RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ವಿಕಾಸಗೊಳ್ಳುತ್ತದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ

ಗೋಕಾಕ:ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ವಿಕಾಸಗೊಳ್ಳುತ್ತದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ 

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ವಿಕಾಸಗೊಳ್ಳುತ್ತದೆ : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ

ಗೋಕಾಕ ಅ 13 : ಪ್ರವಚನ, ಭಜನೆ,ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ವಿಕಾಸಗೊಳ್ಳುತ್ತದೆ ಎಂದು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.
ಅವರು ರವಿವಾರದಂದು ಸಂಜೆ ವಿವೇಕಾನಂದ ನಗರದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿಯವರು ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಪರ್ಯಂತ ಆಯೋಜಿಸಿದ್ದ ಶ್ರೀ ಅವಧೂತ ನಾಗಲಿಂಗ ಮಹಾತ್ಮರ ಚರಿತ್ರೆ ಕುರಿತು ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರಾವಣ ಮಾಸದಲ್ಲಿ ಮಹಾತ್ಮರ ಚರಿತ್ರೆ ಹಾಗೂ ಅವರ ನಾಮಸ್ಮರಣೆ ಮಾಡುವುದು ಭಾರತೀಯ ಸಂಸ್ಕøತಿಯಾಗಿದ್ದು ಶ್ರಾವಣ ಮಾಸ ಕೇಳುವ ಮಾಸವಾಗಿದೆ. ನಾವು ಕೇಳಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಾತ್ಮರ ಸಂದೇಶಗಳನ್ನು ಯಾವುದೇ ಜಾತಿಗೆ ಸಿಮೀತಗೊಳಿಸದೇ ಎಲ್ಲರೂ ಆಚರಣೆಗೆ ತರಬೇಕು. ಕನ್ನಡ ಮಾತೆ ನಾಡಿಗೆ ಸಾಕಷ್ಟು ಮಹಾತ್ಮರನ್ನು ಕೊಡುಗೆಯಾಗಿ ನೀಡಿದ್ದಾಳೆ. ಅಂತಹ ಮಹಾತ್ಮರಲ್ಲಿ ನಾಗಲಿಂಗ ಮಹಾತ್ಮರು ಒಬ್ಬರಾಗಿದ್ದಾರೆ. ಅವರ ಚರಿತ್ರೆಯನ್ನು ಕೇಳಿ ಪುಣ್ಯವಂತರಾಗಿರೆಂದು ಹೇಳಿದರು.
ವೇದಿಕೆ ಮೇಲೆ ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿ ಅಧ್ಯಕ್ಷ ಬಿ.ಬಿ.ಕಾಪಶಿ,ಪ್ರವಚನಕಾರ ಬಸವರಾಜ ಶರಣರು, ಅತಿಥಿಗಳಾದ ಮಹಾಂತೇಶ ತಾಂವಶಿ, ಕೆ.ಬಿ.ಮಾದಗೌಡ, ಶಿವಾನಂದ ಹತ್ತಿ, ಎಂ.ಕೆ.ಮೂಡಲಗಿ, ವಿಜಯ ಬೂಜನ್ನವರ, ಭಾರತಿ ಹತ್ತಿ, ಸಮಿತಿಯ ಪದಾಧಿಕಾರಿಗಳಾದ ಜೀವಪ್ಪ ಬಡಿಗೇರ, ವೀರಭದ್ರ ಸೆಬನ್ನವರ, ಅಶೋಕ ಗೋಣಿ, ಉದಯ ಬನ್ನಶೆಟ್ಟಿ, ಈಶ್ವರ ಪಾಟೀಲ, ಲಕ್ಕಪ್ಪ ಕೊತ್ತಲ,ಬಾಳೇಶ ಕರಿಗಾರ, ಶಿದ್ಲಿಂಗಪ್ಪ ದಾಸಪ್ಪನವರ, ಅಮರಗುಂಡಪ್ಪ ಬಿಜ್ಜಳ, ಭೀಮಪ್ಪ ಗೋಲಬಾವಿ, ಜಗದೇವಿ ಭೋಸಗಾ, ಮಹಾದೇವಿ ಹಿರೇಮಠ, ಪ್ರೇಮಲತಾ ಕಡಗದ ಇದ್ದರು.
ಶಿಕ್ಷಕ ಕೆ.ಎ.ಕೊಲ್ಲಾಪೂರೆ ಸ್ವಾಗತಿಸಿ,ವಂದಿಸಿದರು.

Related posts: