ಗೋಕಾಕ:ಬಸವರಾಜ ಪಣದಿ ಮತ್ತು ವೀರನಾಯ್ಕ ನಾಯ್ಕರ ಅವರ ಸೇವೆ ಅವಿಸ್ಮರಣಿಯ : ಶಿವಾಜಿ ನೀಲಣ್ಣವರ
ಬಸವರಾಜ ಪಣದಿ ಮತ್ತು ವೀರನಾಯ್ಕ ನಾಯ್ಕರ ಅವರ ಸೇವೆ ಅವಿಸ್ಮರಣಿಯ : ಶಿವಾಜಿ ನೀಲಣ್ಣವರ
ಬೆಟಗೇರಿ ಅ 13 : ಕಳೆದ ಮೂರ್ನಾಲ್ಕು ದಶಕದಿಂದ ಗ್ರಾಮದಲ್ಲಿ ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿರುವ ಇಲ್ಲಿಯ ಬಸವರಾಜ ಪಣದಿ ಮತ್ತು ವೀರನಾಯ್ಕ ನಾಯ್ಕರ ಅವರ ನಿರಂತರ ನಿರೂಪಕ ಸೇವೆ ಅವಿಸ್ಮರಣಿಯವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ಹಿರಿಯರಾದ ಶಿವಾಜಿ ನೀಲಣ್ಣವರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಲಕ್ಷ್ಮೀದೇವಿಯ ದೇವಾಲಯದ ಸಭಾಂಗಣದಲ್ಲಿ ಸೋಮವಾರ ಆ.13 ರಂದು ನಡೆದ ಗ್ರಾಮದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರಾ ಮಹೋತ್ಸವ ಸಮಾರೂಪ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನಿರೂಪಕರಾದ ಪಣದಿ ಮತ್ತು ನಾಯ್ಕರ ಅವರನ್ನು ಸತ್ಕರಿಸಿ ಮಾತನಾಡಿ, ಸತತ ಐದು ದಿನಗಳ ಕಾಲ ಅದ್ಧೂರಿಯಾಗಿ ಜರುಗಿದ ಗ್ರಾಮದೇವಿ ಜಾತ್ರೆಯ ಯಶಸ್ವಿಗೆ ಸಹಾಯ ನೀಡಿದ ಹಾಗೂ ಶಾಂತಿ, ಸೌಹಾರ್ಧತೆಯಿಂದ ಸಹಕರಿಸಿದ ಗ್ರಾಮಸ್ಥರ ಕಾರ್ಯಕ್ಕೆ ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತ್ರಾಮಹೋತ್ಸವ ಸಮಿತಿ ಸದಸ್ಯ, ಯುವ ಮುಖಂಡ ವಿಠಲ ಕೋಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮದ ವಿವಿಧ ಕಾರ್ಯಕ್ರಮಗಳಲ್ಲಿ ಬೆಸ್ಟ್ ನಿರೂಪಕರಾಗಿ ಸ್ಥಳೀಯ ಬಸವರಾಜ ಪಣದಿ ಮತ್ತು ವೀರನಾಯ್ಕ ನಾಯ್ಕರ ಅವರ ನಿರಂತರ ಸಲ್ಲಿಸುತ್ತಿರುವ ನಿರೂಪಕ ಸೇವೆಯನ್ನು ಹಾಗೂ ಪ್ರತಿ ಧಾರ್ಮಿಕ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ನೀಡುವ ಸಹಾಯ, ಸಹಕಾರ ಕುರಿತು ಶ್ಲಾಘಿಸಿದರು.
ಗ್ರಾಮದೇವಿಯ ಜಾತ್ರಾ ಮಹೋತ್ಸವ ಸಮಾರೂಪ ಕಾರ್ಯಕ್ರಮದ ನಿಮಿತ್ತ ಸೋಮವಾರದಂದು ಕೂಡಾ ಪುರಜನರಿಂದ ದೇವಿಗೆ ಪೂಜೆ, ನೈವೇಧ್ಯ ಸಮರ್ಪಣೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಿರೂಪಕರಾದ ಬಸವರಾಜ ಪಣದಿ ಮತ್ತು ವೀರನಾಯ್ಕ ನಾಯ್ಕರ ಅವರನ್ನು ಗ್ರಾಮದೇವಿ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸತ್ಕರಿಸಿದ ಬಳಿಕ ಪ್ರಸಾದ ವಿತರಿಸುವ ಮೂಲಕ ಪ್ರಸಕ್ತ ಜಾತ್ರಾ ಮಹೋತ್ಸವ ಸಮಾರೂಪಗೊಂಡಿತು. ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಬಳಿಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಿರಿಯರಾದ ಲಕ್ಷ್ಮಣ ಸೋಮನಗೌಡ್ರ, ಶ್ರೀಶೈಲ ಗಾಣಗಿ, ಸದಾಶಿವ ಕುರಿ, ವಿಠಲ ಲಕ್ಷ್ಮಣ ಕೋಣಿ, ಕೆಂಪ್ಪಣ್ಣ ಪೇದನ್ನವರ, ಮುತ್ತೆಪ್ಪ ವಡೇರ, ಕಲ್ಲಪ್ಪ ಚಂದರಗಿ, ದೇವಸ್ಥಾನ ಅರ್ಚಕ ಬಾಳಪ್ಪ ಬಡಿಗೇರ, ವಿಠಲ ಚಂದರಗಿ, ಕಾಳಪ್ಪ ಪತ್ತಾರ, ಲಕ್ಷ್ಮಣ ಚಂದರಗಿ, ಗ್ರಾಮದ ಎಲ್ಲ ಸಮುದಾಯದ ಹಿರಿಯರು, ಗ್ರಾಮದೇವಿಯ 2ನೇ ವರ್ಷದ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಇತರರು ಇದ್ದರು.
ಸುರೇಶ ಬಡಿಗೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಜು ಪತ್ತಾರ ಕೊನೆಗೆ ವಂದಿಸಿದರು.