ಗೋಕಾಕ:ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಿ : ಅಶೋಕ ಪೂಜಾರಿ
ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಿ : ಅಶೋಕ ಪೂಜಾರಿ
ಗೋಕಾಕ ಅ 1 : ಕಣ್ಣಿಗೆ ಕಾಣದ ಕಲ್ಲು ದೇವರಿಗಿಂತಲೂ ಪ್ರತ್ಯಕ್ಷ ಕಣ್ಣಿಗೆ ಕಾಣುವ ನಮಗೆ ಬದುಕು ಕೊಟ್ಟು ನಮ್ಮ ಜೀವನ ರೂಪಿಸಿದ ತಂದೆ-ತಾಯಿಗಳೇ ನಿಜವಾದ ದೇವರೆಂದು ಪೂಜಿಸಬೇಕೆಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು.
ಅವರು ಬಿಜೆಪಿ ಪಕ್ಷದಿಂದ ವಯೋವೃದ್ಧ ಹಿರಿಯ ಜೀವಿಗಳನ್ನು ಸನ್ಮಾನಿಸಿ ಗೌರವಿಸುವ ಭಾರತೀಯ ಜನತಾ ಪಕ್ಷದ ಅಭಿಯಾನದಂತೆ ಕೊಣ್ಣೂರ ಗ್ರಾಮದ ಶತಾಯುಷಿಗಳಾದ ಶ್ರೀಮತಿ ನೀಲವ್ವ ನೇಮಪ್ಪ ಪಲ್ಲೇದ ಹಾಗೂ ಕಾಡಪ್ಪ ದುಂಡಪ್ಪ ದತ್ತವಾಡ ಮತ್ತು ಅವರ ಶ್ರೀಮತಿ ಶ್ರೀಮತಿ ಸಾತವ್ವ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಅಸ್ಥಿರ ಬದುಕಿನ ಇಂದಿನ ದಿನಗಳಲ್ಲಿ ಶತಾಯುಷಿಗಳಾಗಿ ಬದುಕುವ ಸುಯೋಗ ಕೆಲವೇ ಪುಣ್ಯವಂತರಿಗೆ ದೊರೆಯುತ್ತದೆ. ಅಂತಹದರಲ್ಲಿ ಈ ಮೂವರು ಪುಣ್ಯಾತ್ಮರು ಇಂದಿನ ತಮ್ಮ ಶತಮಾನದ ಇಳಿ ವಯಸ್ಸಿನಲ್ಲಿಯೂ ಆರೋಗ್ಯವಂತರಾಗಿರುವದು ಅವರ ಜೀವನ ಶೈಲಿ, ಸಂತೃಪ್ತ ಬದುಕು, ಕಾಯಕಶೀಲತೆ, ಜೀವನದುದ್ದಕ್ಕೂ ಇನ್ನೊಬ್ಬರಿಗೆ ಮಾಡಿದ ಸೇವಾ ಮನೋಭಾವದ ಕಾರ್ಯದ ಜೊತೆಗೆ ಭಗವಂತನ ಕೃಪೆಯೂ ಕಾರಣವೆಂದು ಹೇಳಿದರು. ಬದುಕಿನ ಬಾಲ್ಯ, ಯೌವನ, ಪ್ರೌಢಾವಸ್ಥೆ ಮತ್ತು ಮುಪ್ಪಾವಸ್ಥೆಯ ಸುಖ-ದುಃಖಗಳನ್ನು ಅನುಭವಿಸಿದ ಬದುಕು ಜೀವನದ ಸಂತೃಪ್ತಿಯ ಬದುಕಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಪಾರಮಾರ್ಥಿಕ ನೆಮ್ಮದಿಯು ದೊರೆಯುತ್ತದೆ ಎಂದು ಹೇಳಿ ಈ ವಯೋವೃದ್ಧ ಹಿರಿಯರ ಸೇವೆಗೈಯುವ ಸದವಕಾಶ ದೊರೆತ ಅವರ ಕುಟುಂಬದ ಸದಸ್ಯರು ಧನ್ಯತಾ ಮನೋಭಾವವನ್ನು ಕಾಣಬೇಕೆಂದು ಹೇಳಿದರು.
ಬಿಜೆಪಿ ಮುಖಂಡ ಉಮೇಶ ನಿರ್ವಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ವಿರುಪಾಕ್ಷಿ ಯಲಿಗಾರ, ಮುಖಂಡರುಗಳಾದ ಪ್ರೇಮಾ ಚಿಕ್ಕೋಡಿ, ರಾಜು ಕತ್ತಿ, ಕುಮಾರ ಬೆಳವಿ, ರೈತ ಮುಖಂಡ ಬಸಲಿಂಗಪ್ಪ ನಾವಲಗಟ್ಟಿ, ಆದಪ್ಪ ಮಗದುಮ್ಮ, ಶೇಖರ ರಜಪೂತ, ಗುರವ್ವ ಪಾಟೀಲ, ಶಾಂತವ್ವ ಗುರವ, ಚಂದ್ರವ್ವ ಗುರವ, ಕಾಶವ್ವಾ ಹಾವಳ, ಚಂಪಾವತಿ ದೊಡ್ಡಲಿಂಗನ್ನವರ, ಭರಮಪ್ಪ ಪಲ್ಲೇದ, ಅಭಯ ಪಲ್ಲೇದ, ಅಲ್ಲಪ್ಪ ಹುಲ್ಲೋಳ್ಳಿ, ಮಾಲಾ ಗುರವ, ಶೋಭಾ ಗುರವ, ಕಾಶವ್ವಾ ಪಲ್ಲೇದ, ಮಹಾವೀರ ಬಾಳಿಗರಿ, ಬಸವರಾಜ ಪೂಜೇರ, ಪ್ರಕಾಶ ಜೈನ, ದುಂಡಪ್ಪ ನಾಯಿಕ, ತವನಪ್ಪ ಖಾನಾಪೂರಿ, ನೇಮಣ್ಣಾ ದತ್ತವಾಡ ಜಿನ್ನಪ್ಪಾ ದತ್ತವಾಡ, ಶಾಂತಿನಾಥ ಶಿಕ್ರಿ, ಅಣ್ಣಪ್ಪಾ ಕಡಹಟ್ಟಿ, ಗಂಗಪ್ಪಾ ದತ್ತವಾಟ, ಜೈಪಾಲ ಸಾಗರ, ಬಾಹುಬಲಿ ಶಿಕ್ರಿ, ದೀಪಿಕಾ ಸಪ್ತಸಾಗರ ಮುಂತಾದವರು ಇದ್ದರು.