ಖಾನಾಪುರ:ಖಾನಾಪೂರ ಪಶು ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಭೇಟಿ
ಖಾನಾಪೂರ ಪಶು ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಭೇಟಿ
ಖಾನಾಪುರ ಅ 4 : ಪಶು ಆಸ್ಪತ್ರೆ ಖಾನಾಪೂರಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸನ್ಮಾನ್ಯ ಶ್ರೀಮತಿ ಆಶಾ ಐಹೊಳೆಯವರು ಭೇಟಿ ನೀಡಿ ಇಲಾಖಾ ಚಟುವಟಿಕೆಗಳನ್ನು ಪರಿಶೀಲಿಸಿದರು. ಸಹಾಯಕ ನಿರ್ದೇಶಕ ಡಾ ಜಿ ಪಿ ಮನಗೂಳಿ ಅವರು ಸ್ವಾಗತಿಸಿ, ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪರಿಚಯಿಸಿದರು. ಪ್ರಾಸ್ತಾವಿಕವಾಗಿ ಇಲಾಖೆಯ ಪ್ರಗತಿ ಹಾಗೂ ಕಳೆದ ೩ ವರ್ಷದ ಪಶುಭಾಗ್ಯ ಯೊಜನೆಯ ಫಲಾನುಭವಿಗಳ ಕಡತಗಳೊಂದಿಗೆ ವಿವರಣೆ ನೀಡಿದರು. ಯೊಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಫಲಾನುಭವಿಗಳ ಮನೆಗೆ ಭೇಟಿ ನೀಡಿದ ಸನ್ಮಾನ್ಯ ಅಧ್ಯಕ್ಷರು ಫಲಾನಭವಿಗಳೊಂದಿಗೆ ಚರ್ಚಿಸಿದರು.
ಪಶುಭಾಗ್ಯ ಯೊಜನೆಯ ಹೈನುಗಾರಿಕೆ ಘಟಕ ದ ಫಲಾನುಭವಿ ಶ್ರೀಮತಿ ರೇಷ್ಮಾ ಪರೇರಾ ಪಶುಭಾಗ್ಯ ಯೊಜನೆಯ 2 ಹೈನುರಾಸುಗಳಿಂದ ಘಟಕ ಪ್ರಾರಂಭಿಸಿ ಸಧ್ಯ 6 ಹಸು 2 ಎಮ್ಮೆ ಹೊಂದಿದ್ದಾರೆ. ಇಲಾಖೆಯಿಂದ ತರಬೇತಿ ಪಡೆಯುವದರೊಂದಿಗೆ ವಿವಿಧ ತಳಿಯ ಮೆವುಬೆಳೆ ಬೆಳೆಯುತ್ತಾರೆ . ಮೇವುಕತ್ತರಿಸುವ ಯಂತ್ರದ ಉಪಯೋಗ, ಹಾಲು ಕರೆಯುವ ಯಂತ್ರದ ಉಪಯೋಗ ಹಾಲು ಪ್ಯಾಕ್ ಮಾಡಿ ಮಾರಾಟ ಮಾಡುವುದನ್ನು ವಿವರಿಸಿದರು. ಶ್ರೀಮತಿ ರೇಷ್ಮಾ ಪರೇರಾ ಅವರ ದಿನ ನಿತ್ಯದ ಚಟುವಟಿಕೆಗಳನ್ನು ಕೇಳುತ್ತಾ, ಸ್ವಂತ ಮಾರುಕಟ್ಟೆ ಒದಗಿಸಿಕೊಂಡು ಆರ್ಥಿಕವಾಗಿ ಸಬಲವಾಗುತ್ತಿರುವ ಮಹಿಳಾ ಹೈನು ಘಟಕದ ಯಶೊಗಾಥೆಯನ್ನು ತುಂಬು ಹ್ರೃದಯದಿಂದ ಹೊಗಳಿದರು. ಮಹಿಳಾ ಹೈನುಗಾರಿಕೆ ಘಟಕದ ಮಾದರಿಯಾಗಿ ಇತರೆ ಮಹಿಳೆಯರಿಗೂ ಈ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸುವಂತೆ ಕರೆ ನೀಡಿದರು.
ಇನ್ನೋರ್ವ ಫಲಾನುಭವಿ ಶ್ರೀ ಯಲ್ಲಪ್ಪ ಹೊನ್ನಪ್ಪ ಪಾಟೀಲ ಸಾ.ಲಕ್ಕೇಬೈಲ ಇವರ ಆಡು ಸಾಕಾಣಿಕೆ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹೆಚ್ಚು ಮಳೆಬೀಳುವ ಖಾನಾಪೂರ ತಾಲುಕಿನಲ್ಲಿ ಪಶು ಭಾಗ್ಯ ಯೊಜನೆಯಡಿ ಮೇಕೆ ಘಟಕವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿ ಲಾಭ ಕಂಡುಕೊಂಡ ಯಲ್ಲಪ್ಪನಿಗೆ ಅಭಿನಂದಿಸುತ್ತಾ ಸರಕಾರ ನೀಡುವ ಯೋಜನೆಗಳು ಅನುಸರಣೆಯಿಂದ ಮಾತ್ರವೇ ಫಲಾನುಭವಿಗಳಿಗೆ ಲಾಭವಾಗುದೆಂದು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಖಾನಾಪೂರ ಪಶುಸಂಗೋಪನಾ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು.
ವರದಿ: ಕಾಶೀಮ ಹಟ್ಟಿಹೊಳಿ, ಖಾನಾಪುರ