ಬೈಲಹೊಂಗಲ:ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಸೂಕ್ತ ವೇದಿಕೆ ಪ್ರತಿಭಾ ಕಾರಂಜಿ : ಎಮ್.ಎಫ್ ಮೂರಗೋಡ
ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಸೂಕ್ತ ವೇದಿಕೆ ಪ್ರತಿಭಾ ಕಾರಂಜಿ : ಎಮ್.ಎಫ್ ಮೂರಗೋಡ
ನೇಗಿನಹಾಳ ಜು 27 : ವಿದ್ಯಾರ್ಥಿಗಳಲ್ಲಿರುವ ವಿಭಿನ್ನ ಕೌಶಲ್ಯಗಳ ಹೊರತರಲು ಇತಂಹ ಕಾರ್ಯಕ್ರಮಗಳ ಆಯೋಜಿಸುತ್ತಿರುವುದರಿಂದ ಅವರಲ್ಲಿರುವ ವಿವಿಧ ವಿಶೇಷ ಸಾಮಥ್ರ್ಯಗಳ ಹೊರತರಲು ಸಾಧ್ಯವಾಗುವುದು ಎಂದು ಡಿ.ಬಿ ಇನಾಮದಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಮ್.ಎಫ್ ಮೂರಗೋಡ ಹೇಳಿದರು.
ಗ್ರಾಮದ ಡಿ.ಬಿ ಇನಾಮದಾರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ಧ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಮುಖ್ಯ ಅತಿಥಿಗಲಾಗಿ ಭಾಗವಹಿಸಿ ಮಾತನಾಡಿದರು. ಇವುಗಳಿಂದ ಗೆಲವು ಸೂಲುಗಳ ಮಹತ್ವ ಅರಿತು ವಿದ್ಯಾಭ್ಯಾಸ, ಕ್ರೀಡೆ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸಲು ಸಹಾಯಕಾರಿಯಾಗುವುದು ಎಂದರು. ನೇಗಿನಹಾಳ, ಕೆಸರಕೋಪ್ಪ, ಬಸವನಗರ, ಕುರಗುಂದ, ಹೊಳಿಹೂಸುರ ಗ್ರಾಮಗಳ ಪ್ರಾಥಮಿಕ ಶಾಲೆಗಳಿಂದ ಆಗಮಿಸಿದ್ದ ಸುಮಾರು 450ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೌಢಶಾಲೆಯ ಉಪಾದ್ಯಕ್ಷ ಮಲ್ಲನಗೌಡ ಪಾಟೀಲ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಎ.ಪಿ.ಎಮ್.ಸಿ ನಿರ್ದೇಶಕ ಬಿ.ಟಿ ಖಂಡಪ್ಪನವರ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಮುಖ್ಯ ಅದ್ಯಾಪಕ ಪಿ.ಡಿ ದಿವಾಣದ ಅವರನ್ನು ಸತ್ಕರಿಸಲಾಯಿತ್ತು. ಸಿ.ಆರ್.ಪಿ ಆಯ್.ಬಿ ಹಿರೇಮಠ, ಪ್ರೌಢಶಾಲೆ ಮುಖ್ಯದ್ಯಾಪಕ ಚಂದ್ರಶೇಖರ ಮೆಳವಂಕಿ ಸ್ವಾಗತಿಸಿದರು. ಶಿಕ್ಷಕ ಎಮ್.ಆರ್ ತಿಗಡಿ ನಿರೂಪಿಸಿದರು, ಎ.ಬಿ ರುದ್ರಾಪೂರ ವಂದಿಸಿದರು.