RNI NO. KARKAN/2006/27779|Thursday, December 12, 2024
You are here: Home » breaking news » ಸವದತ್ತಿ:ಸಚಿವ ಜಾರಕಿಹೊಳಿ ಆಪ್ತ ಆನಂದ ಛೋಪ್ರಾ ಹತ್ಯೆಗೆ ಯತ್ನ

ಸವದತ್ತಿ:ಸಚಿವ ಜಾರಕಿಹೊಳಿ ಆಪ್ತ ಆನಂದ ಛೋಪ್ರಾ ಹತ್ಯೆಗೆ ಯತ್ನ 

ಸಚಿವ ಜಾರಕಿಹೊಳಿ ಆಪ್ತ ಆನಂದ ಛೋಪ್ರಾ ಹತ್ಯೆಗೆ ಯತ್ನ

ಸವದತ್ತಿ ಜು 29 : ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರ ಆಪ್ತ ಸವದತ್ತಿ ತಾಲೂಕಿನ ಪ್ರಭಾವಿ ನಾಯಕ ಆನಂದ ಛೋಪ್ರಾ ಅವರ ಹತ್ಯೆಗೆ ದುಷ್ಕರ್ಮಿಗಳು ಯತ್ನ ನಡೆಸಿದ್ದಾರೆ
ನಿನ್ನೆ‌ ತಡರಾತ್ರಿ ಹೂಲಿ ರಸ್ತೆ ಮೇಲೆ ಬೈಕ್​ನಲ್ಲಿ ಸಂಚರಿಸುವಾಗ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ. ಆನಂದ‌ ಛೋಪ್ರಾ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ‌ದಾಖಲಿಸಲಾಗಿದೆ. 
ಕಳೆದ ವಿಧಾನಸಭೆ ಚುನಾವಣೆಯಲ್ಲಿ ‌ಕಾಂಗ್ರೆಸ್ ಬಂಡಾಯ‌‌ ಅಭ್ಯರ್ಥಿ ಆಗಿ‌ ಕಣಕ್ಕಿಳಿದಿದ್ದ ಆನಂದ್​ ಛೋಪ್ರಾ, ಬಿಜೆಪಿಯ ಆನಂದ ಮಾಮನಿ ವಿರುದ್ಧ ಅಲ್ಪಮತಗಳಿಂದ ಪರಾಭವಗೊಂಡಿದ್ದರು.‌ ಆನಂದ್​ ಛೋಪ್ರಾ ಸವದತ್ತಿಯ ‌ಖ್ಯಾತ ಉದ್ಯಮಿಯಾಗಿದ್ದಾರೆ. ರಾಜಕೀಯ ಇಲ್ಲವೇ ಉದ್ಯಮದಲ್ಲಿನ ವೈಷಮ್ಯವೇ ಕೊಲೆ‌ ಯತ್ನಕ್ಕೆ ಕಾರಣ‌ ಇರಬಹುದು ಎಂದು ಪೊಲೀಸರು ಶಂಕೆ‌ ವ್ಯಕ್ತಪಡಿಸಿದ್ದಾರೆ.

Related posts: