RNI NO. KARKAN/2006/27779|Friday, December 13, 2024
You are here: Home » breaking news » ಮೂಡಲಗಿ:ಸಂಭ್ರಮ ಸಡಗರದ ನಾಗರ ಪಂಚಮಿ ಹಬ್ಬ ಆಚರಣೆ

ಮೂಡಲಗಿ:ಸಂಭ್ರಮ ಸಡಗರದ ನಾಗರ ಪಂಚಮಿ ಹಬ್ಬ ಆಚರಣೆ 

ಸಂಭ್ರಮ ಸಡಗರದ ನಾಗರ ಪಂಚಮಿ ಹಬ್ಬ ಆಚರಣೆ

ಮೂಡಲಗಿ ಅ 16 : ಅಣ್ಣ ತಂಗಿಯವರ ಹಬ್ಬವೆಂದು ಪ್ರಸಿದ್ದಿಯಾಗಿರುವ ನಾಗರ ಪಂಚಮಿಹಬ್ಬವನ್ನು ಪಟ್ಟಣದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಈ ಹಬ್ಬದ ವಿಶೇಷವೆಂದರೆ ಮನೆಮಂದಿ ಸೇರಿ ಯಾವುದೇ ಭೇದಬಾವವಿಲ್ಲದೆ ಜೋಕಾಲಿ ಜಿಗುತ್ತ ಆಟವಾಡಿ ಸಂಭ್ರಮಿಸುವುದು. ಆದರೆ ಕಾಲ ಬದಲಾಗುತ್ತ ಸಾಗಿದಂತೆ ಜೋಕಾಲಿ ಆಟವೂ ಕಡಿಮೆಯಾಗುತ್ತ ಬಂದಿದೆ. ನಮ್ಮ ಆಚರಣೆಗಳು ಮರೆಯಾಗುತ್ತಿವೆ. ಪಾಶ್ಯತ್ಯ ಸಂಸ್ಕøತಿಗೆ ಯುವ ಜನಾಂಗ ಮಾರು ಹೋಗಿ ನಮ್ಮ ಸಂಪ್ರದಾಯವನ್ನೆ ಮರೆಯುತ್ತಿರುವ ಸಮಯದಲ್ಲಿ ನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುವ ಪದ್ದತಿಗಳು ಮರೆಯಾಗಬಾರದು ಮತ್ತು ಇಂದಿನ ಯುವ ಪೀಳಿಗೆಗೆ ಹಬ್ಬಗಳ ಮಹತ್ವ ತಿಳಿಯಬೇಕು ಎನ್ನುವ ಉದ್ದೇಶದಿಂದ ಮೂಡಲಗಿಯ ಕಾಳಪ್ಪಗೋಳ ಕುಟುಂಬವೂ ಪ್ರತಿ ಹಬ್ಬಗಳನ್ನು ವಿಶಿಷ್ಟವಾಗಿ ಆಚರಿಸುತ್ತ ಬಂದಿದೆ. ನಾಗರ ಪಂಚಮಿ ಹಬ್ಬ ಸಂಭ್ರಮವನ್ನು ಎಲ್ಲರೂ ಸಂಭ್ರಮಿಸಬೇಕು ಎನ್ನುವ ಉದ್ದೇಶದಿಂದ ಬೃಹತ್ ಜೋಕಾಲಿಯನ್ನು ನಿರ್ಮಿಸಿ ದಂಪತಿಗಳು ಆಗಮಿಸಿ ಸಂಭ್ರಮಿಸುವಂತೆ ಮಾಡಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾದರು.
ನಾಗರ ಪಂಚಮಿಹಬದ್ಬ ದಿನ ಮುಂಜಾನೆ ಈ ಕಾರ್ಯಕ್ರಮಕ್ಕೆ ಕಾಳಪ್ಪಗೋಳ ಕುಟುಂಬದ ಹಿರಿಯರಾದ ಬಸವ್ವ ಕಾಳಪ್ಪಗೋಳ ಮತ್ತು ಅರಬಾಂವಿ ಬ್ಲಾಕ್ ಜೆಡಿಎಸ್ ಮಹಿಳಾ ಅಧ್ಯಕ್ಷೆ ಶಿಲ್ಪಾ ಗೋಡಿಗೌಡರ ಚಾಲನೆ ನೀಡಿದರು.
ಈ ಸಂದರ್ಭ ಮಾಹಿತಿಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ, ಕಾಳಪ್ಪಗೋಳ ಕುಟುಂಬವೂ ಇಂತಹ ವಿಶಿಷ್ಟವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಸಂತಸದ ವಿಷಯವಾಗಿದೆ. ನಮ್ಮ ಹಬ್ಬಗಳ ಮಹತ್ವಗಳು ಇಂದಿನ ಯುವ ಜನತೆಗೆ ಮನವರಿಕೆ ಮಾಡಲು ಇಂತಹ ಕಾರ್ಯಕ್ರಮಗಳು ಪ್ರಯೋಜನಕಾರಿಯಾಗಲಿದೆ ಎಂದರು.
ಡಾ. ರಂಗಣ್ಣ ಸೋನವಾಲ್ಕರ, ಮಲ್ಲಪ್ಪ ಗಾಣಿಗೇರ, ಅರ್ಜುನ ಗಾಣಿಗೇರ, ಮಲ್ಲಪ್ಪ ಮದುಗುಣಕಿ, ಮುತ್ತಪ್ಪ ಈರಪ್ಪನವರ, ಗುಂಡಪ್ಪ ಕಾಳಪ್ಪಗೋಳ, ಜಯಶ್ರೀ ಗಾಣಿಗೇರ, ಪ್ರಕಾಶ ಕಾಳಪ್ಪಗೋಳ, ಶೀವೂ ಗಾಣಿಗೇರ, ಶ್ರೀಶೈಲ ಗಾಣಿಗೇರ, ಮಲ್ಲಿಕಾರ್ಜುನ ಕಾಳಪ್ಪಗೋಳ, ಶ್ರೀಮಂತ ಗಾಣಿಗೇರ ಮತ್ತಿತರರು ಭಾಗವಹಿಸಿದ್ದರು. ಪಟ್ಟಣದ ನೂರಾರು ದಂಪತಿಗಳು ಜೋಕಾಲಿ ಆಡಿ ಸಂಭ್ರಮಿಸಿದರು.

Related posts: