ಗೋಕಾಕ:ಬಸ್ಸಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು : ಸಂಚಾರ ಅಸ್ತವ್ಯಸ್ತ
ಬಸ್ಸಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು : ಸಂಚಾರ ಅಸ್ತವ್ಯಸ್ತ
ಗೋಕಾಕ ಅ 13 : ದಿಢೀರನೆ ಬಸ್ ವ್ಯವಸ್ಥೆ ಸ್ಥಗಿತ ಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ಗೋಕಾಕದಲ್ಲಿ ನಡೆದಿದೆ
ಗೋಕಾಕ ತಾಲೂಕಿನ ಖನಗಾಂವ ಗ್ರಾಮದಿಂದ ಗೋಕಾಕ ನಗರಕ್ಕೆ ವಿದ್ಯಾಬ್ಯಾಸಕ್ಕಾಗಿ ದಿನ ನೂರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ . ಯಾವುದೇ ಮುನ್ನಸೂಚನೆ ನೀಡದೆ ದಿಢೀರ ಬಸ್ ವ್ಯವಸ್ಥೆ ರದ್ದು ಮಾಡಿದ ಪರಿಣಾಮ ವಿದ್ಯಾರ್ಥಿಗಳು ಸೋಮವಾರದಂದು ಗೋಕಾಕ ನಗರದ ಬಸ್ ನಿಲ್ದಾಣದ ಎದುರು ರಸ್ತೆ ತಡೆ ನಡೆಯಿಸಿ ಪ್ರತಿಭಟನೆ ನಡೆಸಿದರು
ವಿದ್ಯಾರ್ಥಿಗಳು ದಿಢೀರ ಪ್ರತಿಭಟನೆ ಕೈಗೊಂಡ ಪರಿಣಾಮ ಬಸ್ ನಿಲ್ದಾಣದ ಎದುರು ಸಂಚಾರ ದಟ್ಟನೆ ಎದುರಾಗಿ ವಾಹನ ಸವಾರರು ಪರದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು . ಘಟನೆ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ನಗರ ಠಾಣೆಯ ಪಿಎಸ್ಐ ಗುರುನಾಥ್ ಅವರು ಘಟಕ ವ್ಯವಸ್ಥಾಪಕರನ್ನು ಕರೆಯಿಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು . ಘಟಕ ವ್ಯವಸ್ಥಾಪಕರು ವಿದ್ಯಾರ್ಥಿಗಳಿಗೆ ತೊಂದರೆ ಯಾಗದಂತೆ ಬಸ್ ಎದಿನಂತೆ ಮತ್ತೆ ಮುಂದುವರೆಸಲಾಗುವದೆಂದು ಭರವಸೆ ನೀಡಿದ ಪರಿಣಾಮ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು