ಖಾನಾಪುರ:ಮನೆಗೊಂದು ಸಸಿ ನೆಡುವ ಕಾರ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆಯಲ್ಲಿ ಬಸವರಾಜ ಸಾಣಿಕೊಪ್ಪ
ಮನೆಗೊಂದು ಸಸಿ ನೆಡುವ ಕಾರ್ಯವಾಗಬೇಕು : ವಿಶ್ವ ಪರಿಸರ ದಿನಾಚರಣೆಯಲ್ಲಿ ಬಸವರಾಜ ಸಾಣಿಕೊಪ್ಪ
ಖಾನಾಪುರ ಜೂ 6 : ಕಾಡಿನ ನಾಶದಿಂದ ಆಹಾರ ಅರಿಸಿ ಕಾಡು ಪ್ರಾಣಿಗಳು ನಾಡಿಗೆ ಬರಲಾರಂಬಿಸಿವೆ ಎಂದು ತಾಪಂ ಸದಸ್ಯ ಬಸವರಾಜ ಸಾಣಿಕೊಪ್ಪ ಹೇಳಿದರು.
ಇಟಗಿ ಗ್ರಾಮದಲ್ಲಿ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಇಟಗಿ ಇವರ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನೆಗೊಂದು ಸಸಿ ನೆಡುವ ಕಾರ್ಯವಾಗಬೇಕು. ಅರಣ್ಯ ನಾಶದಿಂದಾಗಿ ಮಳೆಯಿಲ್ಲ. ಮಳೆ ಇದ್ದರೇ ಬೆಳೆ ಎಂಬುದನ್ನು ಎಲ್ಲರೂ ತಿಳಿಯಬೇಕು. ಕಾಡಿನಿಂದ ನಾಡು ಉಳಿಯುತ್ತದೆ ಎಂದರು.
ಗ್ರಾಪಂ. ಅಧ್ಯಕ್ಷ ಅಪ್ಪಣ್ಣ ದೊಡಮನಿ ಮಾತನಾಡಿ, ಎಲ್ಲರೂ ಪರಿಸರ ಉಳಿಸಿದರೇ ಅದು ನಮ್ಮನ್ನು ಉಳಿಸುತ್ತದೆ. ಇಂದು ಪರಿಸರ ನಾಶದಿಂದಾಗಿ ಹಲವಾರು ನೈಸರ್ಗಿಕ ಅನಾಹುತಗಳನ್ನು ಎದುರಿಸುತ್ತಿದ್ದೇವೆ. ಕಾಡು ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಬಹಳ ತೊಂದರೆಯಾಗಬಹುದು ಎಂದರು.
ಉಪವಲಯ ಅರಣ್ಯಾಧಿಕಾರಿ ಎಸ್.ಕೆ.ಖೋತ, ಅರಣ್ಯ ಪ್ರೇರಕ ಕೆ.ಕೆ.ಚಿಪಕರ, ಗ್ರಾಪಂ. ಉಪಾಧ್ಯಕ್ಷೆ ರಾಧಾ ಕುಂಬಾರ, ಪಿಡಿಓ ಗುರುರಾಜ ಚರಕಿ, ಮುಖ್ಯೋಪಾಧ್ಯಾಯ ಬಿ.ಕೆ.ಕಾದ್ರೋಳ್ಳಿ, ಸುಂದರ ಕುಲಕರ್ಣಿ, ಕಲ್ಮೇಶ ಸಂಪಗಾವಿ, ನಾಗೇಶ ಮುರಗೋಡ, ಕೃಷ್ಣಾ ಕುಂಬಾರ, ಅದೃಶ್ಯ ದೊಡವಾಡ ಹಾಗೂ ಇತರರು ಉಪಸ್ಥಿತರಿದ್ದರು.