RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ನಮ್ಮ ನಿಜ ಸ್ವರೂಪ ಹಾಗೂ ಶಕ್ತಿ ಸಾಮರ್ಥ್ಯವನ್ನು ತಿಳಿಸಿಕೊಡುವವರೇ ಗುರು : ಶ್ರೀ ಡಾ|| ಸಿದ್ದರಾಮ ಮಹಾಸ್ವಾಮಿಜೀ

ಗೋಕಾಕ:ನಮ್ಮ ನಿಜ ಸ್ವರೂಪ ಹಾಗೂ ಶಕ್ತಿ ಸಾಮರ್ಥ್ಯವನ್ನು ತಿಳಿಸಿಕೊಡುವವರೇ ಗುರು : ಶ್ರೀ ಡಾ|| ಸಿದ್ದರಾಮ ಮಹಾಸ್ವಾಮಿಜೀ 

ನಮ್ಮ ನಿಜ ಸ್ವರೂಪ ಹಾಗೂ ಶಕ್ತಿ ಸಾಮರ್ಥ್ಯವನ್ನು ತಿಳಿಸಿಕೊಡುವವರೇ ಗುರು : ಶ್ರೀ ಡಾ|| ಸಿದ್ದರಾಮ ಮಹಾಸ್ವಾಮಿಜೀ

ಗೋಕಾಕ ಜು 28 : ನಮ್ಮ ನಿಜ ಸ್ವರೂಪ ಹಾಗೂ ಶಕ್ತಿ ಸಾಮರ್ಥ್ಯವನ್ನು ತಿಳಿಸಿಕೊಡುವವರೇ ಗುರುವೆಂದು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಶ್ರೀ ಡಾ|| ಸಿದ್ದರಾಮ ಮಹಾಸ್ವಾಮಿಜೀ ಹೇಳಿದರು.
ಶುಕ್ರವಾರದಂದು ರಾತ್ರಿ ನಗರದ ಶೂನ್ಯ ಸಂಪಾದನಾ ಮಠದಲ್ಲಿ ಬಸವೇಶ್ವರ ಧರ್ಮ ಪ್ರಚಾರಕ ಸಮಿತಿ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಮತ್ತು ವೀರಶೈವ ಜಾಗೃತ ಮಹಿಳಾ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 125ನೇ ಮಾಸಿಕ ಶಿವಾನುಭಗೋಷ್ಠಿಯ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ಭಾರತೀಯ ಸಂಸ್ಕøತಿಯಲ್ಲಿ ಗುರುವಿಗೆ ಬಹುದೊಡ್ಡ ಸ್ಥಾನ ನೀಡಿದೆ. ಆಧ್ಯಾತ್ಮದ ಗುರುಗಳನ್ನು ನಂಬುವುದರಿಂದ ಸಕಲ ದು:ಖಗಳನ್ನು ದೂರಮಾಡಿ ನಿಜ ಆನಂದವನ್ನು ಪಡೆಯಬಹುದು. ಯಾವುದು ಬಂಧನ ಮುಕ್ತಗೊಳಿಸುತ್ತಿದೆಯೋ ಅದುವೇ ನಿಜವಾದ ವಿದ್ಯೆಯಾಗಿದ್ದು, ಜ್ಞಾನವೇ ಮೋಕ್ಷವಾಗಿದೆ ಎಂದು ತಿಳಿಸಿದರು.
ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಗುರುಸ್ಮರಣೆ ಎಂಬ ವಿಷಯದ ಕುರಿತು ಮಾತನಾಡುತ್ತಾ, ಅಜ್ಞಾನದಿಂದ ಸುಜ್ಞಾನದೆಡೆಗೆ ಗುರು ಕರೆದೊಯ್ಯುತ್ತಾನೆ, ಜ್ಞಾನವೆಂದರೆ ಭಗವಂತನ ಕುರಿತು ಚಿಂತನೆಯಾಗಿದ್ದು ಇದನ್ನು ತಿಳಿಸಿಕೊಡುವವನೇ ಗುರುವಾಗಿರುತ್ತಾನೆ ಎಂದ ಅವರು, ಗ್ರಹಣದ ಫಲಾಪಲ ವಿಚಾರಗಳು ಸುಳ್ಳಾಗಿದ್ದು, ಇಂತಹ ಭ್ರಾಂತಿಗಳಿಂದ ಹೊರ ಬರುಬೇಕು. ಗ್ರಹಗಳು ಖಗೋಳ ಶಾಸ್ತ್ರದ ಕೌತುಕವಾಗಿದ್ದು, ಅದನ್ನು ನೋಡಿ ಆನಂದ ಪಡಬೇಕು ವಿನಹ: ಮೌಡ್ಯತೆಗೆ ಒಳಗಾಗಬಾರದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವೇಶ್ವರ ಧರ್ಮ ಪ್ರಚಾರಕ ಸಮಿತಿಯ ಅಧ್ಯಕ್ಷ ಬಸನಗೌಡ ಪಾಟೀಲ ವಹಿಸಿದ್ದರು. ಇದೇ ಸಂದರ್ಭದಲ್ಲಿ ಈರ್ವರು ಶ್ರೀಗಳನ್ನು ಭಕ್ತಾಧಿಗಳು ಸತ್ಕರಿಸಿದರು.
ವೇದಿಕೆ ಮೇಲೆ ಡಾ|| ಸಿ.ಕೆ.ನಾವಲಗಿ, ಸುಜಾತಾ ಮುಚ್ಚಂಡಿಹಿರೇಮಠ, ಸುಧಾ ರೊಟ್ಟಿ, ಶಕುಂತಲಾ ಕಾಪಸಿ, ನಾಗಪ್ಪ ಕಾಪಸಿ, ಎಸ್.ಎಸ್.ಮರೆನ್ನವರ ಇದ್ದರು. ನವಚೇತನ ಶಾಲೆಯ ಮುಖ್ಯೋಪಾಧ್ಯಯ ಎಸ್.ಕೆ.ಮಠದ ಸ್ವಾಗತಿಸಿ, ವಂದಿಸಿದರು.

Related posts: