RNI NO. KARKAN/2006/27779|Monday, December 23, 2024
You are here: Home » breaking news » ಘಟಪ್ರಭಾ:ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನ ಆಚರಣೆ

ಘಟಪ್ರಭಾ:ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನ ಆಚರಣೆ 

ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನ   ಆಚರಣೆ

ಘಟಪ್ರಭಾ ಅ 15 : ಸಮೀಪದ ರಾಜಾಪೂರ ಗ್ರಾಮದ ಜ್ಞಾನ ಗಂಗೋತ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 72ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ನಿವೃತ್ತ ಯೋಧರಾದ ಸದಾಶಿವ ಹೂನೂರ ಅವರು ದ್ವಜಾರೋಹಣ ಮಾಡಿ ದ್ವಜ ವಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಿವಪುತ್ರ ಗುಂಡಪ್ಪಗೋಳ, ಕಾರ್ಯದರ್ಶಿ ಭಾರತಿ ಗುಂಡಪ್ಪಗೋಳ, ಸದಸ್ಯರಾದ ಬಸಪ್ರಭು ಗಡಹಿಂಗ್ಲಜ, ಮಲಿಕಜಾನ ಮುಲ್ಲಾ, ಗಣಪತಿ ಹೊಸೂರ, ವಿನಯ ಪಾಟೀಲ ಗ್ರಾ.ಪಂ ಸದಸ್ಯರಾದ ಬಸವರಾಜ ಹೊಸೂರ, ಉದ್ದಪ್ಪ ಜಟ್ಟೆನ್ನವರ, ಜಿ.ಕೆ ಹಿಟ್ಟಣಗಿ, ಚೂನಪ್ಪ ಪಾಕನಟ್ಟಿ, ಹಿರಿಯರಾದ ರಾಮಚಂದ್ರ ಗುಂಡಪ್ಪಗೋಳ, ನಿಂಗಪ್ಪ ಹೊಸೂರ, ಬಾಳವ್ವ ಮೇಟಿ, ಗೋಪಾಲ ಗುಂಡಪ್ಪಗೋಳ, ನಾಗೇಶ ಪೂಜೆರಿ, ವಿಠ್ಠಲ ಪಾಕನಟ್ಟಿ, ಲಕ್ಷ್ಮಣ ಯಾದಗೂಡ, ಶಿವಶಂಕರ ಬೆಳವಿ, ಮಹಾದೇವ ಕುಂಬಾರ ಸೇರಿದಂತೆ ಅನೇಕರು ಇದ್ದರು.
ಶಾಲೆಯ ಪ್ರಧಾನ ಗುರುಮಾತೆ ಶಾಮಲಾ ಬಡಿಗೇರ ಸ್ವಾಗತಿಸಿದರು, ಸಹ ಶಿಕ್ಷಕಿ ಸನಾ ಮಕಾಂದಾರ ನಿರೂಪಿಸಿದರು. ಶ್ರೀಮತಿ ಲಕ್ಷ್ಮೀ ಬಾಳನಾಯ್ಕ ವಂದಿಸಿದರು.

Related posts: