RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡಿ : ಡಾ. ಕಾಂತರಾಜು.ವಿ

ಮೂಡಲಗಿ:ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡಿ : ಡಾ. ಕಾಂತರಾಜು.ವಿ 

ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡಿ : ಡಾ. ಕಾಂತರಾಜು.ವಿ
ಮೂಡಲಗಿ ಜು 31 : ಬಾಳೆಯಲ್ಲಿ ಬರುವ ರೋಗ ಮತ್ತು ಕೀಟಗಳನ್ನು ವ್ಶೆಜ್ಞಾನಿಕ ಪದ್ಧತಿಯಿಂದ ನಿರ್ವಹಣೆ ಮಾಡುವುದರಿಂದ ರೈತರು ಹೆಚ್ಚಿನ ಇಳುವರಿ ಮತ್ತು ಆದಾಯ ಗಳಿಸಬಹುದೆಂದು ಅರಬಾಂವಿ ಕಿರಾಚತೋಮ ಸಹ ಪ್ರಾದ್ಯಾಪಕ ಮತ್ತು ವಿಸ್ತರಣಾ ಘಟಕದ ಮುಖ್ಯಸ್ಥ ಡಾ. ಕಾಂತರಾಜು.ವಿ ಹೇಳಿದರು.
ಅವರು ಮಂಗಳವಾರದಂದು ಅರಬಾಂವಿ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ವಿಸ್ತರಣಾ ಶಿಕ್ಷಣ ಘಟಕ, ಭಾರತೀಯ ಕೃಷಿ ಅನುಸಂಧಾನ ಪರಿಷತ್ತು–ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆ (ಹಣ್ಣುಗಳು) ಸಂಯುಕ್ತ ಆಶ್ರಯದಲ್ಲಿ ಯರಝರ್ವಿ ಗ್ರಾಮದಲ್ಲಿ ಜರುಗಿದ ಬಾಳೆ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಬಗ್ಗೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಳೆಯಲ್ಲಿ ಹೆಚ್ಚಾಗಿ ಕಂಡುಬರುವ ರೋಗಗಳಾದ ಎಲೆ ಚುಕ್ಕೆ ರೋಗ, ಸಸ್ಯ ಜಂತು ರೋಗ, ಗಡ್ಡೆ ಕೊಳೆ ರೋಗ ಮತ್ತು ಗೊಂಚಲು ಸುಳಿ ರೋಗಗಳ ಗುರುತಿಸುವಿಕೆ, ರೋಗದ ತೀವ್ರತೆಗೆ ಅನುಕೂಲಕರ ವಾತಾವರಣ ಮತ್ತು ಸಮಗ್ರ ರೋಗ ನಿರ್ವಹಣೆ ಬಗ್ಗೆ ಮಾಹಿತಿ ಬಾಳೆ ಬೆಳೆಗಾರರಿಗೆ ಮಾಹಿತಿ ನೀಡಿದರು.
ತೋಟಗಾರಿಕಾ ಮಹಾವಿದ್ಯಾಲಯದ ಕೀಟಶಾಸ್ತ್ರ ವಿಭಾಗ ಪ್ರಾಧ್ಯಾಪಕಿ ರೇಣುಕಾ ಹೀರೆಕುರುಬರ ಇವರು ಬಾಳೆಯಲ್ಲಿ ಕಂಡುಬರುವ ವಿವಿಧ ಕೀಟಗಳಾದ ಗಡ್ಡೆ ಕೊರೆಯುವ ಮೂತಿಹುಳು, ಹುಸಿ ಕಾಂಡ ಕೊರೆಯುವ ಮೂತಿಹುಳು ಮತ್ತು ಸಸ್ಯ ಹೇಣುಗಳನ್ನು ಗುರುತಿಸುವುದು ಕೀಟ ಬಾಧೆಯ ಲಕ್ಷ್ಪ್ಷಣಗಳು, ಕೀಟಗಳ ಜೀವನ ಚಕ್ರ ಮತ್ತು ಅವುಗಳ ಸಮಗ್ರ ಕೀಟ ನಿರ್ವಹಣೆಯ ಬಗ್ಗೆ ತಿಳಿಸಿದರು.
ಮಹಾವಿದ್ಯಾಲಯದ ಪ್ರಾಧ್ಯಾಪಕಿ ಶ್ರೀಮತಿ ಸುಹಾಸಿನಿ ಜಲವಾದಿ ಇವರು ಬಾಳೆ ಬೆಳೆಯ ಸುಧಾರಿತ ತಳಿಗಳನ್ನು ಬೆಳೆ ಸುವುದು, ಹೆಚ್ಚಿನ ಸಾಂಧ್ರತೆಯಲ್ಲಿ ಬಾಳೆ ಬೆಳೆಯುವುದು, ಹನಿ ನೀರಾವರಿ, ರಸಾವರಿ ಪದ್ದತಿ, ಲಘು ಪೋಷಕಾಶಗಳ ಬಳಕೆ, ಬಾಳೆ ಗೊಣೆಗಳಿಗೆ ಪೋಷಕಾಂಶಗಳನ್ನು ಒದಗಿಸುವುದರ ಬಗ್ಗೆ ತಿಳಿಸಿಕೊಟ್ಟರು.
ಸಹ ಪ್ರಾದ್ಯಾಪಕ ಡಾ.ಮುಕುಂದ ಶಿರಗೂರ ಅವರು ಬಾಳೆ ಬೆಳೆಯಲ್ಲಿ ಚಂಡು ಹೂವನ್ನು ನಾಟಿ ಮಾಡಿದ ಮೂರು ತಿಂಗಳವಳಗೆ ಬೆಳೆಯುವುದರಿಂದ ಬಾಳೆಯಲ್ಲಿ ಕಂಡುಬರುವ ಸಸ್ಯ ಜಂತು ಹುಳುಗಳ ಬಾದೆ ಕಡಿಮೆಗೊಳಿಸಬಹುದೆಂದು ತಿಳಿಸಿದರು ನಂತರ ಹೂವಿನ ಮಾರಾಟದಿಂದ ರೈತರು ಹೆಚ್ಚಿನ ಲಾಭ ಪಡೆದು ಮುಂದೆ ಬಾಳೆ ಬೆಳೆಗೆ ಬರುವ ಖರ್ಚನ್ನು ಹೂವಿನ ಲಾಭದಿಂದ ತೂಗಿಸಬಹುದೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಯರಝರ್ವಿ ಗ್ರಾಮದ ಪ್ರಗತಿ ಪರ ಬಾಳೆ ಕೃಷಿಕರಾದ ದೇಮಪ್ಪ ರುದ್ರಾಪೂರ, ಶಿವಾನಂದ ಅಂಗಡಿ, ಈರಪ್ಪಾ ಚಳಕೊಪ್ಪ, ಉಮೇಶ ರುದ್ರಾಪೂರ, ಕರಿಯಪ್ಪ ಕಳಸಿ ಮತ್ತು 48 ಜನ ರೈತರು ಬಾಗವಹಿಸಿದ್ದರು. ವಿಜ್ಞಾನಿಗಳು ರೈತರ ವಿವಿಧ ರೋಗ ಮತ್ತು ಕೀಟ ಬಾಧೆ ಪೀಡಿತ ಕ್ಷೇತ್ರಗಳಿಗೆ ಬೇಟಿಕೊಟ್ಟು ರೈತರಿಗೆ ವ್ಶೆಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು.

Related posts: