಡಲಾಗುದೆಂದು ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಚೇರಮನ್ ಭಗವಂತ ಹೂಳಿ , ಸದಸ್ಯರಾದ ಭೀಮಶಿ ಭರಮಣ್ಣವರ , ಚಂದ್ರಕಾಂತ ಈಳಿಗೇರ , ಗೀರಿಶ ಖೋತ , ಸಹಾಯ ಅಭಿಯಂತರ ತಡಸಲೂರ , ಮುಖಂಡರಾದ ಪ್ರಕಾಶ ದೀಕ್ಷಿತ, ಶ್ರೀಶೈಲ ಪೂಜಾರಿ, ರಾಜು ಮಾಡಲಗಿ, ಸತ್ಯಪ್ಪ ತಟ್ಟಿಮನಿ, ಬಾಳು ಅಂಬಿ, ನಾಗು ದೇಸಾಯಿ, ಆನಂದ ಸಂಕಾಜಿ, ಮಹೇಶ ಮಠಪತಿ, ರಾಜು ನಂದಗಾಂವಿ, ಶ್ರೀಮತಿ ಲಕ್ಷ್ಮವ್ವ ಅಂಬಿ, ಶ್ರೀಮತಿ ಗಂಗವ್ವ ಮುತ್ನಾಳ, ಶ್ರೀಕಾಂತ ಜಾಗಟಿಹಾಳ, ಪ್ರದೀಪ ಪೂಜಾರಿ, ವಿಜಯ ಕೋಳಿ, ಶಂಕರ ಕಾಳಮ್ಮಗುಡಿ, ರವಿ ಮಡಿವಾಳರ ಮುಂತಾದವರು ಉಪಸ್ಥಿತರಿದ್ದರು.

Related posts: