RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಳಪೆ ಮಟ್ಟದ ಕಾಮಗಾರಿ ಗ್ರಾಮಸ್ಥರ ಆರೋಪ

ಗೋಕಾಕ:ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಳಪೆ ಮಟ್ಟದ ಕಾಮಗಾರಿ ಗ್ರಾಮಸ್ಥರ ಆರೋಪ 

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಳಪೆ ಮಟ್ಟದ ಕಾಮಗಾರಿ ಗ್ರಾಮಸ್ಥರ ಆರೋಪ

ಗೋಕಾಕ ಜು 27 : ತಾಲೂಕಿನ ಗ್ರಾಮ ಪಂಚಾಯತಗಳಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬರುವ ಬಹುತೇಕ ಕಾಮಗಾರಿಗಳು ಕಳಪೆ ಮಟ್ಟದ ಕಾಮಗಾರಿಗಳು ನಡೆದಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಅವರು, ಶುಕ್ರವಾರದಂದು ತಾಲೂಕಿನ ಖನಗಾಂವ ಗ್ರಾಮಸ್ಥರು ಪತ್ರಿಕಾ ಪ್ರಕಟಣೆಯ ಮೂಲಕ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಖನಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯ ಗುಡಜನವರ ಮನೆಯಿಂದ ಜಗಜಂಪಿಯವರ ಮನೆಯ ವರೆಗೆ (ಮಿಡಕನಟ್ಟಿ ರಸ್ತೆ) ಸಂಪೂರ್ಣ ಕಳಪೆ ಮಟ್ಟದ ರಸ್ತೆ ಕಾಮಗಾರಿ ನಡೆದಿವೆ ಎಂದು ದೂರಿದ್ದಾರೆ.
ಈ ಕಳಪೆ ಕಾಮಗಾರಿಗಳನ್ನು ಸಂಭಂದಪಟ್ಟ ಎಲ್ಲ ಪಂಚಾಯತಗಳ ಪಿಡಿಓ ಹಾಗೂ ತಾಲೂಕಾ ಪಂಚಾಯತ ಅಧಿಕಾರಿಗಳು ಈಬಗ್ಗೆ ಪರಿಶೀಲನೆ ಮಾಡದೇ ಕಾಮಗಾರಿಗಳ ಬಿಲ್ಲು ಪಾವತಿ ಮಾಡುತ್ತಿರವದು ತರವಲ್ಲ ಕಳಪೆ ಕಾಮಗಾರಿಗಳನ್ನು ತಡೆಗಟ್ಟಿ ಗುಣ ಮಟ್ಟ ಕಾಮಗಾರಿಗಳನ್ನು ಮಾಡಲು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಗ್ರಾಮಸ್ಥರು ಒತ್ತಾಯಿಸುತ್ತ ಬಂದಿದ್ದಾರೆ. ಆದರೆ ಈ ವರೆಗೆ ಕಳಪೆ ಕಾಮಗಾರಿಗಳು ನಿಂತಿಲ್ಲ ಎಂದು ಖಾನಗಾಂವ ಗ್ರಾಮಸ್ಥರು ಅಧಿಕಾರಿಗಳ ಮೇಲೆ ದೂರು ನೀಡಲು ಮುಂದಾಗಿದ್ದು, ಸಂಭಂದಪಟ್ಟ ಅಧಿಕಾರಿಗಳು ಕೂಡಲೇ ಎಚ್ಚಡತ್ತುಕೊಂಡು ಗುಣಮಟ್ಟದ ಕಾಮಗಾರಿಗಳನ್ನು ಮಾಡಲು ಸೂಚನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Related posts: