RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಪಿಎಸ್‍ಐ ಹಾಲಪ್ಪ ಬಾಲದಂಡಿಯವರ ಬಿಳ್ಕೋಡುಗೆ ಸಮಾರಂಭ

ಮೂಡಲಗಿ:ಪಿಎಸ್‍ಐ ಹಾಲಪ್ಪ ಬಾಲದಂಡಿಯವರ ಬಿಳ್ಕೋಡುಗೆ ಸಮಾರಂಭ 

ಪಿಎಸ್‍ಐ ಹಾಲಪ್ಪ ಬಾಲದಂಡಿಯವರ ಬಿಳ್ಕೋಡುಗೆ ಸಮಾರಂಭ

ಮೂಡಲಗಿ ಅ 5 : ಸ್ಥಳೀಯ ಪೋಲಿಸ್ ಠಾಣೆಯಲ್ಲಿ 2ವರ್ಷಗಳ ಕಾಲ ಪಿಎಸ್‍ಐಯಾಗಿ ಉತ್ತಮ ಸೇವೆಗೈದು ಇದೀಗ ಜಮಖಂಡಿಯ ಗ್ರಾಮೀಣ ಪೋಲಿಸ್ ಠಾಣೆಗೆ ವರ್ಗಾವಣೆಗೊಂಡ ದಕ್ಷ ಮತ್ತು ಪ್ರಮಾಣಿಕ ಪಿಎಸ್‍ಐ ಹಾಲಪ್ಪ ಬಾಲದಂಡಿಯವರನ್ನು ಶನಿವಾರ ಸಂಜೆ ಪೋಲಿಸ್ ಠಾಣೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ಸತ್ಕರಿಸಿ ಬಿಳ್ಕೋಟ್ಟರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಸರ್ಕಾರಿ ನೌಕರಿಯಲ್ಲಿ ವರ್ಗಾವಣೆ ಅನಿವಾರ್ಯ. ಜನರ ಮನೋಭಾವನೆಯನ್ನು ಅರಿತು ಕೆಲಸ ಮಾಡಿದರೆ ಯಶಸ್ಸು ಕಂಡಿತವಾಗಿಯೂ ದೊರೆಯುವುದು. ದೇವರ ಆಶೀರ್ವಾದ ಮತ್ತು ಮೂಡಲಗಿ ಜನರ ಬೆಂಬಲದಿಂದ ಉತ್ತಮ ಕಾರ್ಯ ನಿರ್ವಹಿಸಲೂ ಸಾಧ್ಯವಾಗಿದೆ ಎಂದರು.
ವೃತ್ತ ನೀರಿಕ್ಷಕ ವೆಂಕಟೇಶ ಮುರನಾಳ ಮಾತನಾಡಿ, ಪಿಎಸ್‍ಐ ಹಾಲಪ್ಪ ಬಾಲದಂಡಿಯವರು ಜನರರೊಂದಿಗೆ ಉತ್ತಮ ಬಾಂದವ್ಯವನ್ನು ಹೊಂದಿ ಎಂತಹ ಕಠಿಣ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವ ಅಧಿಕಾರಿ. ಕಲ್ಲು ಕರಗಿಸುವ ಗುಣ ಹೊಂದಿರುವ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಸಣ್ಣ ಪುಟ್ಟ ದೋಷಗಳಿಂದ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಆದರೆ ಇವರು ಯಾವ ವಿಷಯದಲ್ಲು ಕಪ್ಪು ಚುಕ್ಕೆ ಇಲ್ಲದೆ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ಮುಂಖಡರಾದ ಬಿ.ಬಿ.ಹಂದಿಗುಂದ ಮಾತನಾಡಿ, ತಾಲೂಕಿಗಾಗಿ 34 ದಿನ ನಡೆದ ಐತಿಹಾಸಿಕ ಹೋರಾಟದ ಸಂದರ್ಭದಲ್ಲಿ ಇವರು ನಿರ್ವಹಿಸಿದ ಕರ್ತವ್ಯವನ್ನು ಮೂಡಲಗಿ ಜನತೆ ಎಂದು ಮರೆಯಲೂ ಸಾಧ್ಯವಿಲ್ಲ. ಯಾವೂದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕೈಗೊಂಡು ಜನರ ಮನದಲ್ಲಿ ನೆಲೆಸಿದ್ದಾರೆ ಎಂದರು.
ಮೂಡಲಗಿ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶ್ರೀಪಾದಬೋದ ಸ್ವಾಮಿಜಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಎಲ್.ವಾಯ್ ಅಡಿಹುಡಿ, ಬಿ.ಸಿ ಪಾಟೀಲ, ಎನ್.ಎಸ್.ಒಡೆಯರ ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ಪಿಎಸ್‍ಐ ಶರಣೇಶ ಜಾಲಿಹಾಳ ಮತ್ತು ಸಬ್ ಕಾನ್‍ಸ್ಟೇಬಲ್ ಆಗಿ ಬಡ್ತಿ ಹೊಂದಿದ ಮಾರುತಿ ಪಡದಲ್ಲಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ರಾಜೇಂದ್ರ ಸಣ್ಣಕ್ಕಿ, ಭೀಮಶಿ ಮಗದುಮ್, ಪುರಸಭೆ ಮುಖ್ಯಾಧಿಕಾರಿ ಬಿ.ಬಿ.ಗೋರೋಶಿ, ಚಿದಾನಂದ ಮುಗಳಖೋಡ, ಮಾಜಿ ಅಧ್ಯಕ್ಷ ರವೀಂದ್ರ ಸಣ್ಣಕ್ಕಿ, ಸದಸ್ಯರಾದ ಎಸ್.ಎಸ್.ಪಾಟೀಲ, ರಮೇಶ ಸಣ್ಣಕ್ಕಿ, ಸಿದ್ದಣ್ಣ ದುರದುಂಡಿ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು, ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಎಸ್. ಎಚ್. ದೇವರ ನಿರೂಪಿಸಿದರು. ಡಿ.ಜಿ.ಕೊಣ್ಣೂರ ಸ್ವಾಗತಿಸಿದರು. ಅನೀಲ ಮಡಿವಾಳ ವಂದಿಸಿದರು.

Related posts: