ಬೆಳಗಾವಿ:ರಾಜ್ಯ ಪರ ಮಹಾದಾಯಿ ತೀರ್ಪು : ಸಂತಸ ವ್ಯಕ್ತಪಡಿಸಿದ ರೈತ ಮುಖಂಡ
ರಾಜ್ಯ ಪರ ಮಹಾದಾಯಿ ತೀರ್ಪು : ಸಂತಸ ವ್ಯಕ್ತಪಡಿಸಿದ ರೈತ ಮುಖಂಡ
ಬೆಳಗಾವಿ ಅ 14 : ರಾಜ್ಯದ ಪರವಾಗಿ ಬಂದಿರುವ ಮಹಾದಾಯಿ ನ್ಯಾಯಾಧಿಕರಣ ತೀರ್ಪನ್ನು ಭಾರತೀಯ ಕೃಷಿಕ ಸಮಾಜ ಸಂಯುಕ್ತ ಸಂಘದ ರಾಜ್ಯಾಧ್ಯಕ್ಷ ಹಾಗೂ ಮಹಾದಾಯಿ ಹೋರಾಟಗಾರ ಸಿದ್ದಗೌಡ ಮೋದಗಿ ಸ್ವಾಗತಿಸಿದ್ದಾರೆ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನ್ಯಾಯ ಮಂಡಳಿ ತೀರ್ಪು ನಮ್ಮ ಖುಷಿ ಹೆಚ್ಚಿಸಿದೆ. ತೀರ್ಪಿನಲ್ಲಿ 5.4 ಟಿಎಂಸಿ ಕುಡಿಯುವ ನೀರಿಗೆ ನೀಡಿರುವುದು ಮಲಪ್ರಭಾ ನದಿ ತೀರದ ಜನರ ಸಂತಸಕ್ಕೆ ಕಾರಣವಾಗಿದೆ ಎಂದರು.
ಕಳೆದ 4 ದಶಕಗಳಿಂದ ಮಹದಾಯಿ ಯೋಜನೆ ಜಾರಿಗಾಗಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದೇವೆ. ರೈತರ ದಶಕಗಳ ಹೋರಾಟಕ್ಕೆ ಸಂದ ಜಯ ಇದಾಗಿದೆ. ಮಹದಾಯಿ ನ್ಯಾಯಾಧಿಕರಣದಲ್ಲಿ ರಾಜ್ಯದ ಪರ ವಕಾಲತ್ತು ವಹಿಸಿದ ಎಲ್ಲ ನ್ಯಾಯವಾದಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.