ಗೋಕಾಕ:ಮಕ್ಕಳಿಗೆ ಅತ್ಯುನ್ನತ ಶಿಕ್ಷಣ ಕೊಡಿಸುವದಕ್ಕೆ ಶ್ರಮಿಸಿ : ನಜೀರಅಹಮ್ಮದ ಶೇಖ
ಮಕ್ಕಳಿಗೆ ಅತ್ಯುನ್ನತ ಶಿಕ್ಷಣ ಕೊಡಿಸುವದಕ್ಕೆ ಶ್ರಮಿಸಿ : ನಜೀರಅಹಮ್ಮದ ಶೇಖ
ಗೋಕಾಕ ಅ 11 : ಶೈಕ್ಷಣಿಕವಾಗಿ ಹಿಂದುಳಿದಿರುವ ನದಾಫ (ಪಿಂಜಾರ) ಸಮಾಜದವರು ತಮ್ಮ ಮಕ್ಕಳಿಗೆ ಅತ್ಯುನ್ನತ ಶಿಕ್ಷಣ ಕೊಡಿಸುವದಕ್ಕೆ ಶ್ರಮಿಸಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ನದಾಫ (ಪಿಂಜಾರ) ಸಂಘದ ಮಾಜಿ ತಾಲೂಕಾಧ್ಯಕ್ಷ ಹಾಜಿ ನಜೀರಅಹಮ್ಮದ ಶೇಖ ಹೇಳಿದರು.
ಅವರು ಶನಿವಾರದಂದು ನಗರದ ಸಂಘದ ಕಾರ್ಯಾಲಯದಲ್ಲಿ ನೂತನ ತಾಲೂಕಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
ಕಳೆದ 15 ವರ್ಷಗಳಿಂದ ಸಂಘದ ಅಧ್ಯಕ್ಷನಾಗಿ ಎಲ್ಲರ ಸಹಕಾರದಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸರಕಾರ ನದಾಫ (ಪಿಂಜಾರ) ಸಮಾಜದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳನ್ನು ಜಾರಕಿಹೊಳಿ ಸಹೋದರರ ಸಹಕಾರದಿಂದ ಪಡೆದು ಮುಂದೆ ಬರಬೇಕೆಂದು ತಿಳಿಸಿದರು.
ಸಂಘದ ನೂತನ ಅಧ್ಯಕ್ಷರಾಗಿ ಮೀರಾಸಾಬ ನದಾಫ, ಉಪಾಧ್ಯಕ್ಷರಾಗಿ ಗಜಬರಸಾಬ ನದಾಫ, ಕಾರ್ಯದರ್ಶಿಯಾಗಿ ಮಸ್ತಾಕಅಲಿ ನದಾಫ, ಖಜಾಂಚಿಯಾಗಿ ಬಾಬರ ಶೇಖ, ಸಂಘಟನಾ ಕಾರ್ಯದರ್ಶಿಯಾಗಿ ಇಕಬಾಲ ನದಾಫ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಇಸ್ಮಾಯಿಲಸಾಬ ನದಾಫ, ಹುಸೇನಸಾಬ ನದಾಫ, ಯುನೂಸ ನದಾಫ, ಮೀರಾ ನದಾಫ, ನೂರಅಹಮ್ಮದ ನದಾಫ, ಸಾಹೀಲ ನದಾಫ ಸೇರಿದಂತೆ ಅನೇಕರು ಇದ್ದರು