ಗೋಕಾಕ:ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ಅವರಿಗೆ ಸತ್ಕಾರ
ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ಅವರಿಗೆ ಸತ್ಕಾರ
ಬೆಟಗೇರಿ ಅ 11 : ಗ್ರಾಮದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮದ ಗಜಾನನ ವೇದಿಕೆಯಲ್ಲಿ ಶುಕ್ರವಾರ ಆ.10ರಂದು ನಡೆದ ಸತ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಮುಗಳಖೋಡದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ಅವರನ್ನು ಜಾತ್ರಾಮಹೋತ್ಸವ ಸಮಿತಿ ವತಿಯಿಂದ ಶ್ರೀಶೈಲ ಗಾಣಗಿ, ವಿಠಲ ಕೋಣಿ ಸತ್ಕರಿಸಿದರು.
ಬಳಿಕ ವೇದಿಕೆ ಮೇಲೆ ಇದ್ದ ಸ್ವಾಮಿಜಿಗಳಿಗೆ, ಗಣ್ಯರಿಗೆ, ದಾನಿಗಳಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ, ಸಾಧಕರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು. ಸ್ಥಳೀಯ ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು.
ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ, ಭಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯ ಸ್ವಾಮಿಜಿ, ಮಮದಾಪೂರದ ಮೌನ ಮಲ್ಲಿಕಾರ್ಜುನ ಸ್ವಾಮಿಜಿ, ಕಡಕೋಳದ ಸಿದ್ರಾಯಜ್ಜನವರು, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಗೋಕಾಕದ ಅಶೋಕ ಪಾಟೀಲ, ಯಕ್ಸಂಬಿ, ಹಿರಿಯ ನಾಗರಿಕ ಲಕ್ಷ್ಮಣ ಸೋಮನಗೌಡ್ರ, ಶಿವಾಜಿ ನೀಲಣ್ಣವರ, ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಗ್ರಾಪಂ ಸದಸ್ಯರು, ಗ್ರಾಮದ ಎಲ್ಲ ಸಮುದಾಯದ ಹಿರಿಯರು, ಮಹಿಳೆಯರು, ಅಪಾರ ಸಂಖ್ಯೆಯಲ್ಲಿ ಗ್ರಾಮದೇವಿ ಭಕ್ತರು, ಗ್ರಾಮದೇವಿಯ ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು, ಇತರರು ಇದ್ದರು.
ಬಸವರಾಜ ಪಣದಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವೀರನಾಯ್ಕ ನಾಯ್ಕರ ಕೊನೆಗೆ ವಂದಿಸಿದರು.