ಲೋಂಡಾ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ
ಲೋಂಡಾ ಜೂ 6: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಲೋಂಡಾ ವಲಯ ಅರಣ್ಯಾಧಿಕಾರಿ ಬಸವರಾಜ ವಾಳದ ಹೇಳಿದರು
ಲೋಂಡಾ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ
ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ಸಸಿಗೆ ನೀರೆರೆಯುವ ಮುಖಾಂತರ ಚಾಲನೆ ನೀಡಿ ಮಾತನಾಡಿದರು
ಅರಣ್ಯ ನಾಶ ಪರಿಸರ ವಿನಾಶ ವೆಂಬ ಸತ್ಯವನ್ನು ಅರಿತು ಇಂದು ನಾವು ಬಾಳಬೇಕಾಗಿದೆ ಪರಿಸರ ಸಂರಕ್ಷಣೆಗಾಗಿ ನಮ್ಮನ್ನು ನಾವು ತೊಡಗಿಸಿಕೊಂಡು ಸಸಿಗಳನ್ನು ನೆಟ್ಟು ಗಿಡಮರಗಳನ್ನು ಉಳಿಸಿ ಬೆಳೆಸಬೇಕಾಗಿದೆ ಅಂದಾಗ ಉತ್ತಮ ಮಳೆ ಬೆಳೆಯಾಗಲು ಸಾದ್ಯ ಎಂದು ವಾಳದ ಹೇಳಿದರು
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ದೇಸಾಯಿ ಮತ್ತು ಇಲಾಖೆಯ ಸಿಬ್ಬಂದಿಯರು ಉಪಸ್ಥಿತರಿದ್ದರು