ಮೂಡಲಗಿ:ವಿದ್ಯಾರ್ಥಿಗಳು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು : ಡಾ. ನಾಗೇಶ ನಾಯ್ಕ
ವಿದ್ಯಾರ್ಥಿಗಳು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು : ಡಾ. ನಾಗೇಶ ನಾಯ್ಕ
ಮೂಡಲಗಿ ಅ 20 : ರಾಜುಗಾಂಧಿಯವರು ಕಂಡ ಭಾರತದ ಏಳಿಗೆಯ ಜೋತೆಗೆ ಎಲ್ಲರೂ ಸದ್ಬಾವದಿಂದ ಒಗ್ಗಟ್ಟಿನಿಂದ ದುಡಿಯಬೇಕು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಭಾವೈಕ್ಯತೆಯ ಜೋತೆಗೆ ತಮ್ಮ ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ನಮ್ಮ ದೇಶವು ಆಧುನಿಕತೆಯ ಜೋತೆಗೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಹೊಂದಿದ ರಾಷ್ಟ್ರವಾಗಲು ರೂಪಗೊಳ್ಳಬೇಕಾಗಿದೆ ಎಂದು ಅರಬಾಂವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಡೀನ್‍ರವರು ಡಾ. ನಾಗೇಶ ನಾಯ್ಕ ಹೇಳಿದರು.
ಅವರು ಅರಬಾಂವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸೋಮವಾರ ಸಂಜೆ ಜರುಗಿದ ಸದ್ಭಾವನ ದಿನಾಚರಣೆಯನ್ನು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಹಪ್ರಾದ್ಯಾಪಕ ಡಾ. ರಾಘವೇಂದ್ರ ಮಾತನಾಡಿ, ನಮ್ಮ ದೇಶದಲ್ಲಿ ಎಲ್ಲರೂ ಸದ್ಬಾವತೆಯಿಂದ ಜಾತಿ, ಮತ, ಪಂಥ ಎಲ್ಲ ಬಿಟ್ಟು ಭಾರತಾಂಬೆಯ ಏಳ್ಗಿಗೆ ಶ್ರಮಿಸಬೇಕು ಎಂದು ಹೇಳಿದರು.
ಪ್ರಾದ್ಯಾಪಕ ಡಾ. ಸಿ.ಎನ್ ಹಂಚಿನಮನಿ ಅವರು ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇಧಭಾವವಿಲ್ಲದೇ ಭಾರತದ ಎಲ್ಲ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಅಲ್ಲದೇ ವೈಯಕ್ತಿಕವಾಗಿಯಾಗಲೀ ಅಥವಾ ಸಾಮೂಹಿಕವಾಗಿಯಾಗಲೀ ನಮ್ಮಲ್ಲಿರುವ ಎಲ್ಲ ಬೇಧಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇನೆಂದು ಸಹ ಪ್ರತಿಜ್ಞೆ ಮಾಡುತ್ತೇನೆ. ಎಂದು ಪ್ರತಿಜ್ಞೆ ವಿಧಿ ಯನ್ನು ಬೋದಿಸಿದರು.
ವಿದ್ಯಾರ್ಥಿಯಾದ ಕುಮಾರ ರುಷಿಕೇಶ ಪಾಟೀಲ ರವರು ರಾಜೀವ ಗಾಂಧಿರವರ ಬಗ್ಗೆ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕಾಧಿಕಾರಿಗಳಾದ ಡಾ. ಎಸ್.ಜಿ. ಪ್ರವೀಣಕುಮಾರ, ಡಾ. ದಿಲೀಕುಮಾರ ಮಸೂತಿ, ಡಾ. ಮಹಾಂತೇಶ ನಾಯ್ಕರವರು ಹಾಗೂ ಎಲ್ಲ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಮತ್ತು ಕಾರ್ಮಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ವಿದ್ಯಾರ್ಥಿ ಸುನೀಲಕುಮಾರ ನಿರೂಪಿಸಿದ. ಕುಮಾರಿ ಐಶ್ವರ್ಯ ಮತ್ತು ಲಕ್ಷ್ಮೀ ಜ್ಯೋತಿ ಖಾನ್ ಪ್ರಾಥಿಸಿದರು. ವಿದ್ಯಾರ್ಥಿನಿ ವೈಷ್ಣವಿ ಕುಲಕರ್ಣಿ ವಂದಿಸಿದರು.