RNI NO. KARKAN/2006/27779|Friday, December 13, 2024
You are here: Home » breaking news » ಮೂಡಲಗಿ: ಕಷ್ಟಗಳು ಮತ್ತು ಕೊರತೆಗಳು ಮನುಷ್ಯನ ಯಶಸ್ಸಿಗೆ ಮೆಟ್ಟಿಲುಗಳಾಗಿವೆ : ಲಕ್ಷ್ಮೀ ಪಾಟೀಲ

ಮೂಡಲಗಿ: ಕಷ್ಟಗಳು ಮತ್ತು ಕೊರತೆಗಳು ಮನುಷ್ಯನ ಯಶಸ್ಸಿಗೆ ಮೆಟ್ಟಿಲುಗಳಾಗಿವೆ : ಲಕ್ಷ್ಮೀ ಪಾಟೀಲ 

ಕಷ್ಟಗಳು ಮತ್ತು ಕೊರತೆಗಳು ಮನುಷ್ಯನ ಯಶಸ್ಸಿಗೆ ಮೆಟ್ಟಿಲುಗಳಾಗಿವೆ : ಲಕ್ಷ್ಮೀ ಪಾಟೀಲ

ಮೂಡಲಗಿ ಜು 30 : ಕಷ್ಟಗಳು ಮತ್ತು ಕೊರತೆಗಳು ಮನುಷ್ಯನ ಯಶಸ್ಸಿಗೆ ಮೆಟ್ಟಿಲುಗಳಾಗಿವೆ’ ಎಂದು ಮೂಡಲಗಿ ಜ್ಞಾನಜ್ಯೋತಿ ಸ್ಪಾರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಉಪನ್ಯಾಸಕಿ ಲಕ್ಷ್ಮೀ ಪಾಟೀಲ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಉದ್ಯೋಗ ಮಾರ್ಗದರ್ಶನ ಕೇಂದ್ರದಲ್ಲಿ ಜ್ಞಾನಜ್ಯೋತಿ ತರಬೇತಿ ಕೇಂದ್ರದವರು ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಅವಕಾಶಗಳು ಕುರಿತು ಏರ್ಪಡಿಸಿದ್ದ ಕಾರ್ಯಗಾರದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಾವು ಪದವಿಯವರೆಗೆ ಕಲಿತಿರುವ ವಿಷಯಗಳನ್ನು ಪುನರ ಮನನವನ್ನು ಮಾಡಿಕೊಳ್ಳುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ಸಿಗಾಗಿ ಎದುರಿಸಲು ಸಾಧ್ಯ ಎಂದರು.
ಉಪನ್ಯಾಸಕ ಸುಹಾನಾ ಫಿರಜಾದೆ ಮಾತನಾಡಿ ಪರಿಶ್ರಮ, ಶ್ರದ್ಧೆ ಇದ್ದರೆ ಯಶಸ್ಸು ಸಾಧ್ಯ. ಶಿಕ್ಷಣ ವ್ಯವಸ್ಥೆಯಲ್ಲಿ ಪಡೆಯುವ ಅಂಕಗಳೇ ಸಾಧನೆಗೆ ಮಾನದಂಡವಲ್ಲ. ಪ್ರಯತ್ನ, ಕೌಶಲತೆಗಳು ಸಹ ಸಾಧನೆಯತ್ತ ನಮ್ಮನ್ನು ಸಾಗಿಸುತ್ತವೆ ಎಂದರು.
ಕೇಂದ್ರದ ನಿರ್ದೇಶಕ ಮಲ್ಲಪ್ಪ ಕರಗಣ್ಣಿ ಮಾತನಾಡಿ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥಮಾಡಿಕೊಳ್ಳದೆ ಶ್ರದ್ದೆಯಿಂದ ಓದಿ, ಮಾರ್ಗದರ್ಶನವನ್ನು ಪಡೆದುಕೊಳ್ಳುವ ಮೂಲಕ ಉನ್ನತ ಹುದ್ದೆಗಳನ್ನು ಸೇರಲು ಸಾಧ್ಯ ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರಭಾರಿ ಪ್ರಾಚಾರ್ಯ ಪ್ರೊ. ಎಸ್.ಎಂ. ಗುಜಗೊಂಡ ಮಾತನಾಡಿ ಪತ್ರಿಕೆಗಳನ್ನು ಓದುವ ಮೂಲಕ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ನ್ಯಾಕ್ ಸಮನ್ವಯಾಧಿಕಾರಿ ಡಾ. ವಿ.ಆರ್. ದೇವರಡ್ಡಿ, ಜಿಮಖಾನಾ ಅಧ್ಯಕ್ಷ ಡಾ.ಎಸ್.ಎಲ್. ಚಿತ್ರಗಾರ, ಡಾ. ಬಿ.ಸಿ. ಪಾಟೀಲ ಇದ್ದರು.
ಬಾಲಶೇಖರ ಬಂದಿ ಸ್ವಾಗತಿಸಿದರು, ಪ್ರೊ. ಜಿ.ವಿ. ನಾಗರಾಜ ವಂದಿಸಿದರು.

Related posts: