ಗೋಕಾಕ:ಗೋ ಸಾಗಾಣಿಕೆ ಮತ್ತು ಅಕ್ರಮ ಗೋ ಹತ್ಯೆ ತಡೆಗಟ್ಟಲು ಬಜರಂಗದಳದ ಮನವಿ
ಗೋ ಸಾಗಾಣಿಕೆ ಮತ್ತು ಅಕ್ರಮ ಗೋ ಹತ್ಯೆ ತಡೆಗಟ್ಟಲು ಬಜರಂಗದಳದ ಮನವಿ
ಗೋಕಾಕ ಅ 20 : ರಾಜ್ಯದಲ್ಲಿ ದಿ.22 ರಂದು ಬಕ್ರೀದ್ ಹಬ್ಬ ಆಚರಿಸಲಾಗುತ್ತಿದ್ದು ಹಬ್ಬದ ನಿಮಿತ್ಯ ಅಕ್ರಮವಾಗಿ ಗೋ ಸಾಗಾಣಿಕೆ ಮತ್ತು ಅಕ್ರಮ ಗೋ ಹತ್ಯೆ ಮತ್ತು ವಧೆ ತಡೆಗಟ್ಟಬೇಕೆಂದು ಸೋಮವಾರದಂದು ಇಲ್ಲಿಯ ಬಜರಂಗದಳದ ಪದಾಧಿಕಾರಿಗಳು ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಕ್ರೀದ್ ಹಬ್ಬದ ನಿಮಿತ್ಯ ದೇಶಾದ್ಯಂತ ಅಕ್ರಮವಾಗಿ ಗೋ ಸಾಕಾಣಿಕೆ ಮತ್ತು ಅಕ್ರಮ ಗೋ ಹತ್ಯೆ ಕಾನೂನು ಬಾಹೀರವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಉಲ್ಲೇಖಿತ ಸರ್ಕಾರದ ಆದೇಶದಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶಿಸಿದೆ. ಮತ್ತು ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಸಮಿತಿಯೊಂದನ್ನು ನೇಮಕ ಮಾಡಿದೆ. ವಿಶ್ವ ಹಿಂದೂ ಪರಿಷತ್, ಬಜರಂಗದಳ ಇದನ್ನು ಸ್ವಾಗತಿಸುತ್ತಿದೆ. ಗೋಕಾಕ ತಾಲೂಕಿನಲ್ಲಿ ಹೆಚ್ಚಿನ ಮುಂಜಾಗೃತೆ ಕ್ರಮ ಕೈಗೊಳ್ಳಬೇಕು ಮತ್ತು ಯಾವುದೇ ಸಂದರ್ಭದಲ್ಲಿ ಗೋ ಹತ್ಯೆ ನಡೆಸದಂತೆ ನೋಡಿಕೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಜರಂಗದಳ ಬೆಳಗಾವಿ ವಿಭಾಗ ಸಹ ಸಂಯೋಜಕ ಸದಾಶಿವ ಗುದಗಗೋಳ, ಜಿಲ್ಲಾ ಸಂಯೋಜಕ ಲಕ್ಷ್ಮಣ ಮಿಶಾಳೆ, ಗುರು ಬೆನವಾಡ, ಸಂತೋಷ ಗೋಂಧಳಿ, ನಾಮದೇವ ಚೀಕೋರ್ಡೆ, ಮಂಜು ಘಮಾಣಿ ಸೇರಿದಂತೆ ಬಜರಂಗದಳದ ಕಾರ್ಯಕರ್ತರು ಇದ್ದರು.