RNI NO. KARKAN/2006/27779|Thursday, December 12, 2024
You are here: Home » breaking news » ಬೈಲಹೊಂಗಲ:ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನೇಗಿನಹಾಳ ಭಜನಾ ತಂಡ

ಬೈಲಹೊಂಗಲ:ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನೇಗಿನಹಾಳ ಭಜನಾ ತಂಡ 

ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನೇಗಿನಹಾಳ ಭಜನಾ ತಂಡ

ಬೈಲಹೊಂಗಲ ಅ 14 : ಕಲೆ ಸಾಹಿತ್ಯ ಸಂಗೀತದಲ್ಲಿ ಹೆಸರುವಾಸಿಯಾಗಿರುವ ನೇಗಿನಹಾಳ ಗ್ರಾಮ ವಿವಿಧತೆಯಿಂದ ಕೂಡಿದ ಸಮೃದ್ಧ ಗ್ರಾಮವಾಗಿದೆ. ಇದು ಕಲೆ, ಸಾಹಿತ್ಯ ಕ್ರೀಡೆ, ರಾಜಕೀಯ, ಶಿಕ್ಷಣ ಹಾಗೂ ದೇಶ ಪ್ರೇಮಿಗಳನ್ನು ನಾಡಿಗೆ ನೀಡಿದ ಹೆಸರುವಾಸಿ ಗ್ರಾಮವಾಗಿದೆ.
ಚಿತ್ರದುರ್ಗ ಜಿಲ್ಲೆಯ ಸಿರಿಗೆರಿ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ತರಳಬಾಳು ಜಗದ್ಗುರು ಬೃಹನ್ಮಠದ ಆವರಣದಲ್ಲಿ ಪ್ರತಿವರ್ಷ ಅಣ್ಣನ ಬಳಗದಿಂದ ಆಯೋಜಿಸಿದ್ದ ರಾಜ್ಯಮಟ್ಟದ 32ನೆಯ ಭಜನಾ ಮೇಳದಲ್ಲಿ ನೇಗಿನಹಾಳ ಗ್ರಾಮದ ಈರಪ್ಪಜ್ಜನವರ ಭಜನಾ ಸಂಘ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದು ಗ್ರಾಮಸ್ಥರಲ್ಲಿ ಹರ್ಷವನ್ನುಂಟು ಮಾಡಿದೆ. ಭಾಗವಹಿಸಿದ ಕಲಾವಿದರಾದ ಹಾರ್ಮೂನಿಯಂ ಮಹಾಂತೇಶ ಬೈಲವಾಡ, ಮುಖ್ಯ ಗಾಯಕ ಮಡಿವಾಳಪ್ಪ ಪಟ್ಟೇದ, ದಗ್ಗಾ ವಾದಕ ರಾಜಶೇಖರ ಬನ್ನೂರ, ಸಂಘಡಿಗರಾದ ಅಶೋಕ ಜೈನರ, ಈರಪ್ಪ ಪಟ್ಟೇದ, ನಿಂಗಪ್ಪ ಚನ್ನಪಗೌಡರ, ಭೀಮಶಿ ಪೂಜೇರಿ, ಬಸವರಾಜ ನರಸನ್ನವರ, ಅಂಬೋಜಿ ಕಾಮಕರ, ಚಂದು ಕೊಳ್ಳಿ ಇವರಿಗೆ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು ಪ್ರಥಮ ಸ್ಥಾನ ನೀಡಿ ಪ್ರಶಸ್ತಿ ಪತ್ರ ವಿತರಿಸಿದರು.

Related posts: