RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಬೆಟಗೇರಿ ದ್ಯಾಮವ್ವದೇವಿ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ

ಗೋಕಾಕ:ಬೆಟಗೇರಿ ದ್ಯಾಮವ್ವದೇವಿ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ 

ಬೆಟಗೇರಿ ದ್ಯಾಮವ್ವದೇವಿ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ

ಬೆಟಗೇರಿ ಅ 12 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿಯ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ ನೀಡುವ ಪ್ರಯುಕ್ತ ಹೋಮ, ಹವನ, ಪೂಜೆ, ಪುನಸ್ಕಾರ ಸೇರಿದಂತೆ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳಂತೆ ವಿವಿಧ ಕಾರ್ಯಕ್ರಮಗಳು ರವಿವಾರ ಆ.12 ರಂದು ಸಡಗರದಿಂದ ನಡೆದವು.
ಗ್ರಾಮದೇವಿಯ 2ನೇ ವರ್ಷದ ಜಾತ್ರಾ ಮಹೋತ್ಸವ ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಆ.6-10ರವರೆಗೆ ಅದ್ಧೂರಿಯಿಂದ ನಡೆದ ಪ್ರಯುಕ್ತ ಆ.10 ರಂದು ಮಧ್ಯರಾತ್ರಿ ಶ್ರೀ ದೇವಿಯನ್ನು ಸೀಮೆಗೆ ಕಳುಹಿಸುವ ಮೂಲಕ ಪ್ರಸಕ್ತ ಜಾತ್ರಾ ಮಹೋತ್ಸವ ಸಂಪನ್ನಗೊಂಡ ಹಿನ್ನಲೆಯಲ್ಲಿ ಕಳೆದೆರಡು ದಿನಗಳಿಂದ ಗ್ರಾಮದೇವಿಯ ದೇವಸ್ಥಾನದಲ್ಲಿರುವ ಗರ್ಭಗುಡಿಯ ಬಾಗಿಲು ಸಂಪೂರ್ಣ ಮುಚ್ಚಲಾಗಿತ್ತು, ದೇವಿಮೂರ್ತಿ ಕಾಣದಂತೆ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶವಿರಲಿಲ್ಲ, ಹೀಗಾಗಿ ಇಂದು ದೇವಿಗೆ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಹೋಮ, ಹವನ, ಪೂಜೆ, ಪುನಸ್ಕಾರ ಪೂಜೆ, ನೈವೇಧ್ಯ ಸಮರ್ಪಿಸುವ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದ ಬಳಿಕ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಯಿತು.
ಜಾತ್ರಾ ಮಹೋತ್ಸವ ಯಶಸ್ವಿಗೆ ಸಹಕರಿಸಿದ ಗ್ರಾಮದ ಗಣ್ಯರಿಗೆ, ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರಿಗೆ, ಮತ್ತೀತರರಿಗೆ ದೇವಸ್ಥಾನ ಅರ್ಚಕರಿಂದ ಗ್ರಾಮದೇವಿಯ ಆರ್ಶೀವಾದದ ತೆಂಗಿನಕಾಯಿ, ಪುಷ್ಪ ನೀಡುವ ಕಾರ್ಯಕ್ರಮ ಜರುಗಿದ ಬಳಿಕ ಮಹಾಪ್ರಸಾದ ನಡೆಯಿತು.
ಸ್ಥಳೀಯ ಹಿರಿಯರಾದ ರಾಮಣ್ಣ ಬಳಿಗಾರ, ಲಕ್ಷ್ಮಣ ಸೋಮನಗೌಡ್ರ, ಶಿವಾಜಿ ನೀಲಣ್ಣವರ, ಶ್ರೀಶೈಲ ಗಾಣಗಿ, ಬಸವರಾಜ ಪಣದಿ, ವೀರನಾಯ್ಕ ನಾಯ್ಕರ, ವಿಠಲ ಕೋಣಿ, ಕೆಂಪ್ಪಣ್ಣ ಪೇದನ್ನವರ, ಮುತ್ತೆಪ್ಪ ವಡೇರ, ಕಲ್ಲಪ್ಪ ಚಂದರಗಿ, ರಾಜು ಪತ್ತಾರ, ದೇವಸ್ಥಾನ ಅರ್ಚಕ ಬಾಳಪ್ಪ ಬಡಿಗೇರ, ಸುರೇಶ ಬಡಿಗೇರ, ವಿಠಲ ಚಂದರಗಿ, ಕಾಳಪ್ಪ ಪತ್ತಾರ, ಲಕ್ಷ್ಮಣ ಚಂದರಗಿ, ಅಜ್ಜಪ್ಪ ಪೇದನ್ನವರ, ವಿಜಯ ಪಣದಿ ಗ್ರಾಮದ ಎಲ್ಲ ಸಮುದಾಯದ ಹಿರಿಯರು, ಮಹಿಳೆಯರು, ಗ್ರಾಮದೇವಿಯ 2ನೇ ವರ್ಷದ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಇತರರು ಇದ್ದರು
.

Related posts: