ಮೂಡಲಗಿ:ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಶಾಂತಿ ಪಾಲನಾ ಸಭೆ
ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಶಾಂತಿ ಪಾಲನಾ ಸಭೆ
ಮೂಡಲಗಿ ಅ 17 : ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಶುಕ್ರವಾರ ಸಂಜೆ ಶಾಂತಿ ಪಾಲನಾ ಸಭೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಗೋಕಾಕ ಡಿವೈಎಸ್‍ಪಿ ಡಿ.ಟಿ. ಪ್ರಭು ಮಾತನಾಡಿ, ಸಾರ್ವಜನಿಕರ ಮತ್ತು ಪೋಲಿಸ್ ಇಲಾಖೆಯ ನಡುವೆ ಸಂಬಂಧಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಶಾಂತಿ ಸಭೆಯನ್ನು ಕರೆಯಲಾಗುತ್ತಿದೆ. ಮೂಡಲಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ 1ಲಕ್ಷಕ್ಕೂ ಅಧಿಕ ಜನಸಂಖ್ಯೆಯಿದ್ದು ಎಲ್ಲರನ್ನು ಇಲಾಖೆಯಿಂದ ನಿಯಂತ್ರಿಸಲೂ ಅಸಾಧ್ಯ. ಸಾರ್ವಜನಿಕರ ಸಹಕಾರದಿಂದ ಮಾತ್ರ ಇಲಾಖೆಯು ಶಾಂತಿ ಸುವ್ಯವಸ್ಥೆ ಕಾಪಾಡಲೂ ಸಾಧ್ಯವಿದೆ. ಪಟ್ಟಣದಲ್ಲಿ ಯಾವೂದೇ ತರಹದ ಅಹಿತಕರ ಘಟನೆ ನಡೆದಿಲ್ಲ ಮುಂದೆಯೂ ಇದೇ ರೀತಿ ನಡೆದುಕೊಳ್ಳುತ್ತಿರಿ ಎಂಬ ವಿಶ್ವಾಸ ನಮಗಿದೆ. ಆ.22ರಂದು ಆಚರಿಸುವ ಬಕ್ರೀದ ಹಬ್ಬವನ್ನು ಶಾಂತಿ ಸೌಹರ್ದತೆಯಿಂದ ಆಚರಿಸಿ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕಿಡಿಗೇಡಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ವೃತ್ತ ನೀರಿಕ್ಷಕ ವೆಂಕಟೇಶ ಮುರನಾಳ, ಪಿಎಸ್‍ಐ ಶರಣೇಶ ಜಾಲಿಹಾಳ, ಪುರಸಭೆ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ, ಅಮೀರಸಾಬ ಥರಥರಿ, ಮಲ್ಲಿಕ ಕಳ್ಳಿಮನಿ, ಮಲ್ಲಿಕ ಹುಣಶ್ಯಾಳ, ಶಾಬೂ ಸಣ್ಣಕ್ಕಿ ಮಾತಾನಾಡಿದರು.
ಸಭೆಯಲ್ಲಿ ಎಎಸ್‍ಐ ಎ.ಸಿ.ಸಬರದ, ಅಜೀಜ ಡಾಂಗೆ, ಎಚ್.ಎಮ್.ಥರಥರಿ, ಶಬ್ಬಿರ ಕೆರಿಪಳ್ಳಿ, ಹುಸೇನ್‍ಸಾಬ್ ಥರಥರಿ, ಈರಣ್ಣ ಢವಳೇಶ್ವರ, ಬಿ.ಎಚ್.ಮುಲ್ಲ, ಮುನ್ನ ಮುಲ್ಲ, ಶರೀಫ್ ಪಾಟೇಲ, ಲಾಲಸಾಬ್ ಸಿದ್ದಾಪೂರ, ಇರ್ಷಾದ ಫೀರಜಾದೆ ಮತ್ತಿತರರು ಉಪಸ್ಥಿತರಿದ್ದರು.
ಅನೀಲ ಮಡಿವಾಳ ನಿರೂಪಿಸಿದರು. ಡಿ.ಜಿ.ಕೊಣ್ಣುರ ಸ್ವಾಗತಿಸಿದರು. ಎನ್.ಎಸ್ ಒಡೆಯರ ವಂದಿಸಿದರು.