RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಬೆಟಗೇರಿ ಮತ್ತು ಮುಗಳಖೋಡ ಒಂದು ನಾಣ್ಯದ ಎರಡು ಮುಖಗಳಿದಂತೆ

ಗೋಕಾಕ:ಬೆಟಗೇರಿ ಮತ್ತು ಮುಗಳಖೋಡ ಒಂದು ನಾಣ್ಯದ ಎರಡು ಮುಖಗಳಿದಂತೆ 

ಬೆಟಗೇರಿ ಮತ್ತು ಮುಗಳಖೋಡ ಒಂದು ನಾಣ್ಯದ ಎರಡು ಮುಖಗಳಿದಂತೆ

*ಗ್ರಾಮದೇವಿಯ ಜಾತ್ರೆಯ ಸತ್ಕಾರ ಸಮಾರಂಭದಲ್ಲಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ಅಭಿಮತ
ಬೆಟಗೇರಿ ಅ 10 :ಗ್ರಾಮದಲ್ಲಿ ಆಯೋಜಿದ ಗ್ರಾಮದೇವಿಯ ಜಾತ್ರೆಯೂ ದೇಶದಲ್ಲಿ ಸಡಗರದಿಂದ ಆಚರಿಸಲ್ಪಡುವ ದೀಪಾವಳಿ ಹಬ್ಬವಿದ್ದಂತೆ, ಭಂಡಾರ ಹಾರಿಸುವ ಮೂಲಕ ದ್ಯಾಮವ್ವದೇವಿಗೆ ಸ್ಥಳೀಯರು ಭಕ್ತಿ ಸಮರ್ಪನೆ ಮಾಡಿರುವದೇ ಗ್ರಾಮದೇವಿಯ ವಿಶೇಷ ಪರಂಪರೆಯಾಗಿದೆ ಎಂದು ಮುಗಳಖೋಡದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಶುಕ್ರವಾರ ಆ.10 ರಂದು ನಡೆದ ಗ್ರಾಮದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡ ಸತ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಬೆಟಗೇರಿ ಮತ್ತು ಮುಗಳಖೋಡ ಒಂದು ನಾಣ್ಯದ ಎರಡು ಮುಖಗಳಿದಂತೆ, ಪ್ರತಿ ಮನುಷ್ಯನಲ್ಲಿ ನಿಸ್ವಾರ್ಥ ಭಾವನೆಯ ಮನಸ್ಸು ಇದ್ದರೆ ದೇವರು ಅಂತಹವರ ಹೃದಯದಲ್ಲಿರುತ್ತಾನೆ.ಅವರ ಬದುಕು ಬಂಗಾರವಾಗಿರುತ್ತದೆ ಎಂದರು.
ಮಳೆಯಾಗಿ ಬೆಳೆ ಬಂದು ನೇಗಿಲಯೋಗಿಯ ಬದುಕು ಹಸನಾಗಲಿ, ಸಕಲ ಸಂಪತ್ತನ್ನು ಗ್ರಾಮದೇವತೆ ಕರುಣಿಸಲಿ, ಇಲ್ಲಿಯ ಗ್ರಾಮಸ್ಥರು ಧಾರ್ಮಿಕ ಕಾರ್ಯಗಳಿಗೆ ನೀಡುತ್ತಿರುವ ಸಹಾಯ, ಸಹಕಾರ ಮೆಚ್ಚುವಂತದಾಗಿದೆ. ಮಹಾತ್ಮರ ವಾಣಿ ಕೇಳುವುದರಿಂದ ತಮ್ಮ ಜೀವನ ಸಾರ್ಥಕವಾಗುತ್ತದೆ. ಸ್ಥಳೀಯರು ದೇವರ ಮೇಲೆ ಇಟ್ಟಿರುವ ಭಯ, ಭಕ್ತಿಯೇ ಇಲ್ಲಿ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಲು ಕಾರಣ ಎಂದು ಅಭಿಪ್ರಾಯ ಪಟ್ಟರು.
ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ಮಾತನಾಡಿ, ಗ್ರಾಮದೇವಿ ದ್ಯಾಮವ್ವಳ ಜಾತ್ರೆಗೆ ವಿಶಿಷ್ಟತೆ, ಐತಿಹಾಸಿಕ ಇತಿಹಾಸಗಳಿವೆ. ದುಷ್ಟ ಶಕ್ತಿಗಳನ್ನು ಹೊಡೆದೊಡಿಸುವ ಶಕ್ತಿ ಗ್ರಾಮದೇವಿಗಿದೆ. ಎಲ್ಲ ದೇವಾನೂ ದೇವತೆಗಳಲ್ಲಿ ಶ್ರೇಷ್ಠತೆ ಪಡಿದಿರುವಳು ಎಂದರು. ಭಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ ಅವರು ಸತ್ಕಾರ ಸ್ವೀಕರಿಸಿ ಮಾತನಾಡಿದರು. ಮಮದಾಪೂರದ ಮೌನ ಮಲ್ಲಿಕಾರ್ಜುನ ಸ್ವಾಮಿಜಿ, ಕಡಕೋಳದ ಸಿದ್ರಾಯಜ್ಜನವರು ಸಮಾರಂಭದ ನೇತೃತ್ವ ವಹಿಸಿದ್ದರು.
ಸಡಗರದಿಂದ ಜರುಗಿದ ಧಾರ್ಮಿಕ ಕಾರ್ಯಕ್ರಮ : ಗ್ರಾಮದೇವಿಯ 2ನೇ ವರ್ಷದ ಜಾತ್ರಾ ಮಹೋತ್ಸವ ಕೊನೆಯ ದಿನವಾದ ಶುಕ್ರವಾರದಂದು ಕೂಡಾ ಪುರಜನರಿಂದ ಶ್ರೀ ದೇವಿಗೆ ಉಡಿ ತುಂಬುವ, ನೈವೇಧ್ಯ ಸಮರ್ಪಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರದಿಂದ ನಡೆದವು. ಗ್ರಾಮ ದೇವಿಯ ಜಾತ್ರೆಯ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸುಮಂಗಲೆಯರ ಆರತಿ, ಸಕಲ ವಾದ್ಯಮೇಳಗಳೊಂದಿಗೆ ಸ್ವಾಮಿಜಿಗಳ ಭವ್ಯ ಮೆರವಣಿಗೆ ನಡೆದ ಬಳಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಸ್ವಾಮಿಜಿಗಳಿಗೆ, ಗಣ್ಯರಿಗೆ, ದಾನಿಗಳಿಗೆ ಜಾತ್ರಾಮಹೋತ್ಸವ ಸಮಿತಿ ವತಿಯಿಂದ ಸತ್ಕಾರ ನಡೆಯಿತು. ಗ್ರಾಮದಲ್ಲೆಡೆ ಗ್ರಾಮದೇವಿಗೆ ಭಕ್ತಿ-ಭಾವದ ಹೊಳೆ ಹರಿಯಿತು. ಭಂಡಾರ ಎರಚಾಟಕ್ಕೆ ದಿನವಿಡಿ ತೆರೆಬಿದ್ದಿತ್ತು. ಜೈ..ಜೈ..ದ್ಯಾಮವ್ವ ಶಬ್ಧ ಘೋಷದ ಅಬ್ಬರ್ ಇಂದು ಸಹ ಗ್ರಾಮದೆಲ್ಲೆಡೆ ಕೇಳಿಸಿತು. ಮಧ್ಯರಾತ್ರಿ ಶ್ರೀ ದೇವಿಯನ್ನು ಸೀಮೆಗೆ ಕಳುಹಿಸುವ ಮೂಲಕ ಪ್ರಸಕ್ತ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಗೋಕಾಕದ ಅಶೋಕ ಪಾಟೀಲ, ಯಕ್ಸಂಬಿ, ಸ್ಥಳೀಯ ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಬಳಿಗಾರ, ಹಿರಿಯ ನಾಗರಿಕ ಲಕ್ಷ್ಮಣ ಸೋನಗೌಡ್ರ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಸಂತ ಶರಣರು, ಗ್ರಾಪಂ ಸದಸ್ಯರು, ಗ್ರಾಮದ ಎಲ್ಲ ಸಮುದಾಯದ ಹಿರಿಯರು, ಮಹಿಳೆಯರು, ಯುವಕ-ಯುವತಿಯರು, ಅಪಾರ ಸಂಖ್ಯೆಯಲ್ಲಿ ಗ್ರಾಮದೇವಿ ಭಕ್ತರು, ಗ್ರಾಮಸ್ಥರು, ಗ್ರಾಮದೇವಿಯ 2ನೇ ವರ್ಷದ ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು, ಇತರರು ಇದ್ದರು.

Related posts: