ಮೂಡಲಗಿ: ಸಂಭ್ರಮದ ಹಡಪದ ಅಪ್ಪಣ್ಣ ಜಯಂತಿ
ಮೂಡಲಗಿಯಲ್ಲಿ ಸಂಭ್ರಮದ ಹಡಪದ ಅಪ್ಪಣ್ಣ ಜಯಂತಿ
ಮೂಡಲಗಿ ಜು 27 : ಸ್ಥಳೀಯ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸಮಗ್ರ ಅಭಿವೃದ್ದಿ ಸಂಘದಿಂದ ಅವಿರಳ ಜ್ಞಾನಿ ನಿಜಸುಖಿ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವನ್ನು ಶುಕ್ರವಾರ ಅದ್ದೂರಿಯಿಂದ ಆಚರಿಸಲಾಯಿತು.
ಸರ್ಕಾರಿ ಕನ್ನಡ ಶಾಲೆಯ ಆವರಣದಲ್ಲಿ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮಹಿಳೆಯರು ಕುಂಭ ಆರತಿಯೊಂದಿಗೆ ಹಡಪದ ಅಪ್ಪಣ್ಣ ಭಾವಚಿತ್ರ ಮೆರವಣಿಗೆಯಲ್ಲಿ ಪಾಲ್ಗೋಂಡರು. ಯುವಕರು ಮಳೆಯನ್ನು ಲೆಕ್ಕಿಸದೇ ಡಾಲ್ಬಿಯ ಸಂಗೀತಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮೆರವಣಿಗೆಯೂ ಪಟ್ಟಣದ ಕಲ್ಮೇಶ್ವರ ವೃತ್ತ, ಚೆನ್ನಮ್ಮ ವೃತ್ತ, ಕರೆಮ್ಮ ವೃತ್ತ, ಬಸವೇಶ್ವರ ವೃತ್ತ, ಸಂಗಪ್ಪ ವೃತ್ತ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿತು.
ಸಂದರ್ಭದಲ್ಲಿ ಮಾಹಿತಿಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಈರಪ್ಪ ಬನ್ನೂರ, ಪ್ರಕಾಶ ಈರಪ್ಪನ್ನವರ, ಹಡಪದ ಅಪ್ಪಣ್ಣ ಸಮಾಜ ಸಮಗ್ರ ಅಭಿವೃದ್ದಿ ಸಂಘದ ಅಧ್ಯಕ್ಷ ಶಿವಬಸು ಸುಣಧೋಳಿ, ಉಮೇಶ ಹಡಪದ, ಶಿವಬೋದ ಉದಗಟ್ಟಿ, ಶಿವಬಸು ಕೊರೆನ್ನವರ, ಮಹಾಂತೇಶ ಹಡಪದ, ಚೆನ್ನಪ್ಪ ನಾವಿ, ಶಿವಪ್ಪ ಹಡಪದ, ಸಿದ್ಲಿಂಗಪ್ಪ ಯರಗಟ್ಟಿ ಮತ್ತು ಸರ್ವಧರ್ಮದ ಸಮಾಜ ಬಾಂಧವರು ಭಾಗವಹಿಸಿದ್ದರು.