RNI NO. KARKAN/2006/27779|Monday, December 23, 2024
You are here: Home » breaking news » ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ವಿವಿಧ ಕಡೆಗಳಲ್ಲಿ 72ನೇ ಸ್ವಾತಂತ್ರ್ಯ ದಿನ ಆಚರಣೆ

ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ವಿವಿಧ ಕಡೆಗಳಲ್ಲಿ 72ನೇ ಸ್ವಾತಂತ್ರ್ಯ ದಿನ ಆಚರಣೆ 

ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ವಿವಿಧ ಕಡೆಗಳಲ್ಲಿ 72ನೇ ಸ್ವಾತಂತ್ರ್ಯ ದಿನ ಆಚರಣೆ

ಘಟಪ್ರಭಾ ಅ 15 : ಮಲ್ಲಾಪೂರ ಪಿ.ಜಿ ಪಟ್ಟಣದಲ್ಲಿ ವಿವಿಧ ಕಡೆಗಳಲ್ಲಿ 72ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಇಲ್ಲಿಯ ಗಾಂಧಿ ಚೌಕದಲ್ಲಿ ಸಾರ್ವಜನಿಕ ಧ್ವಜಾರೋಹಣವನ್ನು ಗ್ರಾಮದ ಹಿರಿಯರಾದ ಡಿ.ಎಮ್. ದಳವಾಯಿ ನೇರವೇರಿಸಿದರು. ಪ.ಪಂ ಸದಸ್ಯರು, ಪಟ್ಟಣದ ಹಿರಿಯರು, ಸಾರ್ವಜನಿಕರು ಇದ್ದರು.
ಪಟ್ಟಣ ಪಂಚಾಯತಿ ಕಾರ್ಯಾಲಯ ಆವರಣದಲ್ಲಿ ಧ್ವಜಾರೋಹಣವನ್ನು ಪ.ಪಂ ಅಧ್ಯಕ್ಷೆ ಸುಜಾತಾ ಪೂಜೇರಿ ನೆರವೇರಿಸಿದರು. ಪ.ಪಂ ಉಪಾಧ್ಯಕ್ಷೆ ಕಸ್ತೂರಿ ಕೆಂಪಣ್ಣ ಚೌಕಾಶಿ. ಸದಸ್ಯರುಗಳಾದ ಸಲೀಮ ಕಬ್ಬೂರ, ನಾಗರಾಜ ಚಚಡಿ. ಮಲ್ಲಪ್ಪ ಕೋಳಿ, ಈರಗೌಡ ಕಲಕುಟಗಿ, ಗಂಗಾಧರ ಬಡಕುಂದ್ರಿ, ಪ್ರವೀಣ ಮಟಗಾರ,  ಇಮ್ರಾನ ಬಟಕುರ್ಕಿ, ಮಾರುತಿ ಹುಕ್ಕೇರಿ, ಮುಖ್ಯಾಧಿಕಾರಿಗಳಾದ ಕೆ.ಬಿ.ಪಾಟಿಲ, ಗ್ರಾಮದ ಹಿರಿಯರಾದ ಡಿ.ಎಮ್.ದಳವಾಯಿ, ಸುರೇಶ ಪೂಜೇರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಪರಶುರಾಮ ಗೋಕಾಕ, ಗೌಸಖಾನ ಕಿತ್ತೂರಕರ, ಶಂಕರ ಗಂಡವ್ವಗೋಳ. ಹಾಗೂ. ಸಿಬ್ಬಂಧಿಗಳಾದ ಲಕ್ಷ್ಮಣ ಹುಣಶ್ಯಾಳ, ರಾಜು ಸದಲಗಿ, ರಮೇಶ ತಂಗೆವ್ವಗೋಳ, ಆನಂದ ಬಡಾಯಿ, ಅಕ್ಷಯ ಮಾನಗಾಂವಿ. ಯಾಶಿನ ಪಾಶ್ಚಾಪೂರ, ರಾಮಪ್ಪ ಬೆಲ್ಲದ ಸರ್ವ ಸಿಬ್ಬಂದಿ ಇದ್ದರು.
ವಿಶ್ವಕರ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ 72ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಂಘದ ನಿರ್ದೇಶಕರಾದ ಡಾ|ರಾಘವೇಂದ್ರ ಪತ್ತಾರ ನೇರವೇರಿಸಿದರು. ನಿರ್ದೇಶಕರಾದ ಪ್ರೀತಮ ಕಿತ್ತೂರ. ಪಾಂಡುರಂಗ ಪೋತದಾರ. ವಿನಾಯಕ ನಿಪ್ಪಾಣಿಕರ ಸಿಬ್ಬಂದಿ ವರ್ಗದವರು ಇದ್ದರು.
ಮಲ್ಲಾಪೂರ ಪಿಜಿ ಅರ್ಬನ ಬ್ಯಾಂಕನಲ್ಲಿ ಚಂದ್ರಶೇಖರ ಕಾಡದವರ ಧ್ವಜಾರೋಹಣವನ್ನು ನೇರವೇರಿಸಿದರು. ಮಲ್ಲಾಪೂರ ಪಿ.ಜಿ ಪಿ.ಕೆ.ಪಿ.ಎಸ್.ನಲ್ಲಿ ಹಿರಿಯರಾದ ರಮೇಶ ತುಕ್ಕಾನಟ್ಟಿ ಧ್ವಜಾರೋಹಣವನ್ನು ನೇರವೇರಿಸಿದರು.

Related posts: