ಬೆಳಗಾವಿ:ಕಾಂಗ್ರೆಸ್ ಪಕ್ಷ ಜಾರಕಿಹೊಳಿಗಳ ಸ್ವತ್ತಲ್ಲ :ಪಕ್ಷದ ಕಾರ್ಯಕರ್ತರ ಆಸ್ತಿ : ಶಂಕರ ಮುನವಳ್ಳಿ ಗುಡುಗು
ಕಾಂಗ್ರೆಸ್ ಪಕ್ಷ ಜಾರಕಿಹೊಳಿಗಳ ಸ್ವತ್ತಲ್ಲ :ಪಕ್ಷದ
ಕಾರ್ಯಕರ್ತರ ಆಸ್ತಿ : ಶಂಕರ ಮುನವಳ್ಳಿ ಗುಡುಗು
ಬೆಳಗಾವಿ ಜೂ 4 : ಕಾಂಗ್ರೆಸ್ ಪಕ್ಷ ಜಾರಕಿಹೊಳಿ ಸಹೋದರರ ಸ್ವತ್ತಲ್ಲ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಕೈ ನಾಯಕರ ವಿರುದ್ಧ ಗುಡಗಿದ್ದಾರೆ
ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಅಧಿಕಾರಕ್ಕೆ ಬರುತ್ತದೆ. ಪಕ್ಷದಲ್ಲಿ ಬಲಾಢ್ಯರಿಗೆ ಅಧಿಕಾರ ಹಂಚುತ್ತಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಉತ್ತರ ಕರ್ನಾಟಕ ಮುಖಂಡರು, ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ವೀರಶೈವ ಲಿಂಗಾಯತ, ಪರಿಶಿಷ್ಟ, ಅಲ್ಪಸಂಖ್ಯಾತರಿಗೆ ಯಾಕೆ ಅವಕಾಶ ನೀಡುತ್ತಿಲ್ಲ. ಪಕ್ಷದ ಪ್ರಚಾರಕ್ಕಾಗಿ ಸಾಕಷ್ಟು ಹಣ ಸುರಿದಿದ್ದೇವೆ ಎಂದು ‘ಕೈ’ ವಿರುದ್ಧವೇ ಮುನವಳ್ಳಿ ಹರಿಹಾಯ್ದಿದ್ದಾರೆ.
ಬೆಳಗಾವಿ ಜಿಲ್ಲೆಯ 18 ಕ್ಷೇತ್ರ ಸೇರಿ ಉತ್ತರ ಕರ್ನಾಟಕದ 56 ಕ್ಷೇತ್ರದಲ್ಲೂ ನಿಷ್ಠಾವಂತ ಅಭ್ಯರ್ಥಿಗಳನ್ನ ನಿಲ್ಲಿಸಲಾಗುವುದು. ರಾಜ್ಯದ ಮುಖಂಡರಿಗೆ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವ ಇಚ್ಛೆ ಇಲ್ಲವಾ? ಎಂದು ಪ್ರಶ್ನಿಸಿದರು.
ಕಾರ್ಯಕರ್ತರ ಹಣದಲ್ಲಿ ಕಾಂಗ್ರೆಸ್ ಕಚೇರಿ ಕಟ್ಟುತ್ತೀರಿ. ಪಕ್ಷ ಸಂಘಟಿಸುವ ಡಿ.ಕೆ. ಶಿವಕುಮಾರ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಏಕೆ ಆಯ್ಕೆ ಮಾಡಲಿಲ್ಲ. ಕಾಂಗ್ರೆಸ್ ಜಾರಕಿಹೊಳಿ ಸಹೋದರರ ಪಕ್ಷವಲ್ಲವೆಂದು ಶಂಕರ್ ಮುನವಳ್ಳಿ ಗುಡುಗಿದರು