ಖಾನಾಪುರ:ಕೊಡಗಿನ ಸಂತ್ರಸ್ತರಿಗೆ ಬೀಡಿ ಯುವಕರಿಂದ ಆಹಾರ ಸಾಮಗ್ರಿ ಮತ್ತು ಬಟ್ಟೆ ಸಂಗ್ರಹ
ಕೊಡಗಿನ ಸಂತ್ರಸ್ತರಿಗೆ ಬೀಡಿ ಯುವಕರಿಂದ ಆಹಾರ ಸಾಮಗ್ರಿ ಮತ್ತು ಬಟ್ಟೆ ಸಂಗ್ರಹ
ಖಾನಾಪುರ ಅ 19 : ಕನ್ನಡ ನಾಡಿನ ಜೀವನದಿ ಕಾವೇರಿ ಭಾಗದಲ್ಲಿರುವ ಕೊಡುಗು ಜಿಲ್ಲೆಯಾದ್ಯಂತ ಅತಿಯಾದ ಮಳೆಯಿಂದ ಹಲವಡೆ ಭಾರಿ ಪ್ರಮಾಣದ ಹಾನಿಯಾಗಿದೆ. ಅನೇಕ ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಹಲವರನ್ನು ಗಂಜಿ ಕೇಂದ್ರಗಳಲ್ಲಿ ರಕ್ಷಣೆ ನೀಡಲಾಗುತ್ತಿದ್ದು ನಮ್ಮಿಂದಲು ಏನಾದರೂ ಸಹಾಯ ಮಾಡಬೇಕೆಂದು ತಿಳಿದು ಬೀಡಿ ಗ್ರಾಮದ ದೈವದ ಗೆಳೆಯರ ಬಳಗದ ವತಿಯಿಂದ ಭಾರಿ ಪ್ರಮಾಣದ ಸಾಮಗ್ರಿಗಳನ್ನು ಸಂಗ್ರಹಿಸಿ ಕೊಡಗಿಗೆ ರವಾಣಿಸಿದರು.
ಬೀಡಿ ಗ್ರಾಮದ ದೈವದ ಗೆಳೆಯರ ಬಳಗದ ವತಿಯಿಂದ ೮ ಬಾಕ್ಸ ಬಿಸ್ಕಟ್,
೧೦ ಬಾಕ್ಸ ಪ್ರಥಮ ಚಿಕಿತ್ಸೆಯ ಸಾಮಗ್ರಿ,
೪೦ ಟಿ ಶರ್ಟ್
೦೨ಬಾಕ್ಸ ಪಾಂಪರ್ಸ ಔಷಧಿ
೦೨ ಬಾಕ್ಸ ಹಾಲು
೫೦ ಟುತ್ ಪೆಸ್ಟ
೦೮ ಕೆಜಿ ಬಟರ್ ಮತ್ತು
೦೨ ಬಾಕ್ಸ ಸಾಬೂನು ಗಳನ್ನು ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಮುಖಾಂತರ ಕೊಡಗಿಗೆ ರವಾನಿಸಿದರು.
ದೇನಿಗೆ ಸಂಗ್ರಹದಲ್ಲಿ ಯುವಕರಾದ ಜಗದೀಶ ಮಲ್ಲನ್ನವರ, ಮಹೇಶ ಅಡಗುನಕರ, ಶಿವಾನಂದ ಬನೋಶಿ, ಸಾಗರ ಪಟ್ಟಣಶೆಟ್ಟಿ, ಹರೀಶ ಕದಮ, ಸಮರ್ಥ ತಿಮ್ಮೊಲಿ, ಚೇತನ ಶಿಗಿಹಳ್ಳಿ, ಆಕಾಶ ಜವಳಿ, ವಿಶಾಲ ಪಾಟೀಲ ಹಾಗೂ ಸಂಘಡಿಗರು ಭಾಗವಹಿಸಿದ್ದರು.