ಗೋಕಾಕ:ರಾಜಕೀಯ ಕ್ಷೇತ್ರದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ
ರಾಜಕೀಯ ಕ್ಷೇತ್ರದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ
* ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಯುವ ಮುಖಂಡ ಬಸವರಾಜ ಪಣದಿ ಅಭಿಮತ
ಬೆಟಗೇರಿ ಅ 17 : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾರತ ದೇಶ ಕಂಡ ಅಪ್ರತಿಮ ನಾಯಕರಾಗಿದ್ದರು. ರಾಜಕೀಯ ವಲಯದ ವಿರೋಧಿಗಳು ಸಹ ಗೌರವಿಸುವಂತಹ ವ್ಯಕ್ತಿತ್ವ ಹೊಂದಿದ ವಾಜಪೇಯಿ ಅವರು ವಿಧಿವಶರಾಗಿದ್ದು, ತೀವ್ರ ಶೋಕ ಮೂಡಿಸಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಯುವ ಮುಖಂಡ ಬಸವರಾಜ ಪಣದಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಸಹಯೋಗದಲ್ಲಿ ಶುಕ್ರವಾರ ಆ.17ರಂದು ಸ್ಥಳೀಯ ಡಾ.ಬೆಟಗೇರಿ ಕೃಷ್ಣಶರ್ಮ ವೃತ್ತದಲ್ಲಿ ಆಯೋಜಿಸಿದ ದಿ.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಕ್ಷೇತ್ರದ ಅಜಾತ ಶತ್ರು, ಬಿಜೆಪಿ ಇಂದು ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಅಟಲ್‍ಜೀ ಹಾಕಿದ ಅಡಿಪಾಯವೇ ಕಾರಣ. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಸ್ಥಳೀಯ ಪ್ರವಚನಕಾರ ಪುಂಡಲೀಕಪ್ಪ ಪಾರ್ವತೇರ ಮಾತನಾಡಿ, ನ್ಯೂಕ್ಲಿಯರ್ ಪರಮಾಣು ಪರೀಕ್ಷೆ ನಡೆಸುವ ಮೂಲಕ ವಿಶ್ವದಲ್ಲಿ ಭಾರತ ದೇಶದ ಘನತೆ ಹೆಚ್ಚಿಸಿದ ದೇಶ ಕಂಡ ಅಪ್ರತಿಮ ನಾಯಕರಾಗಿದ್ದರು. ಅತ್ಯುತ್ತಮ ಸಂಸದೀಯ ಪಟುವಾಗಿದ್ದ ವಾಜಪೇಯಿ ಅವರ ನಡೆ, ನುಡಿ ಎಂದೆಂದಿಗೂ ಸ್ಮರಿಸುವಂತಹದ್ದು, ಅವರ ನಿಧನ ದೇಶಕ್ಕೆ ತೀವ್ರ ಆಘಾತ ಮೂಡಿಸಿದೆ ಎಂದು ಶೋಕ ವ್ಯಕ್ತಪಡಿಸಿದರು.
ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಸಭೆಯ ಸಾನಿಧ್ಯ ವಹಿಸಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಅಟಲ್‍ಜೀ ಅವರ ವ್ಯಕ್ತಿತ್ವ ಕುರಿತು ಮಾತನಾಡಿದರು. ಸಭೆಯಲ್ಲಿ ಪಾಲ್ಗೊಂಡ ನೂರಾರು ಜನ ಯುವಕರು, ಸ್ಥಳೀಯರು ಒಂದು ನಿಮಿಷ ಮೌನ ಆಚರಿಸಿ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಿಸಿದರು.
ಹಾಲಪ್ಪ ಕೋಣಿ, ಈರಣ್ಣ ದೇಯಣ್ಣವರ, ಮಂಜು ಪತ್ತಾರ, ಈರಣ್ಣ ಬಳಿಗಾರ, ವೀರಣ್ಣ ಕಂಬಾರ, ಅಶೋಕ ದೇಯಣ್ಣವರ, ಪುಂಡಲೀಕ ಹಾಲಣ್ಣವರ, ಮಲ್ಲಪ್ಪ ಕಂಬಿ, ಗೌಡಪ್ಪ ದೇಯಣ್ಣವರ, ರಾಮಣ್ನ ಕತ್ತಿ, ಭೀಮಶಿ ಬಾಣಸಿ, ವೀರಣ್ಣ ಸಿದ್ನಾಳ, ಕಲ್ಲಪ್ಪ ಹುಬ್ಬಳ್ಳಿ, ಹಜರತ ಮಿರ್ಜಾನಾಯ್ಕ, ಸಿದ್ರಾಮ ಪಡಶೆಟ್ಟಿ, ಬಸವರಾಜ ಭಾಗೋಜಿ, ಮಾಯಪ್ಪ ಕೋಣಿ, ಶಂಭು ಹಿರೇಮಠ, ವಿಜಯ ಹಿರೇಮಠ, ಬಸವರಾಜ ಮುಧೋಳ, ಗುಳಪ್ಪ ಅಜ್ಜನಕಟ್ಟಿ, ಗುಳಪ್ಪ ಪಣದಿ, ಸಂತೋಷ ಮಹಾಲ್ಮನಿ, ಮುತ್ತೆಪ್ಪ ಕನೋಜಿ ಸೇರಿದಂತೆ ಗ್ರಾಮದ ಯುವಕರು, ಗ್ರಾಮಸ್ಥರು ಇದ್ದರು.