RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು : ಆರ್.ಎಮ್.ಗುಡೆನ್ನವರ

ಮೂಡಲಗಿ:ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು : ಆರ್.ಎಮ್.ಗುಡೆನ್ನವರ 

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು : ಆರ್.ಎಮ್.ಗುಡೆನ್ನವರ

ಮೂಡಲಗಿ ಜು 31 : ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಜಗತ್ತಿನಲ್ಲಿ ಗುರುವಿನ ಸ್ಥಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿದ್ದು ಈ ವೃತ್ತಿಯ ಮೂಲಕ ಆದರ್ಶ ಸಮಾಜ ನಿರ್ಮಿಸಬಹುದು ಎಂದು ವಡೇರಹಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಎಮ್.ಗುಡೆನ್ನವರ ಹೇಳಿದರು.
ಅವರು ಸಮೀಪದ ಫುಲಗಡ್ಡಿ ಗ್ರಾಮದ ಸ.ಹಿ.ಪ್ರಾ ಶಾಲೆಯಲ್ಲಿ ಅಖಂಡ 27 ವರ್ಷ ಒಂದೇ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಶ್ರೀಮತಿ ಎಸ್.ಎಮ್ ತಿಗಡೊಳ್ಳಿಯವರ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಳೆಯ ವಿದ್ಯಾರ್ಥಿ ಶಿಕ್ಷಕ ಸಿ.ಬಿ.ಪೂಜೇರ ಮಾತನಾಡಿ ವಿದ್ಯಾರ್ಥಿ ಜೀವನದ ಹಳೆಯ ನೆನಪುಗಳನ್ನು ಸ್ಮರಿಸಿ ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಮಹತ್ವ ಕುರಿತು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್‍ಡಿಎಂಸಿ ಅಧ್ಯಕ್ಷೆ ಶ್ರೀಮತಿ ಸರೋಜನಿ ಹುಚರಡ್ಡಿ ವಹಿಸಿದ್ದರು. ಅತಿಥಿಗಳಾಗಿ ಗ್ರಾ,ಪಂ ಸದಸ್ಯ ತುಕಾರಾಮ ಗೌಡರ, ಕೆ.ಜಿ.ಪೂಜೇರಿ, ನಿವೃತ್ತ ಶಿಕ್ಷಕ ಎಂ.ಬಿ.ಮಾಳಗಿ, ಬಸಮ್ಮ ಪಾಟೀಲ, ಅಶೋಕ ಹುಚರಡ್ಡಿ, ಶೃತಿ ದಡ್ಡಿ, ಚೈತ್ರಾ ನಾಯ್ಕ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಬ.ಎ.ದುಂಡಾನಟ್ಟಿ ಸ್ವಾಗತಿಸಿದರು, ಸಂದೀಪ ಕೆ ನಿರೂಪಿಸಿದರು, ಎಸ್.ಎಂ ಹೂನೂರ ವಂದಿಸಿದರು.

Related posts: