ಬೆಳಗಾವಿ:ಮಾದಕ ದ್ರವ್ಯ ತ್ಯಜಿಸಿ : ಬೆಳಗಾವಿಯಲ್ಲಿ ಮ್ಯಾರಾಥಾನ್ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು
ಮಾದಕ ದ್ರವ್ಯ ತ್ಯಜಿಸಿ : ಬೆಳಗಾವಿಯಲ್ಲಿ ಮ್ಯಾರಾಥಾನ್ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು
ಬೆಳಗಾವಿ ಅ 12: ಮಾದಕ ದ್ರವ್ಯ ತ್ಯಜಿಸಿ ಎಂಬ ವಿಷಯದ ಕುರಿತು ಬೆಳಗಾವಿ ನಗರದಲ್ಲಿ ಜಾಗೃತಿ ಮೂಡಿಸುವ ಮ್ಯಾರಾಥಾನ ಕಾರ್ಯಕ್ರಮವನ್ನು ರವಿವಾರದಂದು ಬೆಳ್ಳಿಗೆ ನಡೆಸಲಾಯಿತು
ನಗರ ಪೊಲೀಸ್ ಕಮೀಷನರ್ ಕಚೇರಿ ಹಾಗೂ ಬೆಂಗಳೂರಿನ ಆರೋಹಣ ಸಂಸ್ಥೆ ವತಿಯಿಂದ ಈ ಮ್ಯಾರಾಥಾನ್ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ಚಾಲನೆ ನೀಡಿದರು. 5 ಕೀ. ಮೀ ಮತ್ತು 10 ಕೀ. ಮೀ ಹೀಗೆ ಎರಡು ವಿಭಾಗಗಳಲ್ಲಿ ನಡೆದ ಮ್ಯಾರಾಥಾನ್ ನಗರದ ಸಿಪಿಇಡಿ ಮೈದಾನದಿಂದ ಆರಂಭವಾಗಿತ್ತು.
ಪೊಲೀಸ್ ಆಯುಕ್ತ ಡಾ.ಡಿ.ಸಿ ರಾಜಪ್ಪ ಹಾಗೂ ಡಿಸಿಪಿ ಸೀಮಾ ಲಾಟ್ಕರ್ ಮ್ಯಾರಾಥಾನ್ನಲ್ಲಿ ಪಾಲ್ಗೊಂಡು ಗಮನ ಸೆಳೆದರು. ಪೊಲೀಸ್ ಸಿಬ್ಬಂದಿ ಹಾಗೂ ಸಾವಿರಾರು ನಾಗರಿಕರು ಮ್ಯಾರಾಥಾನ್ನಲ್ಲಿ ಪಾಲ್ಗೊಂಡು ಮಾದಕ ದ್ರವ್ಯ ತ್ಯಜಿಸುವ ಕುರಿತು ಜಾಗೃತಿ ಮೂಡಿಸಿದರು. ಮಳೆಯ ನಡುವೆಯೂ ಸಾವಿರಾರು ನಾಗರಿಕರು ಶ್ವೇತವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು ಎಲ್ಲರ ಗಮನ ಸೆಳೆದರು.