RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ರಾಜ್ಯ, ರಾಷ್ಟ್ರದ ಗಮನ ಸೆಳೆಯಲು ಸ್ಮಶಾನದಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮ : ಶಾಸಕ ಸತೀಶ

ಬೆಳಗಾವಿ:ರಾಜ್ಯ, ರಾಷ್ಟ್ರದ ಗಮನ ಸೆಳೆಯಲು ಸ್ಮಶಾನದಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮ : ಶಾಸಕ ಸತೀಶ 

ರಾಜ್ಯ, ರಾಷ್ಟ್ರದ ಗಮನ ಸೆಳೆಯಲು ಸ್ಮಶಾನದಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮ : ಶಾಸಕ ಸತೀಶ

ಬೆಳಗಾವಿ ಜು 27: ಮಾನವ ಬಂಧುತ್ವ ವೇದಿಕೆ ವತಿಯಿಂದ ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಇಲ್ಲಿಯ ಸದಾಶಿವ ಸ್ಮಶಾನದಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ‌ ಒಂದು ವಾರಗಳಿಂದ ಗ್ರಹಣದ ಬಗ್ಗೆ ಚರ್ಚೆ ನಡೆಯುತ್ತಿದೆ.ಗ್ರಹಣ ಪರ, ವಿರೋಧ ಅನೇಕರು ವಾದ ಮಾಡುತ್ತಾರೆ.ಜನರನ್ನು ಮೌಢ್ಯದಿಂದ ಹೊರ ಬರಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಾಸ್ತ್ರದಂತೆ ಊಟ ಮಾಡುವಂತಿಲ್ಲ, ಕುಡಿಯುವ ನೀರನ್ನು ಚೆಲ್ಲುವಂತೆ ಹೇಳುತ್ತಾರೆ. ವಿಜ್ಞಾನದಲ್ಲಿ ಗ್ರಹಣವೊಂದು ಸಹಜ ಕ್ರಿಯೆ ಎಂದು ಹೇಳುತ್ತಾರೆ.
ನಮ್ಮ ದೇಶವನ್ನು ಅನೇಕ ವರ್ಷಗಳಿಂದ ಶಾಸ್ತ್ರ ಆಳುತ್ತಿದೆ‌. 10 ರೂಪಾಯಿ ಪಂಚಾಂಗ ನಮ್ಮನ್ನು ಆಳುತ್ತಿದೆ. ಸರ್ಕಾರ ಕೂಡ ಗ್ರಂಥ ಹೇಳಿದಂತೆ ನಡೆದುಕೊಳ್ಳುತ್ತಿದೆ. ಕಡಿಮೆ ಅಂತರದಿಂದ ಗೆದ್ದಿದ್ದಕ್ಕೆ ಅನೇಕ ಊಹಾಪೋಹ ಹುಟ್ಟಿಕೊಂಡಿವೆ. ಕಡಿಮೆ ಹಣ ಖರ್ಚು, ಮತದಾರ ಕಡೆ ಹೋಗದೆ ಗೆಲ್ಲಿಸಿದ್ದಾರೆ. ಇದು ಭಾರತ ದೇಶದಲ್ಲಿ ಪ್ರಥಮ ಪ್ರಯೋಗವಾಗಿದೆ. ಹೆಚ್ಚು ಮತ ಪಡೆಯೋದು ನನಗೆ ಗೊತ್ತು. 
ನಮ್ಮ ಅಕ್ಕಪಕ್ಕದ ಕ್ಷೇತ್ರದ ಮನೆ ಮಂದಿಯಲ್ಲ ಚುನಾವಣೆ ಪ್ರಚಾರ ಮಾಡಿದ್ದಾರೆ. ಮುಂದಿನ ಬಾರಿ ನಮ್ಮ ಶಕ್ತಿ ಏನು ಎಂದು ತೋರಿಸುತ್ತೇವೆ ಎಂದರು.
ಜೇನು ಗುಡಿಗೆ ಕಲ್ಲು ಹೊಡೆದಿದ್ದೇವೆ ಎಂದು ಈ ಹಿಂದೆ ಹೇಳಿದ್ದೆ. ಲಿಂಬೆಕಾಯಿ ಕೈಯಲ್ಲಿ ಹಿಡಿದಿದ್ದಕ್ಕೆ ಅಪಪ್ರಚಾರ ಮಾಡಲಾಗುತ್ತೆ.ಆದರೆ ಲಿಂಬೆಕಾಯಿ ವಾಸನೆಯಿಂದ ಅನೇಕ ಆರೋಗ್ಯ ಉಪಯೋಗವಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಮಾನಸಿಕ ಗೂಲಾಮಗಿರಿಯಿಂದ ಹೊರ ಬರಬೇಕು. ಅಂಬೇಡ್ಕರ್ ಸಾಮಾಜಿಕ ನ್ಯಾಯದ ರಥ ಮುಂದುವರೆಸಿದ್ದೇವೆ. ರಾಜ್ಯ, ರಾಷ್ಟ್ರದ ಗಮನ ಸೆಳೆಯಲು ಸ್ಮಶಾನದಲ್ಲಿ ಮೌಢ್ಯ ವಿರೋಧಿ ಕಾರ್ಯಕ್ರಮ ನಡೆಸಿದ್ದೇವೆ ಎಂದರು. 

Related posts: