RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಬೆಟಗೇರಿ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ : ರಾಮಣ್ಣ ಬಳಿಗಾರ ಮಾಹಿತಿ

ಗೋಕಾಕ:ಬೆಟಗೇರಿ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ : ರಾಮಣ್ಣ ಬಳಿಗಾರ ಮಾಹಿತಿ 

ಬೆಟಗೇರಿ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ : ರಾಮಣ್ಣ ಬಳಿಗಾರ ಮಾಹಿತಿ

ಬೆಟಗೇರಿ ಅ 2  : ಗ್ರಾಮದ ಅಭ್ಯುದಯ, ಸುಖ ಶಾಂತಿ ಮತ್ತು ನೆಮ್ಮದಿಗಾಗಿ ಗ್ರಾಮ ದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವವನ್ನು 5ವರ್ಷಕ್ಕೂಮ್ಮೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಹಿರಿಯರಾದ ರಾಮಣ್ಣ ಬಳಿಗಾರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ದೇವತೆ ದ್ಯಾಮವ್ವದೇವಿಯ ದೇವಸ್ಥಾನದ ಸಭಾಂಗಣದಲ್ಲಿ ಗುರುವಾರ ಆ.2ರಂದು ನಡೆದ ಜಾತ್ರಾ ಮಹೋತ್ಸವದ ಸಕಲ ಸಿದ್ಧತೆ ಕುರಿತು ಸುದ್ಧಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ಅವರು, ಗ್ರಾಮಸ್ಥರೆಲ್ಲಾ ಜಾತ್ಯಾತೀತವಾಗಿ ನಡೆದುಕೊಳ್ಳುವ ದೇವರು ದ್ಯಾಮವ್ವದೇವಿ ಆಗಿದ್ದಾಳೆ. ಇದೇ ಆ.6 ರಿಂದ 10 ರವರೆಗೆ ಜರುಗಲಿರುವ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ರಾಸಾಯನಿಕ ರಹಿತ ಗುಣಮಟ್ಟದ 2 ಟನ್ ಭಂಡಾರ ಸಮಿತಿ ವತಿಯಿಂದ ನೀಡಲಾಗುವದು. ಎಲ್ಲ ರೀತಿಯ ವ್ಯಾಪಾರಸ್ಥರಿಗೆ ಒಂದಡೆ ಮಳಿಗೆಗಳು, ಚಿಕ್ಕ ಮಕ್ಕಳಿಗೆ ಮನರಂಜನೆಗಾಗಿ ವಿಶೇಷ ಜೋಕಾಲಿ ಸೇರಿದಂತೆ ಪಳಾರ, ಸ್ಟೇಶನರಿ ಮಳಿಗೆಗಳನ್ನು ಗ್ರಾಮದ ವಿವಿಧಡೆ ಖುಲ್ಲಾ ಜಾಗೆಯಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮಕ್ಕೆ ಆಗಮಿಸುವ ಪ್ರಯಾಣಿಕರಿಗೆ, ಅಪರಿಚಿತರಿಗೆ, ಮಹಿಳೆಯರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಒತ್ತಾಯ ಪೂರ್ವಕ ಯಾರೂ ಭಂಡಾರ ಎರಚಬಾರದು. ರಾಸಾಯನಿಕ ರಹಿತ ಗುಣಮಟ್ಟದ ಭಂಡಾರ ಬಳಸಬೇಕೆಂದು ಸ್ಥಳೀಯರಲ್ಲಿ ರಾಮಣ್ಣ ಬಳಿಗಾರ ಮನವಿ ಮಾಡಿಕೊಂಡÀರು.
ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಹಿರಿಯ ಸದಸ್ಯ ಲಕ್ಷ್ಮಣ ಸೋಮನಗೌಡರ ಮಾತನಾಡಿ, ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಸದಸ್ಯರು, ಹಕ್ಕುದಾರರು, ಗ್ರಾಮದ ಎಲ್ಲ ಸಮುದಾಯದ ಹಿರಿಯರ, ಯುವಕರ ಮಾರ್ಗದರ್ಶನದಲ್ಲಿ ಈ ಸಲವೂ ಜಾತ್ರಾ ಮಹೋತ್ಸವ ಸುಗಮವಾಗಿ ಜರುಗಲು ಶ್ರಮಿಸಲಾಗುವದು. ಸ್ಥಳೀಯರ ಸಹಕಾರ ಪ್ರಮುಖವಾಗಿದೆ. ಎಲ್ಲರೂ ಒಂದಾಗಿ ಶಾಂತಿ, ಸೌಹಾರ್ದತೆಯಿಂದ ಜಾತ್ರಾ ಮಹೋತ್ಸವ ಅಧ್ಧೂರಿಯಾಗಿ ಆಚರಿಸಬೇಕೆಂದÀರು.
ಗ್ರಾಮದ ಹಿರಿಯರಾದ ಶಿವಾಜಿ ನೀಲಣ್ಣವರ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಈರಯ್ಯ ಹಿರೇಮಠ, ವಿಠಲ ಕೋಣಿ, ಬಸವರಾಜ ಪಣದಿ, ವೀರನಾಯ್ಕ ನಾಯ್ಕರ, ರಾಜು ಪತ್ತಾರ, ಮುತ್ತೆಪ್ಪ ವಡೇರ, ಸಂಜು ಪೂಜೇರ, ಮಲ್ಲಪ್ಪ ಪಣದಿ, ಗ್ರಾಮದೇವತೆ ದೇವಸ್ಥಾನದ ಅರ್ಚಕ ಬಾಳಪ್ಪ ಬಡಿಗೇರ, ಕಾಳಪ್ಪ ಪತ್ತಾರ ಸೇರಿದಂತೆ ಗ್ರಾಮದ ಎಲ್ಲ ಸಮಾಜದ ಹಿರಿಯರು, ಯುವಕರು, ಇತರರು ಇದ್ದರು.

Related posts: