RNI NO. KARKAN/2006/27779|Thursday, December 12, 2024
You are here: Home » breaking news » ಖಾನಾಪುರ:ವಿಷಕಾರಿ ಹುಲ್ಲು ಸೇವಿಸಿ ಮೂರು ಹಸುಗಳ ಸಾವು : ಖಾನಾಪುರದಲ್ಲಿ ಘಟನೆ

ಖಾನಾಪುರ:ವಿಷಕಾರಿ ಹುಲ್ಲು ಸೇವಿಸಿ ಮೂರು ಹಸುಗಳ ಸಾವು : ಖಾನಾಪುರದಲ್ಲಿ ಘಟನೆ 

ವಿಷಕಾರಿ ಹುಲ್ಲು ಸೇವಿಸಿ ಮೂರು ಹಸುಗಳ ಸಾವು : ಖಾನಾಪುರದಲ್ಲಿ ಘಟನೆ

ಖಾನಾಪುರ ಅ 14 : ಕುಟುಂಬ ಜೀವನಾಧಾರಕ್ಕೆ ‌ಇರುವುದು ಕೇವಲ ೧.೫ಎಕರೆ‌ ಜಮೀನು, ಆದರೆ ಇರುವ ತುಂಡು ಭೂಮಿಯಲ್ಲಿ ಸಾಲ ಮಾಡಿ ಫಾರ್ಮಹೌಸ ನಿರ್ಮಿಸಿದ್ದಾರೆ.

ಆದರೆ ಸಾಲ ಮಾಡಿ ನಿರ್ಮಿಸಿದ್ದ ಮನೆಯಲ್ಲಿ ಏನಾದರೂ ಉದ್ಯೋಗ ಪ್ರಾರಂಭಿಸಿ ಜೀವನ ರೂಪಿಸಿಕೊಳ್ಳಬೇಕೆಂದು ಸಾಲ‌ಮಾಡಿಯೇ ಹಸುಗಳನ್ನು ಖರಿದೀಸಿ ಹೈನುಗಾರಿಕೆ ‌ಆರಂಭಿಸುತ್ತಾರೆ.

ಇರುವ ತುಂಡು ಭೂಮಿಯಲ್ಲಿಯೇ ತಾವಾಯಿತು, ತಮ್ಮ ಜೀವನವಾಯಿತು ದಿನನಿತ್ಯ ಕುಟುಂಬದ ಸದಸ್ಯರೆಲ್ಲರೂ ಸೇರಿಕೊಂಡು ಹಸುಗಳನ್ನು ಸಾಕಿ ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದರು.

ಇಂತಹ ಕುಟುಂಬದ ಕಣ್ಣಿರಿನ ಕಥೆ ಕಂಡುಬಂದಿದ್ದು ಬೇರೆಲ್ಲೂ ಅಲ್ಲ ಅದುವೇ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿರುವ ನೀಲಕಂಠ ವಿರುಪಾಕ್ಷಿ ಬಿಜಾಪುರ ಕುಟುಂಬ.

ಆದರೆ ನಿನ್ನೆಯ ಕರಾಳ ಆ ಸೋಮವಾರ ನೀಲಕಂಠನ ಕುಟುಂಬಕ್ಕೆ ಆಘಾತ ತಂದೊಡ್ಡಿತು. ಎಂದಿನಂತೆ ಸೋಮವಾರವು ನೀಲಕಂಠ ತನ್ನ ಸಹೋದರನ ಜೋತೆಗೆ ಇರುವ ತುಂಡು ಭೂಮಿಯಲ್ಲಿನ ಹುಲ್ಲನ್ನು ಕೋಯಿದು ಮೊದಲನೆ ಹುಲ್ಲಿನ ಹೊರೆಯನ್ನು ತಂದು ಹಸುಗಳಿಗೆ ಹಾಕುತ್ತಾನೆ. ಆದರೆ ಎರಡನೆ ಹುಲ್ಲಿನ ಹೊರೆಯನ್ನು ತಂದು ಹಸುಗಳಿಗೆ ಹಾಕಿದಾಗ ಆ ಹುಲ್ಲನ್ನು ತಿಂದು ಕೇವಲ ೧೫ನಿಮಿಷದೊಳಗೆ ಮೂರು ಹಸುಗಳು ಅಸುನುಗಿದವು ಆಗ ಸಮಯ ಸಾಯಂಕಾಲ ೪.೧೫ ಆಗಿತ್ತು.

ಆಗ ರೈತ ನೀಲಕಂಠ ತಕ್ಷಣ ಪಶುವೈದ್ಯರಿಗೆ ಮಾಹಿತಿ ತಿಳಿಸಿದಾಗ ಕಕ್ಕೇರಿ ಪಶು ದವಾಖಾನೆಯ ವೈದ್ಯ ಸಂಕೇತ ದೊಡಮನಿ ಸ್ಥಳಕ್ಕೆ ಬಂದು ಹಸುಗಳನ್ನು ಪರೀಶಿಲಿಸಿದಾಗ ಹಸುಗಳ ಉಸಿರಾಟ ನಿಂತು ಹೋಗಿತ್ತು. ಆಗ ತಕ್ಷಣವೇ ಪಶುವೈದ್ಯ ಸಂಕೇತ ದೊಡಮನಿ , ಖಾನಾಪುರದ ಸಂಚಾರಿ ಪಶುವೈದ್ಯ ಮನೋಹರ ದಾದಮಿ ದೂರವಾಣಿ ‌ಮೂಲಕ ಸಂಪರ್ಕಿಸಿದರು. ಆಗ ಪಶುವೈದ್ಯ ಮನೋಹರ ದಾದಮಿ ಸ್ಥಳಕ್ಕೆ ಆಗಮಿಸಿ ಪರೀಕ್ಷಿಸಿದಾಗ ಸತ್ತಿದ್ದಾವೆ ಹಸುಗಳು ಎಂದು ತಿಳಿಯಿತು.

ಆಗ ಪಶುವೈದ್ಯ ಡಾ.ಮನೋಹರ ದಾದಮಿ ಮರಣೋತ್ತರ ಪರೀಕ್ಷೆ ನಡೆಸಿ ಈ ಘಟನೆ ಸಂಭವಿಸಲು ಹಸುಗಳು ‌ವಿಷಕಾರಿ ಹುಲ್ಲನ್ನು ಸೇವಿಸಿದ್ದರಿಂದ ಸಾವನ್ನಪಿವೆ ಎಂದು ಮಾಹಿತಿಯನ್ನು ನೀಡಿದರು.

ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಸುಗಳ ವಿಷಯ ಬಹಳಷ್ಟು ಗ್ರಾಮಸ್ಥರಿಗೆ ಗೋತ್ತಾಗಲಿಲ್ಲ, ಆದ್ದರಿಂದ ಮಾರನೆ ದಿನ ಅಂದರೆ ಇಂದು ಮಂಗಳವಾರದಂದು ವಿಷಯ ತಿಳಿದು ರೈತಮುಖಂಡರು ಭೇಟಿ ನೀಡಿ ಸಂಭಂಧಪಟ್ಟ ತಹಶಿಲ್ದಾರ, ತಾಲೂಕಾ ಪಶುವೈದ್ಯ, ಶಾಸಕರು ಗಮನಕ್ಕೆ ತಂದರು. ಆಗ ತಾಲೂಕಾ ಪಶುವೈದ್ಯ ಡಾ.ಮನಗೂಳಿ ಅವರು ದೂರವಾಣಿ ಮುಖಾಂತರ ಮಾತನಾಡಿ ಘಟನೆಯ ಬಗ್ಗೆ ಸಂಪೂರ್ಣ ರೀತಿಯ ಮಾಹಿತಿಯನ್ನು ತೆಗೆದುಕೊಂಡು ಪಶು ಇಲಾಖೆಗೆ ಮತ್ತು ಮೇಲಾಧಿಕಾರಿಗಳ ಗಮನಕ್ಕೆ ತಂದು ಇಲಾಖೆಯಿಂದ ಸಿಗುವ ಪರಿಹಾರವನ್ನು ಒದಗಿಸುತ್ತೆವೆಂದು ಭರವಸೆ ನೀಡಿದರು.

ಇತ್ತ ಮಾಡಿದ‌ ಸಾಲವು ತಿರಿಲ್ಲ, ಜೀವನಾಧರಕ್ಕೆ ಇದ್ದ ಹಸುಗಳು ಇಲ್ಲ. ಒಟ್ಟಾರೆಯಾಗಿ ಈ ರೈತನ ‌ಕುಟುಂಬಕ್ಕೆ ಸಂಭಂಧಪಟ್ಟ ಇಲಾಖೆಯವರು ಮತ್ತು ಜನಪ್ರತಿನಿಧಿಗಳು ಸರಕಾರದಿಂದ ಸಹಾಯ ದೊರಕಿಸಿ‌ಕೊಟ್ಟರೆ ಈ ರೈತನ ಕುಟುಂಬಕ್ಕೆ ಹೋಸ ಜೀವನದ ರೂಪ ನೀಡಬಹುದು.
ಲಿಂಗನಮಠದ ರೈತ ನೀಲಕಂಠ ವಿರುಪಾಕ್ಷಿ ಬಿಜಾಪುರ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ ನಮ್ಮ ಕುಟುಂಬದ ಪಾಲಿಗೆ ಕೇವಲ ೧.೫ಎಕರೆ ಜಮೀನು ಇದ್ದು, ಇದ್ದ ತುಂಡು ಜಮೀನನಲ್ಲೆ ಹಸುಗಳನ್ನು ಸಾಕಿ ಹೈನುಗಾರಿಕೆಯನ್ನು ಮಾಡುತ್ತಿದ್ದೆವು. ಆದರೆ ನಿನ್ನೆಯ ದಿನ ವಿಷಕಾರಿ ಹುಲ್ಲನ್ನು ತಿಂದು ಹಸುಗಳು ಸಾವನ್ನಪ್ಪಿದ್ದಾವೆ ಎಂಬ ಪಶುವೈದ್ಯರ ಹೇಳಿಕೆ ಕೇಳಿ ನಮಗೆ ಏನು ತಿಳಿಯದಂತಾಗಿದೆ. ಮೋದಲೇ ಸಾಲ ಮಾಡಿ ಹೊಲದಲ್ಲಿ ಫಾರ್ಮ್ ಹೌಸ ನಿರ್ಮಾಣ ಮಾಡಿ, ಮತ್ತೆ ಸಾಲ ಮಾಡಿ ಹಸುಗಳನ್ನು ತಂದು ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದೆವು. ಆದರೆ ಇಂದು ಜೀವನಾಧಾರವಾದ ಹಸುಗಳನ್ನು ಕಳೆದುಕೊಂಡು ಕುಟುಂಬ ಬೀದಿಗೆ ಬರುವಂತಾಗಿದೆ. ಜೋತೆಗೆ ಅಂದಾಜು ೩.೫ಲಕ್ಷದಿಂದ ೪ಲಕ್ಷದವರೆಗೆ ಇರುವ ಸಾಲಮನ್ನಾ ಮಾಡಿ ಸಂಭಂಧಪಟ್ಟವರು ಪರಿಹಾರ ಒದಗಿಸಿಕೊಂಡುಬೇಕೆಂದು ವಿನಂತಿಸಿಕೊಳ್ಳುತೆನೆ ಎನ್ನುತ್ತಾರೆ.

ವರದಿ : ಕಾಶೀಮ ಹಟ್ಟಹೋಳಿ

Related posts: