RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

ಗೋಕಾಕ:ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ 

ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

ಗೋಕಾಕ ಅ 11 : ಲಯನ್ಸ್ ಹಾಗೂ ಲಯನೆಸ್ ಸಂಸ್ಥೆ ಮತ್ತು ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ| ಅಶೋಕ ಮುರಗೋಡ ಆಸ್ಪತ್ರೆಯಲ್ಲಿ ಶನಿವಾರದಂದು 26ನೇ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ| ಆರ್.ಬಿ.ಪಟಗುಂದಿ ಉದ್ಘಾಟಿಸಿ ಮಾತನಾಡಿ ತಾಲೂಕಿನ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ 25 ಉಚಿತ ಶಿಬಿರಗಳನ್ನು ಆಯೋಜಿಸಿದ್ದು ಶಿಬಿರದ ಸದುಪಯೋಗವನ್ನು ಸಾಕಷ್ಟು ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿದ್ದು ಈ ಶಿಬಿರದಲ್ಲಿ 45 ಜನ ಫಲಾನುಭವಿಗಳ ನೇತ್ರವನ್ನು ತಪಾಸಿಸಿ 30 ಜನರ ನೇತ್ರಗಳಿಗೆ ಶಸ್ತ್ರ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಜೋಶಿ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೋಶಿ ಆಸ್ಪತ್ರೆಯ ಡಾ| ಅನುಷಾ, ಡಾ| ಮುತ್ತುರಾಜ ಪಾಟೀಲ, ಪದಾಧಿಕಾರಿಗಳಾದ ಜಿ.ಎಸ್.ಸಿದ್ದಾಪೂರಮಠ, ಎಸ್.ಎಂ.ಹತ್ತಿಕಟಗಿ, ಡಾ| ಅಶೋಕ ಮುರಗೋಡ, ಡಾ| ಅಶೋಕ ಪಾಟೀಲ, ರವೀಂದ್ರ ಕೌಜಲಗಿ, ಅಶೋಕ ಕಪ್ಪಲಗುದ್ದಿ, ಅಶೋಕ ಪಾಟೀಲ ಇದ್ದರು.

Related posts: