ಘಟಪ್ರಭಾ:ಯಾವ ಪಕ್ಷಕ್ಕೂ ಚ್ಯುತಿ ಬರದಂತೆ ನಡೆದುಕೊಂಡ ಮಹಾನ ವ್ಯಕ್ತಿ ವಾಜಪೇಯಿ : ಸುರೇಶ ಪಾಟೀಲ
ಯಾವ ಪಕ್ಷಕ್ಕೂ ಚ್ಯುತಿ ಬರದಂತೆ ನಡೆದುಕೊಂಡ ಮಹಾನ ವ್ಯಕ್ತಿ ವಾಜಪೇಯಿ : ಸುರೇಶ ಪಾಟೀಲ
ಘಟಪ್ರಭಾ ಅ 17 : ಆಜಾತ ಶತ್ರು, ಧೀಮಂತ ನಾಯಕ, ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಇವರು ಗುರುವಾರದಂದು 5 ಗಂಟೆಗೆ ನಿಧನರಾದ ನಿಮಿತ್ತ ಘಟಪ್ರಭಾ ಭಾರತೀಯ ಜನತಾ ಪಾರ್ಟಿ ನಿಷ್ಠಾವಂತ ಕಾರ್ಯಕರ್ತರು ಶೃದ್ಧಾಂಜಲಿ ಸಭೆ ನಡೆಸಿ ಒಂದು ನಿಮಿಷ ಮೌನ ಆಚರಿಸಲಾಯಿತು.
ಮೃತ್ಯುಂಜಯ ವೃತ್ತದಲ್ಲಿ ದಿ.ಅಟಲ್ ಬಿಹಾರಿ ವಾಜಪೇಯಿ ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಬಿಜೆಪಿ ಧುರೀಣ ಸುರೇಶ ಪಾಟೀಲ 26 ಪಕ್ಷಗಳ ಜೊತೆ ಸೇರಿ ಸರ್ಕಾರ ರಚಿಸಿ ಯಾವ ಪಕ್ಷಕ್ಕೂ ಚ್ಯುತಿ ಬರದಂತೆ ನಡೆದುಕೊಂಡ ಮಹಾನ ವ್ಯಕ್ತಿ, ಪೋಕ್ರಾನ್ ಅಣುಬಾಂಬ್ ಸ್ಪೋಟಿಸಿ ಜಗತ್ತಿಗೆ ಭಾರತ ಶಕ್ತಿಶಾಲಿ ರಾಷ್ಟ್ರವೆಂಬುದನ್ನು ತೋರಿಸಿಕೊಟ್ಟ ಧೀಮಂತ ನಾಯಕ ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾರದಷ್ಟು ಹಾನಿಯಾಗಿದೆ. ಅವರು ಭಾರತದಲ್ಲಿ ಇನ್ನೋಮ್ಮೆ ಹುಟ್ಟಿ ಬರಲಿ ಎಂದರು.
ಈ ಸಂಧರ್ಭದಲ್ಲಿ ಕಿರಣ ವಾಲಿ, ಸಂಜು ನಾಯಿಕ, ಜಿ.ಎಸ್.ರಜಪೂತ, ಹರೀಶ ಕಾಳೆ, ಎಸ್.ಎಚ್.ಗಿರೆಡ್ಡಿ, ಚಿರಾಕಲಿಶಾ ಮಕಾಂದಾರ, ಪ್ರಕಾಶ ಗಾಯಕವಾಡ, ಆನಂದ ವಾಡೇದ, ಶ್ರೀಶ್ರೈಲ ಶಿದೋಳಿಮಠ, ವಿಶ್ವೇಶ್ವರ ಕಂಬಾರ, ಮುದಕಪ್ಪಾ ದುಮಾಳ, ಡಾ|| ಸಂಜು ತೇರಣಿ, ಡಾ|| ನಾಬಿರಾಜ ಪೂಜೇರಿ,ಮಹಾಂತೇಶ ಉದಗಟ್ಟಿಮಠ, ಗುರುಪ್ರಸಾದ ಪಾಟೀಲ, ಜಾಕೀರ ಬಾಡಕರ, ಚಂದ್ರು ಗಾಣಿಗ, ರಾಜು ಪಾಟೀಲ ಸೇರಿದಂತೆ ಸಂಘ ಪರಿವಾರದ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.