ಗೋಕಾಕ:ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆ ಉಧ್ಘಾಟಿಸಿದ ಖಾನಪ್ಪನವರ ಅಭಿಪ್ರಾಯ
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆ ಉಧ್ಘಾಟಿಸಿದ ಖಾನಪ್ಪನವರ ಅಭಿಪ್ರಾಯ
ಗೋಕಾಕ ಜೂ: 4 ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷರು ಬಸವರಾಜ ಖಾನಪ್ಪನವರವರು ಹೇಳಿದ್ದರು.
ಇಂದು ಕರ್ನಾಟಕ ರಕ್ಷಣಾ ವೇದಿಕೆ ಕರವೇ ಕಛೇರಿಯಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದ್ದರು.
ಕಳೆದ ಹಲವು ದಶಕಗಳಿಂದ ಮರಗಳ ಬೆಳವಣಿಗೆ ಇಲ್ಲದೇ ಅರಣ್ಯನಾಶವಾಗುತ್ತದೆ. ಯುವ ಜನತೆ ಎಚ್ಚೆತ್ತಿಕೊಂಡು ಪರಿಸರ ಸಂರಕ್ಷಿಸಲು ಮುಂದಾಗಬೇಕು. ಆಗ ಮಾತ್ರ ನಮ್ಮ ಭವ್ಯ ಅರಣ್ಯ ಸಂಪತ್ತು ಉಳಿಯಲು ಸಾಧ್ಯ. ಪ್ರತಿಯೊಬ್ಬರು ತಮ್ಮ ಮನೆಗಳು, ಹೊಲಗಳು ಸೇರಿದಂತೆ ಅನೇಕ ಬಯಲು ಪ್ರದೇಶಗಳಲ್ಲಿ ಸಸಿಗಳನ್ನು ನೆಟ್ಟಿ ಬೆಳೆಸಬೇಕು ಸರ್ಕಾರವು ಸಹ ಅಭಿವೃದ್ಧಿ ನೆಪದಲಿ ಮರಗಳಲಿ ಮಾರಣ ಹೋಮ ನಡೆಸುವುದನ್ನು ನಿಲ್ಲಿಸಿ ಕಠಿಣ ಕಾನೂನುವನ್ನು ತರಲು ಮುಂದಾಗಬೇಕು. ಸಾರ್ವಜನಿಕರು ತಮಗೆ ಸಿಕ್ಕ ಅವಕಾಶಗಳನ್ನು ಸದುಉಪಯೋಗ ಪಡೆದುಕೊಂಡು ಪರಿಸರ ಜಾಗೃತಿ ಮೂಡಿಸಲು ಬಳಸಿಕೊಂಡು ಅರಣ್ಯ ಸಂರಕ್ಷಿಸಲು ಮುಂದಾಗಬೇಕೆಂದು ಬಸವರಾಜ ಖಾನಪ್ಪನವರ ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ಗಾಡಿವಡ್ಡರ, ದಯಾನಂದ ವಾಗುಲೆ, ವೆಂಕಟೇಶ ಕೆಂಚನಗುಡ್ಡ, ಪವನ ಆಶಿ, ಶಿವು ಪರಸನ್ನವರ, ರಘು ವಾಗುಲೆ, ವಿಧ್ಯಾ ಧಾಬಿಮಠ, ಶೋಭಾ ಹುಬ್ಬಳಿಕರ, ಸರಸ್ವತಿ ಸೊಲ್ಲಾಪೂರಮಠ, ಕೃಷ್ಣಾ ಖಾನಪ್ಪನವರ ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.