ಖಾನಾಪುರ:ಶಾಂತತೆ ಕಾಪಾಡಲು ಹಬ್ಬ ಹರಿದಿನಗಳಲ್ಲಿ ಪ್ರತಿಯೊಬ್ಬರು ಪೊಲೀಸರಿಗೆ ಸಹಕಾರ ನೀಡಬೇಕು : ಪಿ.ಎಸ್.ಐ ಸುಮಾ ನಾಯಕ
ಶಾಂತತೆ ಕಾಪಾಡಲು ಹಬ್ಬ ಹರಿದಿನಗಳಲ್ಲಿ ಪ್ರತಿಯೊಬ್ಬರು ಪೊಲೀಸರಿಗೆ ಸಹಕಾರ ನೀಡಬೇಕು : ಪಿ.ಎಸ್.ಐ ಸುಮಾ ನಾಯಕ
ಖಾನಾಪುರ ಅ 20 : ಎಲ್ಲ ಧರ್ಮಗಳಲ್ಲಿ ಧಾರ್ಮಿಕ ಹಬ್ಬಗಳು ಬಂತೆಂದರೆ ಎಲ್ಲರೂ ಬಹಳ ಉತ್ಸುಕತೆಯಿಂದ ದೇವರನ್ನು ಪ್ರಾರ್ಥನೆ ಸಲ್ಲಿಸುವುದರ ಮೂಲಕ ಆಚರಿಸುತ್ತಾರೆ. ಆದರೆ ಕೆಲವು ಯುವಕರು ಹಬ್ಬದ ವಾತಾವರಣದ ಸಂಧರ್ಭದಲ್ಲಿ ನಗೆ ಮಾಡಲು ಹೋಗಿ ಹೋಗೆ ಮಾಡಿಕೊಂಡು ಕಷ್ಟವನ್ನು ಅನುಭವಿಸಿದ್ದು ನಮ್ಮೆಲ್ಲರಿಗೂ ಗೊತ್ತು. ಆದರೆ ಧಾರ್ಮಿಕ ಹಬ್ಬಗಳನ್ನು ಯುವಕರು ಎಷ್ಟು ವಿಜೃಂಭಣೆಯಿಂದ ಆಚರಿಸುತ್ತಾರೊ, ಅಷ್ಟೇ ಶಾಂತತೆ ಕಾಪಾಡುವಂತೆ ಜವಾಬ್ದಾರಿ ವಹಿಸಿವುದು ಹಿರಿಯರದ್ದಾಗಿದೆ ಎಂದು ನಂದಗಡ ಠಾಣೆಯ ಪಿ.ಎಸ್.ಯ ಸುಮಾ ನಾಯಕ ಹೇಳಿದರು.
ತಾಲೂಕಿನ ನಂದಗಡ ಗ್ರಾಮದ ಪೋಲಿಸ ಠಾಣೆಯಲ್ಲಿ ರವಿವಾರದಂದು ಹಮ್ಮಿಕೊಂಡಂತಹ ಬಕ್ರಿದ್ ಹಬ್ಬದ ನಿಮಿತ್ತ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದರು.
ಬಕ್ರಿದ್ ಇದು ಮುಸ್ಲಿಂ ಸಮುದಾಯದ ಧಾರ್ಮಿಕ ಹಬ್ಬ. ಆದ್ದರಿಂದ ಇಂತಹ ಸಂಧರ್ಭದಲ್ಲಿ ಮುಸ್ಲಿಂ ಸಮುದಾಯದವರು “ಖುರಬಾನಿ” ಕೊಡುವ ಕಾರ್ಯವನ್ನು ಮಾಡುತ್ತಾರೆ ಎಂಬ ನಮ್ಮ ಗಮನಕ್ಕೆ ಇದೆ ಆದರೆ ನಿಮ್ಮ ಧರ್ಮ ಆಚರಣೆ ಹೇಗೆ ಇದೆ ಹಾಗೇ ಮಾಡಿಕೊಳ್ಳಿರಿ ಯಾವುದೇ ತರಹದ ಅಭ್ಯಂತರವಿಲ್ಲ. ಆದರೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಏಕೆಂದರೆ ಪೋಲಿಸ್ ಇಲಾಖೆಯವರು ಎಲ್ಲ ಸಮಯದಲ್ಲೂ ಕರ್ತವ್ಯ ನಿರ್ವಹಿಸಲು ಆಗುವುದಿಲ್ಲ. ಆದ್ದರಿಂದ ಕೆಲವೊಂದು ಸಂಧರ್ಭಗಳಲ್ಲಿ ಈ ಸಮಾಜದಲ್ಲಿರುವ ಪ್ರತಿಯೊಬ್ಬರು ಪೋಲಿಸರಾಗಿ ಕರ್ತವ್ಯ ನಿರ್ವಹಿಸಿದರೆ ಪ್ರತಿಯೊಂದು ಸಭೆ ಸಮಾರಂಭಗಳಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಬಹುದೆಂದು ನುಡಿದರು.
ಸಭೆಯಲ್ಲಿ ಭಾಗವಹಿಸಿ ಮಾತಾನಾಡಿದ ನಂದಗಡ ಗ್ರಾಮಸ್ಥ ಮತ್ತು ರಾಯಣ್ಣ ಪ್ರಾಧಿಕಾರದ ಅಧ್ಯಕ್ಷ ಶಂಕರ ಸೋನೊಳ್ಳಿ ರವರು ಇದು ಗಂಡುಮೆಟ್ಟಿದ ನಾಡು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ನೆಲೆಬಿಡು, ಆದರೆ ಇಲ್ಲಿ ತಾವು ಚೆನ್ನಮ್ಮ ರೂಪದಲ್ಲಿ ನಮ್ಮ ಗ್ರಾಮದ ಆರಕ್ಷಕ ಠಾಣೆಗೆ ಠಾಣಾಧಿಕಾರಿಯಾಗಿ ಬಂದಿದ್ದಿರಿ ಬಹಳ ಸಂತೋಷದ ವಿಷಯ. ಆದರೆ ಬಹಳ ದಿನಗಳಿಂದ ನಮ್ಮ ನಂದಗಡ ಠಾಣೆಯಲ್ಲಿ ಸಿಬ್ಬಂದಿಯ ಕೊರತೆಯಿದ್ದು, ಇದರ ಬಗ್ಗೆ ತಾವು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ, ಠಾಣಾ ವ್ಯಾಪ್ತಿಯಲ್ಲಿರುವ ನಾವೆಲ್ಲರೂ ಸಹ ಮೇಲಾಧಿಕಾರಿಗಳಿಗೆ ಭೇಟಿಯಾಗಿ ಸಿಬ್ಬಂದಿ ಕೊರತೆಯ ಮಾಹಿತಿ ನೀಡುತ್ತೆವೆ. ಜೋತೆಗೆ ಠಾಣೆಯ ವ್ಯಾಪ್ತಿಯಲ್ಲಿ ಬಹಳಷ್ಟು ಹಳ್ಳಿಗಳಿದ್ದು ಸಾಕಗುವಷ್ಟು ಕರ್ತವ್ಯ ನಿರ್ವಹಿಸಲು ಸಿಬ್ಬಂದಿಯ ಕೊರತೆ ಬಹಳ ದಿನಗಳಿಂದ ಎದ್ದು ಕಾಣುತ್ತಿದೆ. ಇದರೊಂದಿಗೆ ನಾವೆಲ್ಲರೂ ಸೇರಿಕೊಂಡು ಬಹಳ ದಿನಗಳಿಂದ ಪೋಲಿಸ್ ಇಲಾಖೆಯಿಂದ ಒಳ್ಳೆಯ ಬಾಂಧವ್ಯ ಹೊಂದಿದ್ದು, ಗ್ರಾಮಗಳಲ್ಲಿ ಮಟ್ಟದಲ್ಲಿ ನಾವು ಸಹ ನಿಮ್ಮ ಕರ್ತವ್ಯ ಸಹಾಯ ಮಾಡುತ್ತೆವೆಂದು ಹೇಳಿದರು.
ಈ ಸಭೆಯಲ್ಲಿ ಲಿಂಗನಮಠ, ಕಕ್ಕೇರಿ, ರಾಮಾಪೂರ, ಬೀಡಿ, ನಂದಗಡ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಸ್ಲಿಂ ಮತ್ತು ಹಿಂದೂ ಸಮಾಜದ ಮುಖಂಡರು, ಗ್ರಾಪಂ ಸದಸ್ಯರು ಹಾಜರಿದ್ದರು.