RNI NO. KARKAN/2006/27779|Friday, December 13, 2024
You are here: Home » breaking news » ಮೂಡಲಗಿ:ಲಕ್ಷಾಂತರ ಜನರು ಈ ದೇಶಕ್ಕಾಗಿ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಡಿ ಮಡಿದಿದ್ದಾರೆ : ಅರವಿಂದ

ಮೂಡಲಗಿ:ಲಕ್ಷಾಂತರ ಜನರು ಈ ದೇಶಕ್ಕಾಗಿ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಡಿ ಮಡಿದಿದ್ದಾರೆ : ಅರವಿಂದ 

ಲಕ್ಷಾಂತರ ಜನರು ಈ ದೇಶಕ್ಕಾಗಿ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಡಿ ಮಡಿದಿದ್ದಾರೆ : ಅರವಿಂದ

ಮೂಡಲಗಿ ಅ 15 : ಗಾಂದೀಜಿಯವರಿಗಿಂತ ಮುಂಚೆ ಸ್ವಾತಂತ್ರ್ಯ ಹೋರಾಟವೆಂಬುದು ಕೆಲವೇ ಜಾತಿಯವರಿಗೆ ಸೀಮಿತವಾಗಿತ್ತು. ಗಾಂದೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ ನಂತರ ಹಿಂದು, ಮುಸ್ಲಿಂ, ಜ್ಯೆನ, ಕ್ರೈಸ್ತ, ಕನ್ನಡಿಗ-ಮರಾಠಿಗ, ಬಡವ ಶ್ರೀಮಂತ, ಕಿರಿಯರು-ಹಿರಿಯರೆನ್ನದೆ ಎಲ್ಲರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು ಎಂದು ಯುವ ಮುಖಂಡ ಅರವಿಂದ ದಳವಾಯಿ ಹೇಳಿದರು.
ಅವರು ಸಮೀಪದ ಕೌಜಲಗಿಯ ಸಿಂದೂತಾಯಿ ಮಹಾದೇವರಾವ ದಳವಾಯಿ ಎಜ್ಯುಕೇಶನ್ ಟ್ರಸ್ಟನ ಸಿಂದೂ-ಮಾಧವ ಪಬ್ಲಿಕ್ ಸ್ಕೂಲ್ ಮತ್ತು ಡಾ. ಮಹಾದೇವಪ್ಪ ಮಡ್ಡೆಪ್ಪ ದಳವಾಯಿ ಪ್ರೌಢ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 72 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು 124 ನೇ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವದಲ್ಲಿ ಅದ್ಯಕ್ಷತೆವಹಿಸಿ ಮಾತನಾಡಿದರು.
ಲಕ್ಷಾಂತರ ಜನರು ಈ ದೇಶಕ್ಕಾಗಿ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಡಿ ಮಡಿದಿದ್ದಾರೆ ಅವರೆಲ್ಲರನ್ನು ಸ್ಮರಿಸಿಕೊಳ್ಳ ಬೇಕು. ವಿದ್ಯಾರ್ಥಿಗಳು ರಾಷ್ಟ್ರೀಯ ಐಕ್ಯತೆಯ ಮನೊಬಾವ ಹೊಂದಿ ಉದಾತ್ತ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಸ್ತು ಸಂಯಮ ಹಾಗೂ ಸೇವಾ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅಳವಡಿಸಿಕೊಳ್ಳ ಬೇಕೆಂದು ಮಕ್ಕಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಪ್ರಕಾಶ ಕೋಟಿನತೋಟ, ದಸ್ತಗೀರ ಡಬರಲಿ, ಮಾಜಿ ಸೈನಿಕ ವಸಂತ ದಳವಾಯಿ, ಅಮೀರಸಾಬ ಮುಲ್ತಾನಿ, ನಿಂಗಪ್ಪ ದೇಸಾಯಿ, ದೊಡ್ಡಸಿದ್ದಪ್ಪ ಖಾನಟ್ಟಿ, ಸಿದ್ದಪ್ಪ ಹುಂಡ್ರದ, ಪ್ರಕಾಶ ದಳವಾಯಿ, ಯುವ ಮುಖಂಡರಾದ ವೆಂಕಟೇಶ ದಳವಾಯಿ, ಕರವೇ ಅದ್ಯಕ್ಷ ಗೋಪಾಲ ಮೀಶಿ ಹಾಜರಿದ್ದರು . ಕಾರ್ಯಕ್ರಮದಲ್ಲಿ ಶಿಕ್ಷಕ ವಿ ಕೆ ಬಂಡಿವಡ್ಡರ ನಿರೂಪಿಸಿದರು. ಮುಖ್ಯೋಪಾದ್ಯಾಯ ವಿವೇಕ ಹಳ್ಳೂರ ಸ್ವಾಗತಿಸಿ, ಎಮ್ ಡಿ ಕಟ್ಟಿಮನಿ ವಂದಿಸಿದರು.

Related posts: