RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಯುವ ಸಮುದಾಯ ಸ್ವಚ್ಛತೆಯ ಜೊತೆಗೆ ಅರಿವು ಮೂಡಿಸುವಂತಹ ಕಾರ್ಯ ಮಾಡಬೇಕು-ನಾಡಗೇರಿ

ಗೋಕಾಕ:ಯುವ ಸಮುದಾಯ ಸ್ವಚ್ಛತೆಯ ಜೊತೆಗೆ ಅರಿವು ಮೂಡಿಸುವಂತಹ ಕಾರ್ಯ ಮಾಡಬೇಕು-ನಾಡಗೇರಿ 

ಯುವ ಸಮುದಾಯ ಸ್ವಚ್ಛತೆಯ ಜೊತೆಗೆ ಅರಿವು ಮೂಡಿಸುವಂತಹ ಕಾರ್ಯ ಮಾಡಬೇಕು-ನಾಡಗೇರಿ

ಗೋಕಾಕ ಅ 7 : ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ಯುವ ಸಮುದಾಯ ನೀಡಬೇಕೆಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜೆ.ಬಿ.ನಾಡಗೇರಿ ಹೇಳಿದರು.
ಅವರು ಮಂಗಳವಾರದಂದು ತಾಲೂಕಿನ ಜೋಕಾನಟ್ಟಿ ಗ್ರಾಮದಲ್ಲಿ ಬೆಳಗಾವಿಯ ನೆಹರು ಯುವ ಕೇಂದ್ರ ಹಾಗೂ ಸ್ಥಳೀಯ ಶ್ರೀ ಸಿದ್ಧಾರೂಢ ಮಹಿಳಾ ಕಲಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಮಹಾತ್ಮಾಗಾಂಧಿ ಸ್ವಚ್ಛತಾ ಹಾಗೂ ಶ್ರಮದಾನ ಕಾರ್ಯಕ್ರಮ ಅಂಗವಾಗಿ ಸ್ವಚ್ಛತಾ ಮಾಸಾಚರಣೆ ಕಾರ್ಯಕ್ರಮವನ್ನು ಜೋಕಾನಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಚಾಲನೆ ನೀಡಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ವ್ಯಕ್ತಿ ಮಹಾತ್ಮಾಗಾಂಧಿಜೀಯವರ ಕನಸು ನನಸು ಮಾಡಲು ನಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲರೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯ ನೆಹರು ಯುವ ಕೇಂದ್ರ ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗೋಕಾಕ ಯುವ ಸ್ವಯಂ ಸೇವಕರಾದ ಅಕ್ಕಮಹಾದೇವಿ ಮಾದರ. ಯಮನವ್ವ ಮಾದರ, ಬಸವರಾಜ ತಾವಲಗೇರಿ ಹಾಗೂ ಜಿ.ಬಿ.ಪೂಜೇರಿ, ಎಚ್.ಎನ್.ಜೋಕಾನಟ್ಟಿ, ಎಚ್.ಡಿ.ಪಂಚಾಳ, ಎಂ.ಜಿ.ಗೋರಗುದ್ದಿ, ಜಿ.ಜಿ.ಬಸ್ಮೆ, ಎನ್.ಎಸ್.ಕಂಬಳಿ, ರವಿ ರಾಜೇಶ, ಜಿ.ಆರ್. ಮುಗಳಖೋಡ, ವಿ.ಬಿ.ಶಿಂದೋಳಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

Related posts: